ಕರ್ನಾಟಕದಲ್ಲಿ ಹೊಸ ಮಾದರಿಯ “ಮಂಗಳೂರು ಹಂಚು”ಗಳೆಂದು ವಿಶ್ವದಾದ್ಯಂತ ಪ್ರಖ್ಯಾತಗೊಂಡಿರುವ ಹಂಚುಗಳನ್ನು ಪ್ರಥಮವಾಗಿ ತಯಾರಿಸಿದ ಕೀರ್ತಿ “ಬಾಸೆಲ್ ಮಿಷನ್” ಸಂಸ್ಥೆಗೆ ಸಲ್ಲುತ್ತದೆ.
ಬಾಸೆಲ್ ಮಿಷನ್ ಎಂಬುದು ಕ್ರಿ.ಶ. 1815 ರಲ್ಲಿ ಸ್ವಿಝರ್ಲೆಂಡ್ ದೇಶದ ಬಾಸೆಲ್ ಎಂಬ ಪಟ್ಟಣದಲ್ಲಿ ಪ್ರಾರಂಭವಾಗಿ ಕ್ರಿ ಶ. 1834 ರಲ್ಲಿ ದಕ್ಷಿಣಕನ್ನಡದಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿದ ಒಂದು ಸೇವಾ ಸಂಸ್ಥೆ. ಅದು ಹಿಂದಿನ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಜಿಲ್ಲೆ ಸಹಿತ) ಮಂಗಳೂರಿನ ಜಪ್ಪು ಎಂಬಲ್ಲಿ ಕ್ರಿ.ಶ. 1865 ರಲ್ಲಿ ಪ್ರಥಮ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ 135 ವರ್ಷಗಳಷ್ಟು ದೀರ್ಘಕಾಲದ ಇತಿಹಾಸವುಳ್ಳ ಒಂದು ಹಿರಿಯ ಕೈಗಾರಿಕೆಯು ಕರ್ನಾಟಕದಲ್ಲಿ ಪ್ರಾರಂಭವಾಗಲು ಕಾರಣವಾಗಿದೆ.
ಜೆಪ್ಪುವಿನಲ್ಲಿ ಪ್ರಾರಂಭಿಸಿದ ಹಂಚಿನ ಕಾರ್ಖಾನೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿ ಜನರ ಬೇಡಿಕೆಯನ್ನು ಪೂರೈಸಲು ಬಾಸೆಲ್ ಮಿಷನ್‍ಗೆ ಅಸಾಧ್ಯವಾದಾಗ ಕ್ರಿ.ಶ. 1882ರಲ್ಲಿ ಆರ್ ಹೌರೀ ಮತ್ತು ಜಿ. ಫ್ರಾಂಕೇ ಎಂಬವರ ಹಿರಿತನದಲ್ಲಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಬಾಸೆಲ್ ಮಿಷನ್ ತನ್ನ ಎರಡನೆ ಹಂಚಿನ ಕಾರ್ಖಾನೆಯನ್ನು ಸ್ಥಾಪಿಸಿತು.
ಮುಂದೇ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿದಾಗ ಸಹಿತ) ಉತ್ತರಭಾಗದಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಾಗ ಉಡಿಪಿಯ ಮಲ್ಪೆ ಎಂಬಲ್ಲಿ ಬೌಮನ್ ಮತ್ತು ಗ್ಲೇಟ್ ಫೀಲ್ಡರ್ ರ ಮುಂದಾಳುತನದಲ್ಲಿ ಕ್ರಿ.ಶ. 1886 ರಲ್ಲಿ ಬಾಸೆಲ್ ಮಿಷನ್ ತನ್ನ 3ನೇ ಕಾರ್ಖಾನೆಯನ್ನು ಪ್ರಾರಂಭಿಸಿತು. ಆದರೆ ಇದು ಕ್ರಿ.ಶ. 1888 ರಲ್ಲಿ ತನ್ನ ಉತ್ಪಾದನೆ ಪ್ರಾರಂಭಿಸಿತು.
ಮಂಗಳೂರು ಟೈಲ್ಸ್ ಎಂದರೆ ಅದು ವರ್ಲ್ಡ್ ಫೇಮಸ್
April 27, 2019