Tagged: water

ನೀರನ್ನು ಹಿಡಿಯುವ ಬಿಷಪ್ ರ ಜಲ ಬಂಧನ್

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೀರಿನ ಕಾಳಜಿಗೆ ಮತ್ತೊಂದು ಹೊಸ ಸೇರ್ಪಡೆ ಯಾಗಿದೆ. ಜಲಬಂಧನ್ ಎನ್ನುವ ಯೋಜನೆ ಯ ಮೂಲಕ ಮಳೆ ನೀರನ್ನು ಹಿಡಿಯುವ ಜತೆಯಲ್ಲಿ ಜಿಲ್ಲೆಯ ಅಂರ್ತಜಲ ವೃದ್ಧಿ ಕಡೆಗೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ಮನಸ್ಸು ಮಾಡಿದೆ.

ಇದರ ಅಡಿಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಚರ್ಚ್ ಗಳ ಜತೆಗೆ ಅದರಡಿಯಲ್ಲಿ ಕೆಲಸ ಮಾಡುವ ಸಂಸ್ಥೆ ಗಳಲ್ಲಿ ಮಳೆಗಾಲದಲ್ಲಿ‌ ನೀರನ್ನು ಹಿಡಿಯುವ ಕೆಲಸ ಆರಂಭವಾಗಲಿದೆ. ಇದಕ್ಕೆ ಜಲಯೋಧರ ತಂಡ ಸಾಥ್ ಕೊಡಲಿದೆ.

ಹೆಗ್ಗಡೆಯವರು ಬರೆದ ಶಾಕಿಂಗ್ ಪತ್ರ!

ಸ್ವಾಮಿ ದಯಮಾಡಿ ಧರ್ಮಸ್ಥಳಕ್ಕೆ ಸಧ್ಯಕ್ಕೆ ಬರಬೇಡಿ. ಇಲ್ಲಿ‌ ನೀರಿನ ಸಮಸ್ಯೆ ತೀವ್ರವಾಗಿದೆ. ನಿಮ್ಮ ಪ್ರವಾಸ ಮುಂದಕ್ಕೆ ಹಾಕಿಬಿಡಿ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಯನ್ನು ಪತ್ರದ ಮೂಲಕ ಬಿಚ್ಚಿಟ್ಟವರು ಧರ್ಮಸ್ಥಳದ‌ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಈ ಮೂಲಕ ಕುಡ್ಲ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಸಮಸ್ಯೆ ಯ ಚಿತ್ರಣ ಈ ಪತ್ರದ ಮೂಲಕ ಅನಾವರಣ ಗೊಂಡಿತು.

ಕುಡ್ಲದ ಮೋಡಗಳು ಮಳೆ ಸುರಿಸೋದಿಲ್ಲ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲಮಳೆಯಾಗುವ ಸಾಧ್ಯತೆಗಳಿಲ್ಲ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಭಾಗಶ: ಮೋಡ ಕವಿದ ವಾತಾವರಣ ನೆಲೆಸಿದರೂ ರಾತ್ರಿಯಾಗುತ್ತಿದ್ದಂತೆ ಮೋಡ ಚದುರಿ ಹೋಗುತ್ತಿದೆ. ಫೋನಿ ಚಂಡಮಾರುತದ ಮಳೆ ನಿರೀಕ್ಷೆ ಕೂಡ ಜಿಲ್ಲೆಯ ಮಟ್ಟಿಗೆ ಹುಸಿಯಾಗಿದೆ. ಈ ನಡುವೆ ಚಂಡಮಾರುತ ಬಳಿಕ ಇಳಿಕೆಯಾದ ತಾಪಮಾನ ಜಿಲ್ಲೆಯಲ್ಲಿ ಮತ್ತೆ ಏರುತ್ತಿದೆ.

ಮಂಗಳೂರಿಗೆ ಇನ್ನು ನಾಲ್ಕೇ ದಿನ ನೀರು !

ಜಲಕ್ಷಾಮದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಜಾರಿಗೊಳಿಸಿದ ನೀರು ರೇಶನಿಂಗ್ ಮೇ 16ರಿಂದ ಮತ್ತೆ ಪರಿಷ್ಕರಣೆಯಾಗಲಿದೆ.
ಇದೀಗ 4 ದಿನಗಳ ಕಾಲ ಸರಬರಾಜು ಮಾಡುತ್ತಿರುವ ನೀರನ್ನು ಯಾವುದೇ ಬದಲಾವಣೆಯಿಲ್ಲದೆ 4 ದಿನಗಳ ಕಾಲ ನೀಡಿ 2 ದಿನ ಸ್ಥಗಿತಗೊಳಿಸುವ ನೀರನ್ನು 4 ದಿನಗಳಿಗೆ ಏರಿಸಲಾಗಿದೆ.
ಮೇ 16 ರಂದು ಬೆಳಗ್ಗೆ 6 ಗಂಟೆಯಿಂದ ಮೇ 20 ರಂದು ಬೆಳಗ್ಗೆ 6 ಗಂಟೆ ವರೆಗೆ ನಿರಂತರ 96 ತಾಸು ನೀರು ಪೂರೈಕೆ ಇರುವುದು. ಮೇ 20 ರಂದು ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆ ವರೆಗೆ ಸತತ 96 ತಾಸು ನೀರು ಸ್ಥಗಿತಗೊಳ್ಳಲಿದೆ. ಜೂನ್ 1ರ ವರೆಗೆ ಪರಿಷ್ಕೃತ ರೇಶನಿಂಗ್ ಮುಂದುವರಿಯಲಿದೆ.

ಮಳೆ ಬಂದ್ರೆ ಮಾತ್ರ ಕುಡ್ಲ ಸೇಫ್ ಮಾರಾಯ್ರೆ!

ಮಂಗಳೂರಿನ ಜನತೆಗೆ ಜೀವ ಜಲ‌ ಸಿಗುತ್ತಿರುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ‌ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಮಂಗಳೂರಿನಲ್ಲಿ ನೀರಿನ‌ ರೇಶನಿಂಗ್ ನಡೆದರೂ ಕೂಡ ಡ್ಯಾಂ ನಲ್ಲಿ ನೀರಿನ ಇಳಿಕೆ ಮುಂದೆ ಸಾಗುತ್ತಿದೆ.

ಒಂದು ಲೆಕ್ಕಾಚಾರ ದ ಪ್ರಕಾರ ಇನ್ನು ಒಂದು ವಾರದಲ್ಲಿ ಮಳೆ ಬರದೇ ಹೋದರೆ ಕುಡ್ಲದ ಜನತೆಗೆ ಈ ಬಾರಿ ನೀರಿನ ಮಹತ್ವದ ಕುರಿತು ಅರಿವಾಗುವ ಜತೆಯಲ್ಲಿ ನೀರಿಗಾಗಿ ಹೊಡೆದಾಡುವ ಸ್ಥಿತಿ ನಿರ್ಮಾಣ ವಾಗಲಿದೆ. ಕಾರಣ ಇನ್ನು ಡ್ಯಾಂ ನಲ್ಲಿ ಹತ್ತರಿಂದ ಹದಿನೈದು ದಿನಕ್ಕೆ ಮಾತ್ರ ನೀರು ಉಳಿದಿದೆ.