Author: Team Kudla City

ಆಹಾರ ಪಾರ್ಸೆಲ್ ಗೆ ಕುಡ್ಲದ ಹುಡುಗಿಯರ ಲಗ್ಗೆ

ಕುಡ್ಲದಲ್ಲಿ ಆಹಾರ ಪಾರ್ಸೆಲ್ ಅಥವಾ ಫುಡ್ ಡೆಲಿವರಿ ವ್ಯಾಪಾರ ಸಿಕ್ಕಾಪಟ್ಟೆ ಜೋರಾಗಿ ನಡೆಯುತ್ತಿದೆ ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಯಲ್ಲಿ ಈಗಾಗಲೇ ಹುಡುಗರ ಜತೆಯಲ್ಲಿ ಹುಡುಗಿಯರು ಕೂಡ ಫುಡ್ ಡೆಲಿವರಿ ವ್ಯವಸ್ಥೆ ಯೊಳಗೆ ಬಂದು ನಿಂತಿದ್ದಾರೆ ಕುಡ್ಲದ ಲ್ಲೂ ಈಗ ಡೆಲಿವರಿ ಬಾಯ್ಸ್ ಜತೆಯಲ್ಲಿ ಡೆಲಿವರಿ ಗರ್ಲ್ಸ್ ಕೂಡ ಸೇರಿಕೊಳ್ಳುತ್ತಿದ್ದಾರೆ.

ಒಂದು ಲೆಕ್ಕದ ಪ್ರಕಾರ ಮೂರು ಮಂದಿ ಹುಡುಗಿಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಉರ್ವದ ಮೇಘನಾ ಕೂಡ ಒಬ್ಬರು. ಅವರು ಬೇಸಿಕಲಿ ಬಿಎ ಸಾಹಿತ್ಯ ಓದಿದವರು ವಿದೇಶದಲ್ಲಿ ದುಡಿದು ಬಂದವರು ಆದರೂ ಈ ಫುಡ್ ಡೆಲಿವರಿ ಗರ್ಲ್ಸ್ ವ್ಯವಸ್ಥೆ ಯ ಪಾತ್ರವಾಗಬೇಕೆಂದು ಮುಂದೆ ಬಂದಿದ್ದಾರೆ. ಹುಡುಗಿಯರು ಯಾವುದಕ್ಕೂ ಕಮ್ಮಿ ಇಲ್ಲ ಎನ್ನುಎನ್ನುವುದಕ್ಕೆ ಇದೊಂದು‌ ಉತ್ತಮ ಸ್ಯಾಂಪಲ್ ಎನ್ನಲು ಯಾವುದೇ ಅಡ್ಡಿ ಮಾತು ಇಲ್ಲ.

ಕುಡ್ಲದಲ್ಲಿ ಇವರದ್ದೇ ಹೈ ಜೋಶ್‌ ಮಾರಾಯ್ರೆ

ಕುಡ್ಲದಲ್ಲಿ ಜೀತ್ ಮಿಲಾನ್ ರೋಚ್ ಅವರದ್ದೇ ಸುದ್ದಿ. ಕಾರಣ ಇಷ್ಟೇ ಜೂನ್ 15 ರಂದು ನಂದಿಗುಡ್ಡೆ ಸಶ್ಮಾನದಲ್ಲಿ ಪೂರ್ತಿ ಹತ್ತು ಗಂಟೆ ಬರೀ ಗುಂಡಿ ತೋಡಿ ಭರ್ತಿ 1052 ಗಿಡಗಳನ್ನು ನೆಟ್ಟಿದ್ದಾರೆ.

ಇದಕ್ಕೆ ಅವರ ಪತ್ನಿ ಸೆಲ್ಮಾ ಹಾಗೂ ಅವರ ಮಕ್ಕಳಾದ ಇತಾನ್, ನತಾನ್ ಹಾಗೂ ಸಹೋದರ ಸುಮಂತ್ ಸಾಥ್ ನೀಡಿದ್ದಾರೆ. ಇದೊಂದು ಅಪರೂಪದ ಕ್ಷಣ ಎಂದರೂ ತಪ್ಪಾಗಲಾರದು. ಕುಡ್ಲದಲ್ಲಿ ಹಸಿರು ಕ್ರಾಂತಿ ಇಂತಹ ಜನರಿಂದ ನಿರೀಕ್ಷೆ ಮಾಡಬಹುದು.

