Category: ಹೊಸ ಸುದ್ದಿ

ಬಾಲಿವುಡ್ ಬಿಗ್ ಬಿ ಗೂ ಪ್ರೇರಣೆಯಾದ ಸಬಿತಾ

ಬೆಳ್ತಂಗಡಿಯ ಸಬಿತಾ ಮೋನಿಸ್ ಅವರ ಬದುಕು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೂ ಪ್ರೇರಣೆಯ ಶಕ್ತಿ ಎನ್ನುವುದಕ್ಕೆ ಅವರ ಟ್ವೀಟ್‌ಯೇ ದಾಖಲೆ.
ಸಬಿತಾ ಮತದಾನದಲ್ಲಿ ಭಾಗವಹಿಸುವ ರೀತಿ ಇದೆಯಲ್ಲ ಅದು ಎಲ್ಲರಿಗೂ ಪ್ರೇರಣೆ ನೀಡುವಂತದ್ದು, ಅಂದಹಾಗೆ ಸಬಿತಾ ಮೋನಿಸ್‌ಗೆ ಕೈಗಳಿಲ್ಲ ಆದರೆ ಇಡೀ ಬದುಕಿನಲ್ಲಿ ಕಾಲುಗಳೇ ಅವರಿಗೆ ಕೈಗಳಂತೆ ಸಾಥ್ ಕೊಟ್ಟಿದೆ.
ಇದೇ ವಿಚಾರವನ್ನು ಅಮಿತಾಭ್ ಬಹಳ ಹಿಂದೆ ತಮ್ಮ ಟ್ವಿಟ್ಟರ್‌ನಲ್ಲಿ ಹೇಳುವ ಮೂಲಕ ಇಡೀ ದೇಶದ ಜನರಿಗೆ ಸಬಿತಾ ಅವರ ಪರಿಚಯ ಮಾಡಿಕೊಟ್ಟರು. ಅಂದಹಾಗೆ ಸಬಿತಾ ವಿದ್ಯಾವಂತೆ ಜತೆಗೆ ಕಾಲೇಜು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಗೆ ಕೈಗಳಿಲ್ಲ ಎಂದು ಎಂದಿಗೂ ಬೇಸರ ಪಡದ ಮಹಿಳೆ. ದೇವರು ಕೊಟ್ಟದ್ದು ತನಗೆ ಇಷ್ಟೇ ಎಂದೇ ಮನಸ್ಸು ಕುಗ್ಗದೇ ಇರುವುದರಲ್ಲಿಯೇ ಸಾಧನೆ ಮಾಡುವ ಛಾತಿ ಇಟ್ಟುಕೊಂಡಿರುವವರು.

ಶೈಕ್ಷಣಿಕ ಬದುಕಿನ ಯಶಸ್ಸಿಗೆ ರೊಸಾರಿಯೋ ಬೆಸ್ಟ್

ರೊಸಾರಿಯೋ ಕಾಲೇಜು ವಿದ್ಯಾರ್ಥಿಗಳ ಎಲ್ಲ ದೃಷ್ಟಿಯಿಂದಲ್ಲೂ ಸಮರ್ಥವಾದ ಶಿಕ್ಷಣ ಸಂಸ್ಥೆ ಮುಖ್ಯವಾಗಿ ಜಿಲ್ಲೆಯ ಬಹಳ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕೊಂದು ಜಾಸ್ತಿ ಮಹತ್ವವಿದೆ.
ಇದರ ಜತೆಗೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ, ಅವರ ಫೀಸ್ ವಿಚಾರದಲ್ಲೂ ಸೆಮಿಸ್ಟರ್ ವೈಸ್ 5500 ರೂ ಮಾತ್ರ ಕಟ್ಟಿದರೆ ಸಾಕು. ಉತ್ತಮವಾದ ಗ್ರಂಥಾಲಯ ವ್ಯವಸ್ಥೆ, ಜಿಮ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಎಲ್ಲವೂ ಪೂರಕವಾಗಿದೆ.
ವಾಹನ ವಿಚಾರದಲ್ಲೂ ಇದು ಸ್ಟೇಟ್ ಬ್ಯಾಂಕ್‌ಗೆ ಬಹಳ ಹತ್ತಿರದ ಕಾಲೇಜು. ಉತ್ತಮ ಉಪನ್ಯಾಸಕರ ವರ್ಗ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ನಿರಂತರವಾಗಿ ದುಡಿಯುವ ಪ್ರಿನ್ಸಿಪಾಲರು, ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ಶಿಕ್ಷಣ ನೀಡುವ ತಾಣ. ಒಂದೇ ಮಾತಿನಲ್ಲಿ ಕುಡ್ಲದ ಬೆಸ್ಟ್ ಕಾಲೇಜುಗಳಲ್ಲಿ ರೊಸಾರಿಯೋ ಫಸ್ಟ್.

