Author: Team Kudla City

ಪಾಕೆಟ್‌ಮನಿಯಿಂದ ‘ಹನಿ’ಯ ಪರಿಸರ ಹೋರಾಟ !

ಒಂದಲ್ಲ ಎರಡಲ್ಲ ಭರ್ತಿ 3 ವರ್ಷದಲ್ಲಿ 3೦೦ಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿನಿ ಹನಿ ಎಚ್. ಆರ್ ಅವರು ಇಂತಹ ಕೆಲಸವನ್ನು ಬರೀ ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಇಟ್ಟುಕೊಂಡು ರಜಾ ದಿನಗಳಲ್ಲಿ ಮಾಡುತ್ತಿದ್ದಾರೆ.

ಪರಿಸರದ ಮೇಲೆ ಪ್ರೀತಿ ಹುಟ್ಟಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾರು ಕೂಡ ಪರಿಸರವನ್ನು ಪ್ರೀತಿಸಬಹುದು, ಕಾಳಜಿಯನ್ನು ತೋರಿಸಬಹುದು ಎನ್ನುವುದಕ್ಕೆ ಅವರೇ ಬೆಸ್ಟ್ ಉದಾಹರಣೆ. ಮುಡಿಪಿನ ಜವಾಹರ್ ನವೋದಯ ವಿದ್ಯಾಲಯದ 7 ನೇ ತರಗತಿಯಲ್ಲಿ ಓದುತ್ತಿರುವ ಹನಿಗೆ ಪರಿಸರದ ಮೇಲೆ ವಿಶೇಷ ವ್ಯಾವೋಹ.

ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಅವಳು ತನ್ನದೇ ಗ್ರೀನ್ ವಾರಿಯರ್ಸ್ ತಂಡ ಕಟ್ಟಿಕೊಂಡು ಜಪ್ಪಿನಮೊಗರು, ಕಡೆಕಾರು, ಚಿಕ್ಕಮಗಳೂರು, ಬಾಳೆಹೊನ್ನೂರು ಹೀಗೆ ಹತ್ತಾರು ಕಡೆಯಲ್ಲಿ 3೦೦ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾ ಹಸಿರು ಉಳಿಸಿ ಎನ್ನುವ ಅಭಿಯಾನವನ್ನು ಯಾರಿಗೂ ಹೇಳದೇ ಹುಟ್ಟುಹಾಕಿದ್ದಾರೆ.

ಅದು ಕೂಡ ತನ್ನ ಶಾಲಾ ರಜಾ ದಿನಗಳಲ್ಲಿ ಎನ್ನುವುದು ವಿಶೇಷ. ಮಕ್ಕಳಿಗೆ ರಜೆ ಎಂದಾಕ್ಷಣ ಪ್ರವಾಸಕ್ಕೆ ಹೋಗುವುದು, ಆಟವಾಡುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿಯೇ ಮಗ್ನರಾಗುವುದು ಕಾಮನ್. ಆದರೆ ಹನಿ ಕೊಂಚ ಭಿನ್ನ ಹುಡುಗಿ ಅವಳಿಗೆ ರಜಾ ದಿನಗಳಲ್ಲಿ ಪರಿಸರದ ಬಗ್ಗೆಯೇ ಹೆಚ್ಚು ಕಾಳಜಿ ಬರುತ್ತದೆ.

ಉತ್ತಮ ಗುಣಮಟ್ಟದ ಶಿಕ್ಷಣದ ತಾಣ ಕಾವೂರು ಬಿಜಿಎಸ್

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ 2000ರಲ್ಲಿ ಕಾವೂರಿನ ಗಾಂಧಿ ನಗರದಲ್ಲಿ ಮೊಗ್ಗಾಗಿ ಜೀವತಳೆದ ಬಿಜಿಎಸ್ ಶಿಕ್ಷಣ ಕೇಂದ್ರ ಇದೀಗ ಕರಾವಳಿಯ ಶಿಕ್ಷಣ ಲೋಕವೆಂಬ ಪುಷ್ಪೋದ್ಯಾನದಲ್ಲಿ ಘಮಘಮಿಸುವ ಕುಸುಮ.
ಪ್ರಸ್ತುತ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮುಂದಾಳತ್ವದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಅನನ್ಯತೆಯನ್ನು ಅದು ವರ್ಷ ವರ್ಷವೂ ದಾಖಲೆಯ ಫಲಿತಾಂಶದ ಮೂಲಕ ಸಾಬೀತುಪಡಿಸುತ್ತಿದೆ.
ಬಿಜಿಎಸ್‌ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ
http://www.bgsec.net/

