Tagged: mangalorecity

ದೇಶದಲ್ಲಿಯೇ ಅಪೂರ್ವ ಕುಡ್ಲದ ಮಳೆ ರಸ್ತೆ

ದೇಶದ ಯಾವುದೇ ನಗರದಲ್ಲೂ ಮಳೆ ಬಂದಾಗ ನೀರು ರಸ್ತೆಯ ಬದಿಯಲ್ಲಿರುವ ಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಮಳೆ ನೀರು ರಸ್ತೆಯಲ್ಲೇ ಸಾಗುತ್ತದೆ. ಸ್ಮಾರ್ಟ್ ಸಿಟಿ ಮಂಗಳೂರು ಮಳೆ ರಸ್ತೆ ನೋಡುವುದು ಚೆಂದ ಸಮಸ್ಯೆಗಳು ಮಾತ್ರ ಬಹಳವಿದೆ.

ಹಲಸಿನ ಹಣ್ಣಿನಲ್ಲಿ ಸೋಪ್ ರೆಡಿ

ಕಳೆದ ಕೆಲವು ವರ್ಷಗಳಿಂದೀಚೆಗೆ ಹಲಸು ಪ್ರಿಯರು ದೇಶಾದ್ಯಂತ ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದವರಾದ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಹರೀಶ್, ತಾವೇ ಸ್ವತಃ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಪ್ರಯೋಗ ಮಾಡಿಕೊಂಡು ಸೋಪ್ ತಯಾರಿಸಿದ್ದಾರೆ. ಸೋಪ್ ತಯಾರಿಸುವಾಗ ಹಲಸಿನ ಹಣ್ಣು, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆ ಬಳಸಿದ್ದಾರೆ. ಹಲಸಿನ ಬೀಜ ಬಳಸಿಲ್ಲ. ಈ ಸೋಪ್‌ನಲ್ಲಿ ವಿಟಮಿನ್ ಸಿ ಮತ್ತು ಡಿ ಇದ್ದು, ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಅತ್ಯುತ್ತಮ ಮದ್ದು ಎನ್ನುವುದು ಅವರ ಮಾತು.

ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಪ್ಲ್ಯಾನ್ ಇಟ್ಟುಕೊಂಡಿರುವ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ತಾನು ತಯಾರಿಸಿದ ಸೋಪ್‌ಗೆ ‘ಝ್ಯ’ ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ.

ಮಂಗಳೂರು ವಿವಿ: ಗಡಿನಾಡ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ

ಹೊರ ರಾಜ್ಯದಲ್ಲಿ1ರಿಂದ 10ರವರೆಗೆ ಪ್ರೌಢ ಶಿಕ್ಷಣ ವನ್ನು ಪಡೆದಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೇ.೫ಮೀಸಲಾತಿ ನೀಡಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗಡಿನಾಡು ಮತ್ತು ರಾಜ್ಯದ ಹೊರಗೆ ಕನ್ನಡ ಮಾಧ್ಯಮ ದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ಸೀಟುಗಳನ್ನು ಕಾಯ್ದಿರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾ ರದ ಸುತ್ತೋಲೆಯ ಪ್ರಕಾರ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಲು ನಿರ್ಧರಿ ಸಲು ತೀರ್ಮಾನಿಸಿದೆ ಎಂದು ಕುಲಪತಿ ಪಿ.ಎಸ್. ಯಡ ಪಡಿತ್ತಾಯ ತಿಳಿಸಿದ್ದಾರೆ.

