ಮಲ್ಟಿಫ್ಲೆಕ್ಸ್ ಸವಲತ್ತು, ಕಡಿಮೆ ರೇಟು ಸುಚಿತ್ರಾ ಥಿಯೇಟರು !

ಮಂಗಳೂರಿನ ಕೆಎಸ್‌ರಾವ್ ರಸ್ತೆಯಲ್ಲಿರುವ ಖ್ಯಾತ ಸಿನಿಮಾ ಮಂದಿರಗಳಲ್ಲಿ ಒಂದಾಗಿರುವ ಸುಚಿತ್ರಾ ಚಿತ್ರಮಂದಿರ ನವೀಕೃತಗೊಂಡು ಏ.26 ರಂದು ಒಂದು ವರ್ಷವನ್ನು ಪೂರೈಸಿದೆ.
ಇಡೀ ಜಿಲ್ಲೆಯ ಸಿನಿಮಾ ಮಂದಿರಗಳಲ್ಲಿಯೇ ವಿಭಿನ್ನ ತಾಂತ್ರಿಕ ವ್ಯವಸ್ಥೆ ಹಾಗೂ ಕಡಿಮೆ ದರದಲ್ಲಿ ಪ್ರೇಕ್ಷಕರಿಗೆ ಮಲ್ಟಿ ಫ್ಲೆಕ್ಸ್ ಮಟ್ಟದ ಮನರಂಜನೆ ನೀಡುವ ಕೆಲಸವನ್ನು ಸುಚಿತ್ರಾ ಸಿನಿಮಾ ಮಂದಿರ ನೀಡುತ್ತಾ ಬಂದಿದೆ.
ನವೀಕೃತಗೊಂಡ ಬಳಿಕ ಸುಚಿತ್ರಾ ಸಿನಿಮಾ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಈಗ ಏರುಗತಿಯಲ್ಲಿದೆ. ಯುವಜನತೆಯ ಫೇವರಿಟ್ ಸಿನಿಮಾ ಮಂದಿರ ಎನ್ನುವ ಹೆಗ್ಗಳಿಕೆಯ ಜತೆಗೆ ಫ್ಯಾಮಿಲಿ ಆಡಿಯನ್ಸ್‌ಗೂ ಈ ಥಿಯೇಟರ್ ಇಷ್ಟವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಬಜೆಟ್ ಆಧಾರಿತ ಸಿನಿಮಾ ಮಂದಿರ ಎನ್ನಬಹುದು.
ಕಾರಣ ಇಲ್ಲಿ ಟಿಕೇಟು ದರದಲ್ಲಿಯೂ ನಗರದ ಮಲ್ಟಿಫ್ಲೆಕ್ಸ್ ಟಿಕೇಟ್ ದರಕ್ಕಿಂತ ಕಡಿಮೆಯಿದೆ. ಮುಖ್ಯವಾಗಿ ಇಲ್ಲಿ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕೋಲ್ಡ್ ಡ್ರಿಂಕ್ಸ್, ಪಾಪ್ ಕಾರ್ನ್‌ಗಳ ದರನೂ ಬಹಳಷ್ಟು ಕಡಿಮೆ ಎನ್ನುತ್ತಾರೆ ಸುಚಿತ್ರಾ ಸಿನಿಮಾ ಮಂದಿರದ ಎಂಜಿನಿಯರ್ ಸುಧೀಂದ್ರ ಅವರು.
806 ಸೀಟುಗಳನ್ನು ಹೊಂದಿರುವ ಸುಚಿತ್ರಾ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್‌ಗೆ ಯಾವುದೇ ದರವನ್ನು ವಿಧಿಸಲಾಗುವುದಿಲ್ಲ. ಜತೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಇಲ್ಲಿ ಪ್ರೇಕ್ಷಕರು ಜಾಸ್ತಿಯಾಗುತ್ತಿದ್ದಾರೆ. ಅದರಲ್ಲೂ ಕಡಿಮೆ ದರದಲ್ಲೂ ಹವಾನಿಯಂತ್ರಿತ ವ್ಯವಸ್ಥೆಯ ಜತೆಗೆ ಸಿನಿಮಾ ನೋಡುವ ಅನುಭವವಂತೂ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ ಎನ್ನುವುದು ಅವರ ಮಾತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ನಾರಾಯಣ್, ಮ್ಯಾನೇಜರ್ ಸುಬ್ರಾಯ ಪೈ ಅವರ ಉಸ್ತುವಾರಿಯಲ್ಲಿ ಸುಚಿತ್ರಾ ಸಿನಿಮಾ ಮಂದಿರ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಬೆಂಗಳೂರಿನ ಡಿ.ಎನ್.ಗೋಪಾಲಕೃಷ್ಣ ಅವರು ಸ್ಥಾಪಿಸಿರುವ ಲಕ್ಷ್ಮೀ ನಾರಾಯಣ ಎಂಟರ್ ಪ್ರೈಸಸ್ ಸುಚಿತ್ರಾ, ಪ್ರಭಾತ್ ಚಿತ್ರಮಂದಿರವನ್ನು ನಡೆಸುತ್ತಿದೆ.
Suchitra And Prabhath Theatre in Ks Rao Road, Mangalore is a top player in the category Cinema Halls in the Mangalore

Share