ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ ಗುರುವಾರ ಮಧ್ಯಾಹ್ನ ಬಸ್‌ಗಳ ತಾಣದ ಬದಲಾಗಿ ಊಟೋಪಚಾರದ ತಾಣವಾಗಿ ಬದಲಾಗಿತ್ತು.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಮೀನು ಮಾರಾಟದ ಮಹಿಳೆಯರು, ಬಸ್ ಸಿಬ್ಬಂದಿಗಳು ಹೀಗೆ ಸ್ಟೇಟ್ ಬ್ಯಾಂಕ್ ಸುತ್ತಮುತ್ತ ಇರುವ 1250 ಕ್ಕೂ ಅಧಿಕ ಮಂದಿ ಊಟಕ್ಕೆ ಹಾಜರಾಗಿದ್ದರು. ಅನ್ನ, ಸಾರು, ಸಾಂಬಾರು, ಪಲ್ಯ,ಉಪ್ಪಿನ ಕಾಯಿ, ಪಾಯಸದಂತಹ ವಸ್ತುಗಳು ಊಟದಲ್ಲಿ ಕಾಣಿಸಿಕೊಂಡಿತು.
ಮಧ್ಯಾಹ್ನ 12.30ರಿಂದ 2.30 ರ ವರೆಗೆ ನಡೆದ ಉಚಿತ ಊಟೋಪಾಚಾರ ಸೇವೆ ನಡೆಯಿತು. ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಕಿಶೋರ್ ಕುಮಾರ್ ಶಕ್ತಿನಗರ, ಗುಣಕರ ಪೂಜಾರಿ ಪೆರ್ಮಂಕಿ ಸೇರಿದಂತೆ ಹತ್ತಾರು ಬಸ್ ಏಜೆಂಟ್‌ಗಳು ಈ ಕಾರ‍್ಯದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.