Tagged: tulunadu

ಕುಡ್ಲದ ಈ ಕಾಲೇಜಿನಲ್ಲಿ ಅಷ್ಟಮಿ ಹುಲಿವೇಷ ಗ್ಯಾರಂಟಿ !

ಕರಾವಳಿಗೆ ಹುಲಿವೇಷ ಹೊಸತು ಏನೂ ಅಲ್ಲ. ಆದರೆ ಅಷ್ಟಮಿಗೆ ಇಲ್ಲಿನ ವಿದ್ಯಾರ್ಥಿಗಳೇ ಹುಲಿವೇಷ ಹಾಕಿಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಹೊಸ ದಾಖಲೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಹೌದು. ಇದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮಾತು.

ಬಲೆ ರೆಡಿ ಇನ್ನು ಪರ್ಸಿನ್ ಮೀನುಗಾರಿಕೆ ಆರಂಭ

ಯಾಂತ್ರೀಕೃತ ಮೀನುಗಾರಿಕೆ ಸಮುದ್ರ ಪೂಜೆಯ ಬಳಿಕ ಸೋಮವಾರದಿಂದ ಪರ್ಸಿನ್ ಬೋಟುಗಳು ಮೀನುಗಾರಿಕೆ ಇಳಿಯಲಿದೆ. ಈಗಾಗಲೇ ಲಾರಿಗಳಿಗೆ ಬಲೆಯನ್ನು ತುಂಬಿಸುವ ಕೆಲಸ ಪೂರ್ಣಗೊಂಡಿದೆ. ಸೋಮವಾರ (august 19) ಧಾರ ಮೂಹೂರ್ತ ಬಳಿಕ ಮೀನುಗಾರಿಕೆಗೆ ಪರ್ಸಿನ್ ಬೋಟುಗಳು ಇಳಿಯಲಿದೆ.

ತುಳುವರು ಆಟಿ ಕಷಾಯ ಯಾಕೆ ಕುಡಿಯುತ್ತಾರಾ ಗೊತ್ತಾ?

ತುಳುನಾಡಿನ ಜನಕ್ಕೆ ಆಟಿ ಅಮವಾಸ್ಯೆ ಒಂದು ವಿಶೇಷ ಹಬ್ಬ. ಅಂದು ಹಾಲೆ ಮರದ ತೊಗಟೆಯ ರಸ ತೆಗೆದು ಕುಡಿಯುವ ಪದ್ಧತಿ ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ಬೆಳೆದು ಬಂದಿದೆ. ಅಗಸ್ಟ್ 1 ರಂದು ಆಟಿ ಅಮವಾಸ್ಯೆ. ಈ ಅಮವಾಸ್ಯೆಯ ಮದ್ದು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.

ದೇಹದೊಳಗಿನ ನಂಜಿನ ಅಂಶಗಳನ್ನು ತೆಗೆಯುವ ಶಕ್ತಿ ಹಾಲೆಮರದ ರಸಕ್ಕಿದೆ. ಇದು ಕಿಡ್ನಿ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಆಟಿ ಅಮವಾಸ್ಯೆಯಂದು ಔಷಧೀಯ ಗುಣ ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಲೆ ಮರದ ರಸ ಕುಡಿದ ನಂತರ ಮೆಂತೆಯ ಗಂಜಿ ಮಾಡುವ ಕ್ರಮ ಇದೆ. ಮರ ರಸದಿಂದ ದೇಹಕ್ಕಾಗುವ ಉಷ್ಣಬಾದೆಯನ್ನು ಸರಿಪಡಿಸುತ್ತದೆ.

ಹಾಲೆ ಮರದ ಔಷಧಗಳೊಂದಿಗೆ ಮಂತ್ರ, ತಂತ್ರ ಔಷಧ ಪರಿಕಲ್ಪನೆಗಳು ಸೇರಿ ಹೋಗಿವೆ. ಔಷಧೀಯ ಗುಣದ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟರೂ ಅದನ್ನು ಬೆಳಕು ಹರಿಯುವ ಮೊದಲೇ ಸಂಗ್ರಹಿಸಬೇಕು. ಹಾಲೆ ಮರದ ತೊಗಟೆಯನ್ನು ಕೂಡ ಹೊತ್ತಿನಲ್ಲಿ ತಂದರೆ ಅದರಲ್ಲಿರುವ ಔಷಧೀಯ ಗುಣ ಪೂರ್ತಿಯಾಗಿ ದೊರೆಯುತ್ತದೆ. ಇದರ ಜತೆಯಲ್ಲಿ ಇಂದಿನ ಜನಕ್ಕೆ ಹಾಲೆ ಮರದ ಪರಿಚಯ ಕೂಡಾ ಕಡಿಮೆ ಈ ಕಾರಣದಿಂದ ಹಾಲೆ‌‌ಮರ‌ ಎಂದು ದೃಢಪಟ್ಟ ಬಳಿಕವಷ್ಟೇ ಅದರ ಕೆತ್ತೆಯ ರಸ ಕುಡಿದರೆ ಒಳ್ಳೆಯದು ಎನ್ನುವುದು ಕುಡ್ಲ ಸಿಟಿಯ ಕಾಳಜಿಯ ಮಾತು.

