ಸರಕಾರಿ ಪ್ರಾಥಮಿಕ ಶಾಲೆಗೆ ‘ತುಳು’ ಕಲ್ಚರಲ್ ಟಚ್ !

ಸರಕಾರಿ ಪ್ರಾಥಮಿಕ ಶಾಲೆಗೆ ‘ತುಳು’ ಕಲ್ಚರಲ್ ಟಚ್ !

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ನೋಡಿದ ಬಹಳಷ್ಟು ಮಂದಿಗೆ ಬೇಸಿಕಲಿ ಈ ಚಿತ್ರದ ಚಿತ್ರೀಕರಣವಾದ ಶಾಲೆ ಹೇಗಿರಬಹುದು ಎನ್ನುವ ಕುತೂಹಲ ಬಂದಿರಬಹುದು. ಚಿತ್ರತಂಡವೇನೂ ಈ ಶಾಲೆಯ ಉದ್ಧಾರಕ್ಕೆ ಏನಾದರೂ ಮಾಡಿದೆಯಾ ಎನ್ನುವ ಕೌತುಕದ ಪ್ರಶ್ನೆ ಬಹಳಷ್ಟು ಮಂದಿಯಲ್ಲಿ ಮೂಡಿರಬಹುದು.
ಇದಕ್ಕೆಲ್ಲ ಉತ್ತರವನ್ನು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶಾಲೆಯ ಚಿತ್ರಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಸಂಪಾದಿಸಿಕೊಂಡಿದ್ದಾರೆ.
ಚಿತ್ರೀಕರಣಗೊಂಡ ಶಾಲೆಯ ಗೋಡೆಯಲ್ಲಿ ಈಗ ತುಳುನಾಡಿನ ಸಂಸ್ಕೃತಿ, ಕಲೆ ಜತೆಗೆ ಇಲ್ಲಿನ ಇತಿಹಾಸದ ತುಣುಕುಗಳ ದರ್ಶನವನ್ನು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮಾಡಿಸುವ ಕೆಲಸಕ್ಕೆ ಇಳಿದು ಬಿಟ್ಟು ಸಕ್ಸಸ್ ಆದ ಚಿತ್ರಗಳನ್ನು ರಿಷಬ್ ಶೆಟ್ಟಿ ತಮ್ಮ ಫೇಸ್ ಬುಕ್‌ನಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.

Share