ಮನೆಯ ಸುಂದರ ಬಾಲ್ಕನಿಗೊಂದು ಇರಲಿ ‘ನೆಟ್’

ಸುಂದರವಾದ ಮನೆ ಕಟ್ಟಿಕೊಂಡಿರುತ್ತೀರಿ. ಇದರ ಜತೆಗೆ ಮನೆಗೆ ಸುಂದರವಾದ ಬಾಲ್ಕನಿ ಇರುತ್ತದೆ.
ಪುಟಾಣಿ ಮಕ್ಕಳು ಇದ್ದರಂತೂ ಬಾಲ್ಕನಿ ವಿಚಾರದಲ್ಲಿ ಸೇಫ್ಟಿ ಅಗತ್ಯ. ಇದರ ಜತೆಗೆ ಬಾಲ್ಕನಿಯಲ್ಲಿ ಹಕ್ಕಿಗಳು ಬಂದು ಗಲೀಜು ಮಾಡುವುದು ಸೇರಿದಂತೆ ನಾನಾ ಸಮಸ್ಯೆಗಳು ಬಾಲ್ಕನಿ ಇದ್ದವರಿಗೆ ಮಾತ್ರ ಗೊತ್ತು ಬಿಡಿ.

ಇಂತಹ ಬಾಲ್ಕನಿಗೆ ಸುಂದರವಾದ ನೆಟ್‌ಗಳನ್ನು ಅಳವಡಿಸುವ ಕೆಲಸವನ್ನು ಮಂಗಳೂರಿನಲ್ಲಿಯೇ ಮಾಡಲಾಗುತ್ತಿದೆ. ಒಂದು ಕರೆ ಮಾಡಿದರೆ ನಿಮ್ಮ ಊರಿಗೆ ಬಂದು ನಿಮ್ಮ ಅಗತ್ಯತೆಗೆ ತಕ್ಕಂತಹ ನೆಟ್‌ಗಳನ್ನು ಅಳವಡಿಸಿಕೊಂಡು ಹೋಗುತ್ತಾರೆ.

ಕಡಿಮೆ ದರದಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ನೆಟ್‌ಗಳಿಗೆ ಇವರನ್ನು ಸಂಪರ್ಕಿಸಿ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನ ನಾಗರಾಜ್ ಅವರ ಸಂಪರ್ಕ ಸಂಖ್ಯೆ 8453356106 ಹಾಗೂ 6362978916.

ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ

ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತ‌ನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ‌ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಕುಡ್ಲದ ಮೋಡಗಳು ಮಳೆ ಸುರಿಸೋದಿಲ್ಲ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲಮಳೆಯಾಗುವ ಸಾಧ್ಯತೆಗಳಿಲ್ಲ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಭಾಗಶ: ಮೋಡ ಕವಿದ ವಾತಾವರಣ ನೆಲೆಸಿದರೂ ರಾತ್ರಿಯಾಗುತ್ತಿದ್ದಂತೆ ಮೋಡ ಚದುರಿ ಹೋಗುತ್ತಿದೆ. ಫೋನಿ ಚಂಡಮಾರುತದ ಮಳೆ ನಿರೀಕ್ಷೆ ಕೂಡ ಜಿಲ್ಲೆಯ ಮಟ್ಟಿಗೆ ಹುಸಿಯಾಗಿದೆ. ಈ ನಡುವೆ ಚಂಡಮಾರುತ ಬಳಿಕ ಇಳಿಕೆಯಾದ ತಾಪಮಾನ ಜಿಲ್ಲೆಯಲ್ಲಿ ಮತ್ತೆ ಏರುತ್ತಿದೆ.