ಇತ್ತೀಚಿನ ಕೆಲ ವರ್ಷಗಳಿಂದ ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ಇಂತಹ ಗಣೇಶ ವಿಗ್ರಹಗಳಲ್ಲೂ ವೈವಿಧ್ಯತೆ ಕಾಣ ಸಿಗುತ್ತದೆ.
ಮಂಗಳೂರಿನ ಪಕ್ಷಿಕೆರೆಯ ನಿತಿನ್ ವಾಸ್ ಪರಿಸರ ಪೂರಕ ಗಣಪತಿ ಮೂರ್ತಿಯನ್ನು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಗಣಪತಿ ಮೂರ್ತಿ ರಚನೆಗೆ ಬಳಸುವುದು ಪರಿಸರ ಸ್ನೇಹಿ ಕಾಗದದ ತಿರುಳು ಮತ್ತು ಬೀಜಗಳನ್ನು. ಇವು ನೀರಿನಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ, ಹೊರತು ಪ್ರಕೃತಿಗೆ ಮಾರಕವಲ್ಲ.
ಈ ಮೂರ್ತಿಗಳ ರಚನೆಗೆ ನಾನು ಪರಿಸರಕ್ಕೆ ಮಾರಕವಾದ ಯಾವುದೇ ವಸ್ತುಗಳನ್ನು ಬಳಸುವುದಿಲ್ಲ. ಈ ಮೂರ್ತಿಗಳನ್ನು ವಿಸರ್ಜಿಸಿದ ಬಳಿಕ ಬಳಸಲಾಗಿರುವ ಬೀಜಗಳು , ಗಿಡವಾಗಿ ಬೆಳೆಯಬಲ್ಲವು ಎನ್ನುತ್ತಾರೆ ನಿತಿನ್. ಕೇವಲ ಗಣೇಶ ವಿಗ್ರಹ ಅಷ್ಟೇ ಅಲ್ಲ, ಪರಿಸರ ಪ್ರೇಮಿ ನಿತಿನ್ ಗಿಡವಾಗಿ ಅರಳುವ ತ್ರಿವರ್ಣ ಧ್ವಜ, ಪೆನ್ಸಿಲ್, ಪೇಪರ್ ಪೆನ್‌ಗಳನ್ನು ತಯಾರಿಸಿ ಕೂಡ ಗಮನ ಸೆಳೆದಿದ್ದಾರೆ.
Tagged: kudlacity
ಕುಡ್ಲದ ಮೊದಲ ರಿಕ್ಷಾ ಚಾಲಕಿ ವಿಜಯಕ್ಕ !
ಸುರತ್ಕಲ್ ಪಾರ್ಕ್‌ನಲ್ಲಿ ಸುಮಾರು 10 ವರ್ಷದಿಂದ ರಿಕ್ಷಾ ಚಲಾಯಿಸುತ್ತಿದ್ದ ಹೊಸಬೆಟ್ಟು ನಿವಾಸಿ ದಿ.ಎಚ್.ಟಿ.ಮೂರ್ತಿ ಅವರ ಪತ್ನಿ ಈ ವಿಜಯಲಕ್ಷ್ಮಿ. ಅವರದ್ದು ಬಡ ಕುಟುಂಬ ಬಾಡಿಗೆ ಮನೆಯಲ್ಲಿ ವಾಸ. ಇಬ್ಬರು ಮಕ್ಕಳಿದ್ದಾರೆ.
ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರು ತಾನು ನಿಧನರಾಗುವ ಮೊದಲೇ ಪತ್ನಿಗೆ ರಿಕ್ಷಾ ಚಲಾಯಿಸಲು ಕಲಿಸಿ, ಲೈಸನ್ಸ್ ಕೂಡಾ ಮಾಡಿಸಿಕೊಟ್ಟಿದ್ದರು. ಈಗ ರಿಕ್ಷಾದ ಮೂಲಕ ವಿಜಯಕ್ಕ ಬದುಕು ಕಟ್ಟುತ್ತಿದ್ದಾರೆ.