ಕುಡ್ಲ ಎಂದರೆ ಬೀಚ್ ಸಿಟಿ

ಕುಡ್ಲ ದಲ್ಲಿ ಒಂದಲ್ಲ ಎರಡಲ್ಲ ಭರ್ತಿ 10 ಕ್ಕೂ ಅಧಿಕ ಬೀಚ್ ಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ವಿಶೇಷ ಎಂದರೆ ಕರ್ನಾಟಕ ದ ಯಾವುದೇ ಊರಲ್ಲಿ ಇಷ್ಟು ಬೀಚ್ ಗಳಿರುವ ನಗರಗಳಿಲ್ಲ ಅದಕ್ಕೂ ಮುಖ್ಯವಾಗಿ ಇಲ್ಲಿರುವ ಎಲ್ಲ ಬೀಚ್ ಗಳು ಸಿಟಿಯ 20 ಕಿಮೀ ದೂರದಲ್ಲಿದೆ.

ಕುಡ್ಲದಲ್ಲಿ ಮಳೆರಾಯನ ಆಟಕ್ಕೆ ರಸ್ತೆಯಲ್ಲ ತೋಡು

ಮಳೆರಾಯನ ಆಗಮನಕ್ಕೆ ಕಾದು ಕೂತಿದ್ದ ಕುಡ್ಲದ ಜನರು ಈಗ ಫುಲ್ ಚಂಡಿ ಮುದ್ದೆ ಆಗಿದ್ದಾರೆ. ಎರಡು ದಿನಗಳಿಂದ ನಿಧಾನವಾಗಿ ಇಳೆಗೆ ಬಂದ ಮಳೆರಾಯ ಪೂರ್ಣ ಪ್ರಮಾಣದಲ್ಲಿ ತನ್ನ ಕೆಲಸ ಆರಂಭ ಮಾಡಿದ್ಸಾನೆ. ವಿಶೇಷ ಎಂದರೆ ಮಳೆರಾಯನ ಆಗಮನದ ನಿರೀಕ್ಷೆ ಇಟ್ಟು ಕೊಳ್ಳ ದ ಸ್ಥಳೀಯ ಆಡಳಿತ ತನ್ನ ಕೆಲಸವನ್ನು ಪೂರ್ಣ ಗೊಳಿಸದೇ ಇರುವುದರಿಂದ ರಸ್ತೆ ಎಲ್ಲವೂ ತೋಡುಗಳಾಗಿ ಬದಲಾಗಿದೆ. ತೋಡುಗಳು ಪೂರ್ಣ ಪ್ರಮಾಣದಲ್ಲಿ ಹೂಳು ತೆಗೆಯದ ಪರಿಣಾಮ ಪೂರ್ತಿ ತುಂಬಿ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ.

ಪವಾಡ ಪುರುಷ ಸಂತ ಅಂತೋನಿ ಹಬ್ಬದ ಸಂಭ್ರಮ

ಕ್ರೈಸ್ತ ಸಮುದಾಯದ ಧಾರ್ಮಿಕ ನಂಬಿಕೆಯಲ್ಲಿ ವಿಶಿಷ್ಟ ಸ್ಥಾನದಲ್ಲಿರುವ ಸಂತರ ಪಟ್ಟಿಯಲ್ಲಿ ಸಂತ ಅಂತೋನಿ ಅವರ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ವಿಶೇಷ ಎಂದರೆ ಮಂಗಳೂರು ಧರ್ಮಪ್ರಾಂತ್ಯದ ಬನ್ನೂರು, ಅಲ್ಲಿಪಾದೆ, ನಾರಾವಿ, ಉಜಿರೆ, ಕೂಳೂರು, ಪೆರ್ಮಾಯಿ ಚರ್ಚ್‌ಗಳ ಜತೆಗೆ ಮಿಲಾಗ್ರಿಸ್‌ನಲ್ಲೂ ಇವರ ಪುಣ್ಯ ಕ್ಷೇತ್ರವಿದೆ. ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಕೂಡ ಪವಾಡ ಪುರುಷ ಸಂತ ಅಂತೋನಿ ಅವರ ಭಕ್ತಿಗೆ ಪೂರಕವಾದ ಸಾಕ್ಷ್ಯಗಳು.
ವಿಶೇಷ ಎಂದರೆ ಸಂತ ಅಂತೋನಿ ಅವರ ಹಬ್ಬ ಪ್ರತಿ ವರ್ಷನೂ ಮಳೆಗಾಲದಲ್ಲಿಯೇ ಬರುತ್ತದೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿ ಇರುತ್ತದೆ.
ಪವಾಡ ಪುರುಷನ ಕೃಪೆಗೆ ಪಾತ್ರರಾದರೆ ಎಲ್ಲ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಭಕ್ತ ಸಮೂಹ ಹಬ್ಬವನ್ನು ಜೂ.೧೩ರಂದು ಆಚರಿಸುತ್ತಾರೆ.