ಸ್ವಾಮಿ ಕೊರಗಜ್ಜ ಎಂದರೆ ಅದು ಕುಡ್ಲ

ಸ್ವಾಮಿ ಕೊರಗಜ್ಜ ಎಂದು ಯಾರೇ ಹೇಳಿದ್ರು ಅವರು ಕುಡ್ಲದವರು ಎಂದು ಹೇಳಿಬಿಡಬಹುದು. ಕುಡ್ಲದಲ್ಲಿ ಓಡಾಡುವ ಹತ್ತರಲ್ಲಿ ಎರಡು ವಾಹನವಾದರೂ ಸ್ವಾಮಿ ಕೊರಗಜ್ಜ ಎಂದು ಹೆಸರು ಹಾಕಿಕೊಂಡು ಓಡಾಡುತ್ತಾರೆ. ತುಳುವರಿಗೆ ಕೊರಗಜ್ಜ ಎಂದರೆ ಅದೊಂದು ಕಾರ್ಣಿಕ ಶಕ್ತಿ ಎನ್ನುವ ನಂಬಿಕೆಯಿದೆ. ಯಾವುದಾದರೂ ವಸ್ತು ಕಳೆದುಹೋದರೆ ಭಕ್ತಿಯಿಂದ ಕೊರಗಜ್ಜನನ್ನು ನೆನೆದರೆ ಸಾಕು. ಕಳೆದು ಹೋದ ವಸ್ತು ಸಿಕ್ಕಿ ಬಿಡುತ್ತದೆ ಎನ್ನುವ ನಂಬಿಕೆಯಲ್ಲಿ ತುಳುವರು ಬದುಕು ಕಟ್ಟುತ್ತಿದ್ದಾರೆ. Koragajja is considered as one of the most sacred and sought spirit in Mangalore. He is considered powerful and is widely worshiped along the coast. tags: Koragajja , kudlacity, kudlanews, spirit, Mangalore