ರಿಕ್ಷಾ ಬಿಡುವ ಪುರುಷರ ನಡುವೆ ಇಂತಹ ಕ್ಷೇತ್ರದಲ್ಲಿ ವಿಜಯಕ್ಕ ನೆಲೆ ನಿಂತಿರೋದು ಮಾತ್ರ ಖುಷಿಯ ವಿಚಾರ. ವಿಜಯಕ್ಕನ ಬದುಕು ಈ ರಿಕ್ಷಾದಿಂದ ಗಟ್ಟಿಯಾದರೆ ಸಾವಿರಾರು ಮಹಿಳೆಯರು ಇಂತಹ ಕೆಲಸಕ್ಕೆ ಮುಂದಾಗುತ್ತಾರೆ.
ಕುಡ್ಲದ ಸಿಟಿ ಬಸ್ ನಲ್ಲಿ ಟಿಕೇಟ್ ಇಲ್ಲದೇ ಫ್ರಿಯಾಗಿ ಪ್ರಯಾಣಿಸಿ
ಕುಡ್ಲದ ಸಿಟಿ ಬಸ್‌ನಲ್ಲಿ ಪ್ರಯಾಣಿಸುವವರ ಗಮನಕ್ಕೆ ಸೆಪ್ಟೆಂಬರ್ ಒಂದರಿಂದ ಸಿಟಿ ಬಸ್ ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಟಿಕೆಟ್ ನೀಡದೇ ಇದ್ದರೆ ನೀವು ಫ್ರಿಯಾಗಿ ಈ ಬಸ್ ನಲ್ಲಿ ಪ್ರಯಾಣ ಬೆಳೆಸಬಹುದು ಇಂತಹ ಹೊಸ ಯೋಜನೆಯನ್ನು ಮಂಗಳೂರು ಸಿಟಿ ಬಸ್ ಮಾಲೀಕರ ಸಂಘ ಹಮ್ಮಿಕೊಳ್ಳುತ್ತಿದೆ. ಕಂಡಕ್ಟರ್ ಟಿಕೇಟ್ ಪ್ರಯಾಣಿಕರಿಗೆ ನೀಡಬೇಕು ಎಂದು ಎಷ್ಟು ಬಾರಿ ಹೇಳಿದ್ರು ಸಂಬಂಧಪಟ್ಟ ಜನರು ಕೇಳಿಸದ ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರುತ್ತಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ 27, ಸ್ಟೇಟ್‌ಬ್ಯಾಂಕ್- ಮಂಗಳಾದೇವಿಯ 5 ಹಾಗೂ ಸ್ಟೇಟ್ ಬ್ಯಾಂಕ್ ನಿಂದ ಉಳ್ಳಾಲ ಕಡೆ ಸಾಗುವ 13 ಬಸ್ ಗಳಲ್ಲಿ ಈ ಅವಕಾಶ ಸಿಗಲಿದೆ. ಪ್ರಯಾಣಿಕರು ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಕಂಡಕ್ಟರ್ ಗೆ ಬುದ್ದಿ ಕಲಿಸಬಹುದು ಎನ್ನುವುದು ಸಂಘದ ಹಿಂದಿರುವ ಉದ್ದೇಶ.
ಅಷ್ಟಮಿಗೆ ಫ್ಲೆಕ್ಸ್ ಶಾಸಕರ ಹೊಸ ಕಲ್ಪನೆ
ಕುಡ್ಲಸಿಟಿಯ ನಿರಂತರ ಅಭಿಯಾನಕ್ಕೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪೂರ್ಣ ರೂಪದ ಬೆಂಬಲ ಸೂಚಿಸುವ ಮೂಲಕ ಮಂಗಳೂರಿನಲ್ಲಿ ಇನ್ನು ತಮ್ಮ ಯಾವುದೇ ಬ್ಯಾನರ್ ಬಿದ್ದರೂ ಕೂಡ ಅದು ಪ್ಲಾಸ್ಟಿಕ್ ಬದಲು ಬಟ್ಟೆಯ ಫ್ಲೆಕ್ಸ್ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಹಿಂದೆ ಕುಡ್ಲ ಸಿಟಿ ಜವಾಬ್ದಾರಿಯುತ ಶಾಸಕರ ಅಭಿಮಾನಿಗಳು ಫ್ಲೆಕ್ಸ್ ಹಾಕುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿರುವ ವಿಚಾರದಲ್ಲಿ ಶಾಸಕರ ಗಮನಕ್ಕೆ ಸಾಮಾಜಿಕ ಜಾಲತಾಣದ ಮಾಹಿತಿ ಹಂಚಲಾಗಿತ್ತು.
