Author: Team Kudla City

ನೆಟ್ ಇದ್ರೆ ತೆಂಗಿನ ಕಾಯಿ ಬೀಳೋದಿಲ್ಲ !

ಮಂಗಳೂರು ಮಾತ್ರವಲ್ಲ ಇಡೀ ಸಿಟಿಯಲ್ಲಿರುವವರ ಒಂದೇ ಸಮಸ್ಯೆ ಎಂದರೆ ತೆಂಗಿನ ಕಾಯಿ ಕೀಳುವ ಮಂದಿ ಸಿಗೋದಿಲ್ಲ ಸಿಕ್ಕರೂ ದೊಡ್ಡ ಮೊತ್ತವೇ ಕೊಡಬೇಕು.

ಅದರಲ್ಲೂ ಮುಖ್ಯವಾಗಿ ತೆಂಗಿನ ಕಾಯಿ ಮರಕ್ಕೆ ನೆಟ್ ವ್ಯವಸ್ಥೆ ಮಾಡಿದ್ರೆ ನೆಟ್‌ಗೆ ಕಾಯಿ ಬಿದ್ದಾಗ ತೆಗೆಯಬಹುದು ಜತೆಯಲ್ಲಿ ಅಪ್ಪಿತಪ್ಪಿ ತಲೆಗೆ ಬೀಳುವ ಕಾಯಿಯಿಂದಲ್ಲೂ ಭದ್ರತೆ ಸಿಗುತ್ತದೆ. ಇಂತಹ ನೆಟ್ ವ್ಯವಸ್ಥೆಗೆ ದೂರದವರನ್ನು ಕರೆಸಿಕೊಂಡು ಕೈ ತುಂಬಾ ಹಣ ಕೊಡಬೇಕಾಗಿಲ್ಲ.

ಉತ್ತಮ ಗುಣಮಟ್ಟದ ನೆಟ್ ಜತೆಗೆ ಕಾರ್ಮಿಕರು ನಿಮ್ಮ ಮನೆಗೆ ಬಂದು ಅದನ್ನು ಅಳವಡಿಸಿಕೊಂಡು ಹೋಗುವ ವ್ಯವಸ್ಥೆಯಿದೆ. ಮಂಗಳೂರು ಮಾತ್ರವಲ್ಲ ನಿಮ್ಮ ಊರು ಯಾವುದೇ ಇರಲಿ ಅಲ್ಲಿಗೆ ಬಂದು ಅಳವಡಿಸುವ ತಂಡವಿದೆ.

ಮುಖ್ಯವಾಗಿ ಬಾಲ್ಕನಿ ನೆಟ್, ಗ್ಲಾಸ್ ಸೇಫ್ಟಿ ನೆಟ್,ಬರ್ಡ್ಸ್ ಪ್ರೋಟೆಕ್ಷನ್ ನೆಟ್, ಸ್ಪೋಟ್ಸ್ ನೆಟ್, ಸ್ಟೇರ್‌ಕೇಸ್ ನೆಟ್ ಹೀಗೆ ಹತ್ತಾರು ಬಗೆಯ ನೆಟ್ ಅಳವಡಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಾಗರಾಜ್ ಅವರನ್ನು ಸಂಪರ್ಕ ಮಾಡಿ 8453356106, 6362978916.

ಮಂಗಳೂರಿನ ಮತ ಏಣಿಕೆ ಕೇಂದ್ರ ಹೇಗಿದೆ ಗೊತ್ತಾ?

