Author: Team Kudla City

ಸಾಮಾನ್ಯ ಜ್ವರಕ್ಕೆ ಪರಿಪೂರ್ಣ ಮದ್ದು !

ಕರಾವಳಿಯಲ್ಲಿ ಒಂದೆಡೆ ಮಲೇರಿಯಾ ಜತೆಗೆ ಡೆಂಗೆಯ ಗುದ್ದಾಟದ ನಡುವೆ ಕೂಡ ಸಾಮಾನ್ಯ ಜ್ವರಕ್ಕೂ ಈಗ ಜನರಲ್ಲಿ ಭಯ ಹುಟ್ಟಿಕೊಂಡಿದೆ. ಆಗಾಗ ಬರುವ ಮಳೆಗೆ ಕುಟುಂಬದ ಸದಸ್ಯರು ಜ್ವರಕ್ಕೆ ಗುರಿಯಾಗುತ್ತಿದ್ದಾರೆ ಎನ್ನುವ ಮಾತುಗಳು ಪದೇ ಪದೇ ಕುಡ್ಲದ ಜನರಿಂದ ಕೇಳಿ ಬರುತ್ತಿದೆ.

ಯಾವ ವಿಧಾನದ ಚಿಕಿತ್ಸಾ ಕ್ರಮ ಇದಕ್ಕೆ ಸೂಕ್ತ ಎನ್ನುವ ಗೊಂದಲದಲ್ಲಿ ಇರುವವರಿಗೆ ಇಲ್ಲೊಂದು ಮಾರ್ಗದರ್ಶನವಿದೆ. ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ನಿಮ್ಮ ಸಾಮಾನ್ಯ ಜ್ವರಕ್ಕೆ ಪರಿಪೂರ್ಣ ಔಷಧ ಜತೆಗೆ ನಿಮ್ಮ ದೇಹ ಪ್ರಕೃತಿಗೆ ತಕ್ಕಂತ ಚಿಕಿತ್ಸೆ ಸಿಗುತ್ತದೆ.

ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.

ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ತುಳುವರು ಆಟಿ ಕಷಾಯ ಯಾಕೆ ಕುಡಿಯುತ್ತಾರಾ ಗೊತ್ತಾ?

ತುಳುನಾಡಿನ ಜನಕ್ಕೆ ಆಟಿ ಅಮವಾಸ್ಯೆ ಒಂದು ವಿಶೇಷ ಹಬ್ಬ. ಅಂದು ಹಾಲೆ ಮರದ ತೊಗಟೆಯ ರಸ ತೆಗೆದು ಕುಡಿಯುವ ಪದ್ಧತಿ ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ ಬೆಳೆದು ಬಂದಿದೆ. ಅಗಸ್ಟ್ 1 ರಂದು ಆಟಿ ಅಮವಾಸ್ಯೆ. ಈ ಅಮವಾಸ್ಯೆಯ ಮದ್ದು ಕುಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವೈದ್ಯಲೋಕ ಹೇಳುತ್ತದೆ.

ದೇಹದೊಳಗಿನ ನಂಜಿನ ಅಂಶಗಳನ್ನು ತೆಗೆಯುವ ಶಕ್ತಿ ಹಾಲೆಮರದ ರಸಕ್ಕಿದೆ. ಇದು ಕಿಡ್ನಿ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಆಟಿ ಅಮವಾಸ್ಯೆಯಂದು ಔಷಧೀಯ ಗುಣ ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಲೆ ಮರದ ರಸ ಕುಡಿದ ನಂತರ ಮೆಂತೆಯ ಗಂಜಿ ಮಾಡುವ ಕ್ರಮ ಇದೆ. ಮರ ರಸದಿಂದ ದೇಹಕ್ಕಾಗುವ ಉಷ್ಣಬಾದೆಯನ್ನು ಸರಿಪಡಿಸುತ್ತದೆ.