ಸಾರ್ವಜನಿಕರು ನೀವು ಮಾಡುತ್ತಿರುವ ಕೆಲಸ ಸರಿಯಲ್ಲ ಎಂದು ಕರೆ,ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಮಂಡಿಸಿದ ಬಳಿಕ ಸುಧಾರಿಸಿಕೊಂಡ ಅಭಿಮಾನಿಗಳು ಫ್ಲೆಕ್ಸ್ ತೆರವು ಮಾಡುವ ಮೂಲಕ ಗಮನ ಸೆಳೆದಿದ್ದರು. ಈಗ ಪ್ರಧಾನಿ ಅವರ ಮಾತಿನಂತೆ ನಡೆದುಕೊಳ್ಳುವ ಕಾರ್ಯವಾಗುತ್ತಿದೆ. ಜೈ ಮೋದಿಜೀ
ಅಷ್ಟಮಿಗೆ ಮಕ್ಕಳ ಪಾಲಿನ ದೇವರಾದ ರವಿಯಣ್ಣ
ಕಟಪಾಡಿಯ ಸಾಮಾನ್ಯ ಒಬ್ಬ ಗಾರೆ ಕೆಲಸದ ರವಿಯಣ್ಣ ಜಾಸ್ತಿ ಓದಿದವರಲ್ಲ ದೊಡ್ಡ ಹೇಳಿಕೊಳ್ಳುವ ಕೆಲಸನೂ ಇಲ್ಲ ಆದರೆ ಕಳೆದ ಐದು ವರ್ಷದಲ್ಲಿ ಅಷ್ಟಮಿಯಲ್ಲಿ ಭಿನ್ನವಾದ ವೇಷ ಹಾಕಿಕೊಂಡು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆ ಗೆ ನೆರವಾಗುವ ವಿಚಾರ ಇದೆಯಲ್ಲ ಅದು ಎಂದಿಗೂ ಸಣ್ಣ ಮಾತೇ ಅಲ್ಲ. ಈ ಬಾರಿ ದೀ ವ್ಯಾಂಪರ್ಸ್ ವೇಷದಲ್ಲಿ ಉಡುಪಿಯಲ್ಲಿ ಎರಡು ದಿನ ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ವಾಗಲಿ.
ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು 35ಲಕ್ಷ ರೂ. ಹಣವನ್ನು 29 ಬಡ ಮಕ್ಕಳ ಚಿಕಿತ್ಸೆಗೆ ನೀಡಲಾಗಿದೆ. ಅದೇ ರೀತಿ ಈ ವರ್ಷವೂ ಕೂಡ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ತಂಡ ಆ ಕಾರ್ಯ ಕ್ಕೆ ಮುಂದಾಗುತ್ತಿದೆ. ಲೀವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮಂದರ್ತಿ ಮೂಡುಬಾರಳಿಯ ಕುಶಲ ಮತ್ತು ಉಷಾ ದಂಪತಿಯ ಮಗ ಶ್ರೀತನ್(3), ಬಳಿರಕ್ತ ಕಣ ಉತ್ಪತ್ತಿ ಯಾಗದ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ವಕ್ವಾಡಿಯ ರವೀಂದ್ರ ಮತ್ತು ಯಶೋಧ ದಂಪತಿಯ ಮಗ ಪ್ರಥಮ್(5), ಮೆದಳಿನ ರಕ್ತಸ್ರಾವ ಕಾಯಿಲೆಗೆ ತುತ್ತಾಗಿರುವ ಹಿರಿಯಡಕ ಪಂಚನಬೆಟ್ಟು ಕೃಷ್ಣಮೂರ್ತಿ ಆಚಾರ್ಯ ಮತ್ತು ಕುಶಲ ದಂಪತಿಯ ಮಗ ಕಿರಣ್(18) ಸೇರಿದಂತೆ ಐದು ಮಕ್ಕಳ ಚಿಕಿತ್ಸೆ ಸಹಾಯ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸೆ.3ರಂದು ಸಂಜೆ 5ಗಂಟೆಗೆ ಕಟಪಾಡಿ ಸಾರ್ವ ಜನಿಕ ಶ್ರೀಗಣೇಶೋತ್ಸವ ವೇದಿಕೆ ಯಲ್ಲಿ ನೀಡಲಾಗುತ್ತದೆ.