ಲೋಕಸಭೆಯ ಚುನಾವಣೆ ಮುಗಿದು ಇನ್ನು ಒಂದೇ ದಿನದಲ್ಲಿ ಫಲಿತಾಂಶ ಹೊರಬರಲಿದೆ. ಸಾಕಷ್ಟು ಕುತೂಹಲ ಕಾತರದ ಜತೆಯಲ್ಲಿ ಇಷ್ಟು ದಿನ ಮಂಗಳೂರಿನ ಲೋಕಸಭೆಯ ಮತದಾರ ಹಾಕಿದ ಮತಗಳನ್ನು ಯಾವ ರೀತಿಯಲ್ಲಿ ಜೋಪಾನ ಮಾಡಲಾಗಿದೆ ಹಾಗೂ ಅದರ ಭದ್ರತೆಯ ವಿಚಾರವಂತೂ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಮಂಗಳೂರಿನ ಎನ್‌ಐಟಿಕೆಯಲ್ಲಿ ವಿಶಿಷ್ಟ ಭದ್ರತೆಯ ಜತೆಯಲ್ಲಿ ಈ ಮತ ಏಣಿಕೆಯ ಕಾರ‍್ಯಗಳು ಸಾಗಲಿದೆ. ಮೇ 22ರ ಸಂಜೆ 6ರಿಂದ ಮೇ 24ರ ಸಂಜೆ 6 ಗಂಟೆಯ ತನಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಶಿಕ್ಷಣ ರಂಗದ ಮೇರು ಶಿಖರ ಬಿಜಿಎಸ್ ಶಿಕ್ಷಣ ಸಂಸ್ಥೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೌಲ್ಯಯುತ ಮತ್ತು ಸಂಸ್ಕಾರಯುಕ್ತ ಶಿಕ್ಷಣ ನೀಡಿದ ಹೆಗ್ಗಳಿಕೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳದ್ದು, ಮಂಗಳೂರಿನ ಕಾವೂರು ಗಾಂಧಿ ನಗರದ ಬಿಜಿಎಸ್ ಸಂಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಜ್ಞಾನವಂತರನ್ನಾಗಿ ಮಾಡುವುದಲ್ಲದೇ ಪ್ರತಿಭಾವಂತರನ್ನಾಗಿಯೂ ಮಾಡುತ್ತದೆ.

ಕಾವೂರಿನ ದೋಟದ ಗುಡ್ಡದಲ್ಲಿ ಬಿಜಿಎಸ್ ವಿದ್ಯಾಗಿರಿ ತಲೆ ಎತ್ತಿ ನಿಂತಿದೆ. ಸುಮಾರು 8 ಎಕರೆಯ ಬೃಹತ್ ಕ್ಯಾಂಪಸ್‌ನ ವಿದ್ಯಾಗಿರಿಯಲ್ಲಿ ಅತ್ಯಾಧುನಿಕ ವ್ಯವಸ್ಥೆವುಳ್ಳ ಬಿಜಿಎಸ್ ಪಿಯು ಕಾಲೇಜ್ ಹಾಗೂ ಪ್ರಥಮದರ್ಜೆ ಕಾಲೇಜನ್ನು ಹೊಂದಿದೆ. ಪಿಯು ವಿಭಾಗದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ತೆರೆದಿದ್ದು, ಪಿಸಿಎಂಬಿ, ಪಿಸಿಎಂಸಿ ಹಾಗೂ ಪಿಸಿಎಂಎಸ್, ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಈಸ್, ಇಬಿಎಸಿ ತರಗತಿಗಳು ಅನುಭವಿ ಉಪನ್ಯಾಸಕರಿಂದ ನಡೆಯುತ್ತಿದೆ.

ಇದರೊಂದಿಗೆ ಸಿಇಟಿ, ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಪಿಯುಸಿ ಹಾಗೂ ಪದವಿ ಹಂತದಲ್ಲಿ ಸಿಎ, ಸಿಪಿಟಿ ಕೋಚಿಂಗ್ ತರಬೇತಿಗಳನ್ನು ನಡೆಸಲಾಗುತ್ತದೆ.

ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾಮಠದ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ಅಲ್ಲಿ ರಾಜ್ಯ ಪಠ್ಯಕ್ರಮದ ಬಿಜಿಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ನಡೆಸಲಾಗುತ್ತಿದೆ. ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ನಡುವೆ ಮನೋಹರವಾದ ವಾತಾವರಣದೊಂದಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಹೊಂದಿದ್ದು ಮಕ್ಕಳ ಸರ್ವಾಂಗೀಣ ಅಭಿವೃದಿ ಪಥಕ್ಕೆ ನಾಂದಿಯನ್ನುಂಟು ಮಾಡುತ್ತಿದೆ.