ಕಣಿಲೆ ಕಂಡ್ರೆ ಕುಡ್ಲದವರಿಗೆ ಬರೀ ಖುಷಿ

ಬಿದಿರಿನ ಕಣಿಲೆ ಎಂದರೆ ಕುಡ್ಲದವರಿಗೆ ಬಹಳ ಇಷ್ಟ. ಮಳೆಗಾಲದಲ್ಲಂತೂ ಇದರ ಪಲ್ಯ ಅಥವಾ ಯಾವುದೇ ಐಟಂ ಮಾಡಿದ್ರು ಚಪ್ಪರಿಸಿಕೊಂಡು ತಿನ್ನುತ್ತಾರೆ.

ವಿಶೇಷ ಎಂದರೆ ಕಣಿಲೆಯಲ್ಲಿ ಔಷಧೀಯ ಗುಣವಿದೆ. ಅದಕ್ಕೂ ಮುಖ್ಯವಾಗಿ ಕಡಿಮೆ ಕ್ಯಾಲೋರಿ, ಮಿತವಾದ ಕಾರ್ಬೋಹೈಡ್ರೇಟ್ ಸೇರಿದಂತೆ ಪಚನ ಕ್ರಿಯೆ ಗೂ ಇದು ಸಹಕಾರಿ. ಹಳೆಯ ಕಾಲದಲ್ಲಿ ತುಳುನಾಡಿನ ಜನರು ಮಳೆಗಾಲದಲ್ಲಿ ಹೆಚ್ಚು ಇದನ್ನು ಬಳಸುತ್ತಿದ್ದರು ಈ ಮೂಲಕ ಮಳೆಗಾಲದ ರೋಗಗಳಿಂದ ಮುಕ್ತಿ ಪಡೆಯುತ್ತಿದ್ದರು ಈಗ ಬಿದಿರು ಕಡಿಮೆಯಾಗುತ್ತಿದೆ. ಕಣಿಲೆ ಕೂಡ ಸಿಗುತ್ತಿಲ್ಲ ಇಂಗ್ಲಿಷ್ ಔಷಧೀಯ ಮುಂದೆ ಈ ಕಣಿಲೆ ಕೂಡ ಸಪ್ಪೆಯಾಗಿದೆ.

ಪಿಲಿವೇಷ ಎಂದರೆ ಅದು ಕುಡ್ಲದವರಿಗೆ ಮಾತ್ರ ಗೊತ್ತು

ಯಾರೇ ಏನೇ ಹೇಳಿದ್ರು ಪಿಲಿವೇಷ ವಿಚಾರದಲ್ಲಿ ಕುಡ್ಲದ ಮಂದಿಯನ್ನು ಮೀರಿಸುವವವರಿಲ್ಲ ಹುಲಿವೇಷ ಎಂದಾಗ ಕರಾವಳಿ ಜನರ ಜೀವ ಕಲೆ ಎಂದೇ ಕರೆಯಲಾಗುತ್ತದೆ. ಇದೇ ಕಾರಣದಿಂದ ಮಂಗಳೂರಿನ ಪಿಲಿ ಕುಲ ಎನ್ನುವ ಪ್ರದೇಶಕ್ಕೆ ಹುಲಿಗಳಿಂದಾಗಿ ಹೆಸರು ಬಂತು.

ಬಹಳ ಹಳೆಯ ಕಾಲದಲ್ಲಿ ಪಿಲಿ ಎಂದರೆ ತುಳುವಿನಲ್ಲಿ ಹುಲಿ ಕುಲ ಎಂದರೆ ಕೆರೆ ಎಂದು ಅರ್ಥ ಕೊಡುತ್ತದೆ ಈ ಹಿಂದೆ ಹುಲಿಗಳು ನೀರು ಕುಡಿಯಲು ಕೊಳ ಅಥವಾ ಕೆರೆ ಕಡೆಗೆ‌ ಬರುವುದರಿಂದ ಇದಕ್ಕೆ ಪಿಲಿ ಕುಳ ಎಂದು ತುಳು ಜನರು ಹೆಸರು ಕೊಟ್ಟರು ಈಗ ಪಿಲಿ ಕುಳ ಎಂದರೆ ನಿಸರ್ಗ ಧಾಮವಾಗಿ ಬದಲಾಗಿದೆ. ಅಂದಹಾಗೆ ಜುಲೈ 29 ವಿಶ್ವ ಹುಲಿಗಳ ದಿನ. ಹುಲಿ ಸಂತತಿ ನಾಶದತ್ತ ಸಾಗುತ್ತಿದ್ದರೂ ಕರಾವಳಿಯಲ್ಲಿ ಹುಲಿವೇಷದ ರಂಗು ಪ್ರತಿ ಸಲನೂ ಏರುತ್ತಿದೆ.