ಏಳು ವರ್ಷದಲ್ಲಿ ಭರ್ತಿ 662 ಟಾಯ್ಲೆಟ್ ‌ಕಟ್ಟಿಸಿದ ಕುಡ್ಲದ ಪೊಣ್ಣು

ಒಂದಲ್ಲ ಎರಡಲ್ಲ ಏಳು ವರ್ಷದ ಅವಧಿಯಲ್ಲಿ ಬರೋಬರಿ 662 ಟಾಯ್ಲೆಟ್‌ಗಳ ನಿರ್ಮಾಣ ಮಾಡುವುದು ಅದು ಸುಲಭದ ಮಾತೇ ಅಲ್ಲ. ಅದರಲ್ಲೂ ತುಮಕೂರು ಹಾಗೂ ಬಳ್ಳಾರಿಯಂತಹ ಜಾಗದಲ್ಲಿ ಕರಾವಳಿಯ ಹುಡುಗಿಯೊಬ್ಬಳು ಇಂತಹ ಸಾಧನೆ ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷ್ಯಾ.
ಹೌದು. ಹೆಸರು ಭವ್ಯಾ ರಾಣಿ. ಕರ್ನಾಟಕ ಬಂಟ್ವಾಳದ ಅನಂತಾಡಿಯವರು. ಸೋಷಿಯಲ್ ವರ್ಕ್ ನಲ್ಲಿ ಆಳ್ವಾ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದಿರುವ ಭವ್ಯ. 2010 ರಲ್ಲಿ ಸ್ವಸ್ತಿ ಎಂಬ ಎನ್ ಜಿ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಈ ವೇಳೆ ತಮ್ಮ ಸ್ನೇಹಿತೆ ಸಹೋದರಿ ಮದುವೆಗಾಗಿ ತುಮಕೂರಿಗೆ ಆಗಮಿಸಿದ್ದರು.
ಅಲ್ಲಿಂದ ಭವ್ಯ ವೃತ್ತಿ ಹಾಗೂ ಜೀವನವೇ ಬದಲಾಯಿತು. 30 ವರ್ಷದ ಭವ್ಯರಾಣಿ ಕಳೆದ ಏಳು ವರ್ಷಗಳಿಂದ ತುಮಕೂರು ಗ್ರಾಮ ಪಂಚಾಯಿತಿಯಲ್ಲಿ ಬಯಲು ಮುಕ್ತ ಶೌಚಕ್ಕಾಗಿ ಶ್ರಮಿಸುತ್ತಿದ್ದಾರೆ. ಸರಕಾರದ ಸಹಾಯ ಪಡೆಯದೇ ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ಶಿಲ್ಪಾರ ಮೊಬೈಲ್ ಕ್ಯಾಂಟೀನ್‌ಗೆ ಫಿದಾ ಆದ ಉದ್ಯಮಿ ಮಹೇಂದ್ರ!

ಇವರು ಶಿಲ್ಪಾ ರಾಜಶೇಖರ್. ಮಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದಾರೆ. ಮಹೇಂದ್ರ ಎನ್ನುವ ಕಾರ್ಪೊರೇಟ್ ಕಂಪನಿಯ ಮಾಲೀಕ ಮಹೇಂದ್ರ ಅವರೇ ಇವರು ಬಿಸಿನೆಸ್‌ಗೆ ಮನಸೋತು ವ್ಯಾಪಾರ ನಡೆಸಲು ಮಹೇಂದ್ರ ವಾಹನವೊಂದನ್ನು ಗಿಫ್ಟ್ ಆಗಿ ನೀಡಿದ್ದರು.
ಮೂಲತಃ ಹಾಸನ ಜಿಲ್ಲೆಯವರಾದ ಶಿಲ್ಪಾ ತಮ್ಮ ಪತಿ ರಾಜಶೇಖರ್ ಜತೆಯಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ ರಾಜಶೇಖರ್ ನಾಪತ್ತೆಯಾದರು. ತಮ್ಮವರು ಎಂದು ಹೇಳುವ ಎಲ್ಲರೂ ಕೈಕೊಟ್ಟರು.
ಮೂರು ವರ್ಷದ ಮಗುವಿನ ಜತೆಯಲ್ಲಿ ಬದುಕಿಗಾಗಿ ಗುದ್ದಾಟ ನಡೆಸಿಕೊಂಡು ಬಂದು ಕೊನೆಗೆ ಹಳ್ಳಿಮನೆ ರೊಟ್ಟೀಸ್ ಎನ್ನುವ ಪುಟ್ಟ ಮೊಬೈಲ್ ಕ್ಯಾಂಟೀನ್ ಹಾಕಿದರು. ಈಗಲೂ ಮಣ್ಣಗುಡ್ಡದ ಗಾಂಧಿನಗರದ ಕಡೆಗೆ ಹೋಗುವಾಗ ಈ ಕ್ಯಾಂಟೀನ್‌ಯಿದೆ.
ಈಗ ಶಿಲ್ಪಾ ಬದುಕು ಗಟ್ಟಿಯಾಗಿದೆ. ಹಳ್ಳಿಮನೆ ಶಿಲ್ಪಾ ಎಂದಾಕ್ಷಣ ಮಂಗಳೂರು ಮಂದಿಗೆ ಅವರ ಪರಿಚಯ ಆಗಿ ಬಿಡುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಸೋತು ಹೋದ ಹೆಣ್ಣು ಮಗಳು ಬದುಕು ಕಟ್ಟಿದ ರೀತಿಯಂತೂ ಅದ್ಬುತ ಎನ್ನಬಹುದು.