ಕುಡ್ಲ ಸಿಟಿಯ ಟ್ರಾಫಿಕ್ ನಿಯಂತ್ರಕ ರವೂಫ್ ಭಾಯಿಗೊಂದು ಸಲಾಂ !

ಅಬ್ದುಲ್ ರವೂಫ್ ಎಂದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಟ್ರಾಫಿಕ್‌ನ ರವೂಫ್ ಭಾಯಿ ಎಂದರೆ ತಕ್ಷಣ ಮಂಗಳೂರಿನಲ್ಲಿ ವಾಹನ ಓಡಿಸುವವರಿಗೆ ಗೊತ್ತಿರುವ ಮನುಷ್ಯ.

ಕಳೆದ 26 ವರ್ಷಗಳಿಂದ ಕುಡ್ಲ ಸಿಟಿಯ ಸಂಚಾರ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ರವೂಫ್ ಈಗ ಹೋಮ್ ಗಾರ್ಡ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಈಗ ರಂಜಾನ್ ಉಪವಾಸದ ಸಮಯದಲ್ಲಿ ನಮಾಜ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಹೆಚ್ಚಾಗಿ ಸಂಜೆಯ ಹೊತ್ತು ಮಸೀದಿ ಸುತ್ತಮುತ್ತ ಹೆಚ್ಚು ವಾಹನಗಳ ಜತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ.

ಈಗ ರವೂಫ್ ಮಾಡುತ್ತಿರುವ ಮುಖ್ಯ ಕೆಲಸ ಎಂದರೆ ನಗರದ ಪ್ರಮುಖ ನಾಲ್ಕು ಮಸೀದಿಗಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬಿಸಿಲು, ಮಳೆ ಎನ್ನದೇ ಕಡಿಮೆ ಸಂಬಳದಲ್ಲಿ ದುಡಿಯುವ ಟ್ರಾಫಿಕ್‌ನ ಅಬ್ದುಲ್ ರವೂಫ್ ನಿಜವಾಗಿಯೂ ‘ಕುಡ್ಲ ಸಿಟಿ’ಯ ಹೆಮ್ಮೆಯ ನಾಗರಿಕ ಎನ್ನಬಹುದು.

90ರ ಹರೆಯದ ರುಕ್ಮಯ್ಯ ಮೂಲ್ಯರ ಆದರ್ಶ ಬದುಕು ಈಗ ನೆನಪು ‌ಮಾತ್ರ

ಒಂದಲ್ಲ ಎರಡಲ್ಲ ತಮ್ಮ ಬದುಕಿನ ಕೊನೆಯ ತನಕನೂ ಭೂಮಿ, ಕೃಷಿ,ಪರಿಸರ ಜತೆಗೆ ಇಂದಿನ ಯುವಜನತೆಗೊಂದು ಮಾದರಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಪಾವಂಜೆಯ ರುಕ್ಮಯ್ಯ ಮೂಲ್ಯರು ಇನ್ನು ಮುಂದೆ ಬರೀ ನೆನಪು ಮಾತ್ರ.

90ರ ಹರೆಯದಲ್ಲೂ ಮುಂಜಾನೆ ಯಿಂದ ಸಂಜೆಯ ತನಕ ಗದ್ದೆಯಲ್ಲಿ ದುಡಿಯುತ್ತಾ ಅವರು ಬಹಳಷ್ಟು ಮಂದಿಗೆ ಆದರ್ಶರಾಗಿದ್ದರು. ಎಂದಿನಂತೆ ಕೆಲಸಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಭಾನುವಾರ ವಾಹನವೊಂದು ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟರು.

ವಿಶೇಷ ಎಂದರೆ ಅವರು ಕೃಷಿ ಮೇಲಿಟ್ಟ ಅಪಾರ ಪ್ರೀತಿಯಿಂದ ಅವರು ಎಲ್ಲರ ಮೆಚ್ಚುಗೆಗೆ ಅರ್ಹರಾಗಿದ್ದರು. ಕುಡ್ಲ‌ಸಿಟಿ ಅವರ ಆತ್ಮಕ್ಕೆ ಭಗವಂತನಲ್ಲಿ ಶಾಂತಿ ಕೋರುತ್ತದೆ.