ಪವಾಡ ಪುರುಷ ಸಂತ ಅಂತೋನಿ ಹಬ್ಬದ ಸಂಭ್ರಮ

ಕ್ರೈಸ್ತ ಸಮುದಾಯದ ಧಾರ್ಮಿಕ ನಂಬಿಕೆಯಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಸಂತರ ಪಟ್ಟಿಯಲ್ಲಿ ಸಂತ ಅಂತೋನಿ ಅವರ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ವಿಶೇಷ ಎಂದರೆ ಮಂಗಳೂರು ಧರ್ಮಪ್ರಾಂತ್ಯದ ಬನ್ನೂರು, ಅಲ್ಲಿಪಾದೆ, ನಾರಾವಿ, ಉಜಿರೆ, ಕೂಳೂರು, ಪೆರ್ಮಾಯಿ ಚರ್ಚ್‌ಗಳ ಜತೆಗೆ ಮಿಲಾಗ್ರಿಸ್‌ನಲ್ಲೂ ಇವರ ಪುಣ್ಯ ಕ್ಷೇತ್ರವಿದೆ. ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಕೂಡ ಪವಾಡ ಪುರುಷ ಸಂತ ಅಂತೋನಿ ಅವರ ಭಕ್ತಿಗೆ ಪೂರಕವಾದ ಸಾಕ್ಷ್ಯಗಳು.
ವಿಶೇಷ ಎಂದರೆ ಸಂತ ಅಂತೋನಿ ಅವರ ಹಬ್ಬ ಪ್ರತಿ ವರ್ಷನೂ ಮಳೆಗಾಲದಲ್ಲಿಯೇ ಬರುತ್ತದೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ.
ಪವಾಡ ಪುರುಷನ ಕೃಪೆಗೆ ಪಾತ್ರರಾದರೆ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಭಕ್ತ ಸಮೂಹ ಹಬ್ಬವನ್ನು ಜೂ.೧೩ರಂದು ಆಚರಿಸುತ್ತಾರೆ.

ಕುಡ್ಲದ ಟ್ಯಾಲೆಂಟ್ ಹುಡುಗರ ಸೈಕಲ್

ಮುಲ್ಲರಪಟ್ಣಾದ ಮೂವರು ಹುಡುಗರು ತಯಾರಿಸಿದ ಮೂರು ಚಕ್ರದ ಸೈಕಲ್ ವಿಶ್ವದ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೌದು ಹೈಸ್ಕೂಲ್ ಹಾಗೂ ಪ್ರೈಮರಿ ಓದುತ್ತಿರುವ ಮೂವರು ಸ್ನೇಹಿತರು ಪ್ರೌಢಶಾಲೆಯಲ್ಲಿ ಸಿಗುವ ಸೈಕಲ್‌ಗೆ ಹೊಸತೊಂದು ರೂಪ ನೀಡಿದ್ದು ಎಲ್ಲರನ್ನೂ ಆಕರ್ಷಿಸುತ್ತಿದೆ.

ಮುಲ್ಲರ್‌ಪಟ್ಣಾ ಅಜಾದ್ ನಗರದ ಉರ್ದು ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಆಶಿಮ್, ನಿಝಾಮುದ್ದೀನ್ ಹಾಗೂ ಆರನೇ ತರಗತಿಯ ಸಿನಾನ್ ಈ ತ್ರಿಬಲ್ ಚಕ್ರದ ಸೈಕಲ್ ರೂವಾರಿಗಳು.

ಒಂದು ಸೈಕಲ್‌ನ ಹಿಂದಿನ ಟೈರ್, ಚೈನ್ ಕಳಚಿ ಮತ್ತೊಂದು ಸೈಕಲ್‌ನ ಮುಂದಿನ ಗಾಲಿಯನ್ನು ಜೋಡಿಸಿ ಈ ಸೈಕಲ್ ನೋಡುವಾಗ ಒಂದು ರೀತಿ ವಿಚಿತ್ರ ಅನಿಸುತ್ತದೆ.

ವಿಶೇಷವಾದ ಐಡಿಯಾದ ಕುರಿತು ಮಕ್ಕಳು ಹೇಳುವ ಮಾತು ಹೀಗಿದೆ: ಆಟ ಆಡುತ್ತಿರುವಾಗ ಒಂದು ಸೈಕಲ್ ಪಂಚರ್ ಆಯ್ತು ಪಂಚರ್ ಹಾಕ್ಲಿಕೆ ಗೊತ್ತಿರಲಿಲ್ಲ. ನಾನು ಸುಮ್ಮನೆ ಮೂರು ಚಕ್ರದ ಸೈಕಲ್ ಮಾಡುವ ಅಂತ ಹೇಳಿದೆ. ಅದಕ್ಕೆ ಆಶಿಮ್, ನಿಝಾಮ್ ಮನೆಯಿಂದ ಸ್ಪಾನರ್ ತಂದು ಹೀಗೆ ಮಾಡಿದ್ರು ಅಂತಾನೆ ಆರನೇ ತರಗತಿಯ ಸಿನಾನ್.