ಹಾಲೆ ಮರದ ಔಷಧಗಳೊಂದಿಗೆ ಮಂತ್ರ, ತಂತ್ರ ಔಷಧ ಪರಿಕಲ್ಪನೆಗಳು ಸೇರಿ ಹೋಗಿವೆ. ಔಷಧೀಯ ಗುಣದ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟರೂ ಅದನ್ನು ಬೆಳಕು ಹರಿಯುವ ಮೊದಲೇ ಸಂಗ್ರಹಿಸಬೇಕು. ಹಾಲೆ ಮರದ ತೊಗಟೆಯನ್ನು ಕೂಡ ಹೊತ್ತಿನಲ್ಲಿ ತಂದರೆ ಅದರಲ್ಲಿರುವ ಔಷಧೀಯ ಗುಣ ಪೂರ್ತಿಯಾಗಿ ದೊರೆಯುತ್ತದೆ. ಇದರ ಜತೆಯಲ್ಲಿ ಇಂದಿನ ಜನಕ್ಕೆ ಹಾಲೆ ಮರದ ಪರಿಚಯ ಕೂಡಾ ಕಡಿಮೆ ಈ ಕಾರಣದಿಂದ ಹಾಲೆ‌‌ಮರ‌ ಎಂದು ದೃಢಪಟ್ಟ ಬಳಿಕವಷ್ಟೇ ಅದರ ಕೆತ್ತೆಯ ರಸ ಕುಡಿದರೆ ಒಳ್ಳೆಯದು ಎನ್ನುವುದು ಕುಡ್ಲ ಸಿಟಿಯ ಕಾಳಜಿಯ ಮಾತು.

ಕುಡ್ಲದಲ್ಲಿ ಮೂಡಿದ ಕೆಫೆ ಕಾಫಿ ಡೇ ಸಿದ್ಧಾರ್ಥ್‌ರ ಬದುಕು

ಸರಿಯಾಗಿ ಮೂರು ವರ್ಷಗಳ ಹಿಂದೆ ಅಂದ್ರೆ 2016 ಸೆಪ್ಟೆಂಬರ್ 10 ರಂದು ಬೋಂದೆಲ್‌ನಲ್ಲಿರುವ ಎಂ.ಎಸ್.ಎನ್. ಎಮ್ ಬೆಸೆಂಟ್ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಸಂಸ್ಥೆಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಣೇಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಸಂವಾದ ಮಾಲಿಕೆಯ ಕಾರ್ಯಕ್ರಮದಲ್ಲಿ ಖುದ್ಧು ಕೆಫೆ ಕಾಫೀ ಡೇ ಸಿದ್ಧಾರ್ಥ್ ವಿ.ಜಿ ಅವರು ತಮ್ಮ ಹಾಗೂ ಕುಡ್ಲದ ಕತೆಯನ್ನು ಬಹಳ ಚೆನ್ನಾಗಿ ಬಿಡಿಸಿ ಹೇಳಿದ್ದರು. ಕುಡ್ಲಕ್ಕೂ ತಮಗಿರುವ ಸಂಬಂಧವನ್ನು ಅವರ ಮಾತಿನಲ್ಲಿ ಇಲ್ಲಿ ಕೇಳಿ…

ಕರಾವಳಿಯ ಅಲೋಶಿಯಸ್ ಶಿಕ್ಷಣ ಸಂಸ್ಥೆ ಯಲ್ಲಿ ನನ್ನ ಬದುಕು ರೂಪುಗೊಂಡಿತು. ಈ ಬಳಿಕ ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ವಿಚಾರದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದೆ. ಹಂಪನಕಟ್ಟೆಯಲ್ಲಿರುವ ಪುಸ್ತಕ ಅಂಗಡಿಯೊಂದರಲ್ಲಿ ಸಿಗುತ್ತಿದ್ದ ಅಮೂಲ್ಯವಾದ ಪುಸ್ತಕಗಳು ನನ್ನ ಓದುವಿಕೆಯ ಹಸಿವನ್ನು ಜಾಸ್ತಿ ಮಾಡಿತು. ಪಿಯುಸಿಯಲ್ಲಿದ್ದಾಗಲೇ ಎನ್‌ಡಿಎ ಪರೀಕ್ಷೆ ಬರೆದು ಪಾಸ್ ಮಾಡಿದ್ದೆ. ಆದರೆ ಯೋಧನಾಗುವ ಕನಸ್ಸು ಒಂದು ಗೂಡಲೇ ಇಲ್ಲ. ಅಲ್ಲಿಂದ ಇನ್‌ವೆಸ್ಟ್ ಬ್ಯಾಂಕರ್ ಕನಸು ಕಂಡೆ ಅದು ಅಲ್ಲಿಗೆ ಬಿದ್ದು ಹೋಯಿತು. ಎಲ್ಲವೂ ಬಿಟ್ಟು ಕಾಫಿ ಕ್ಷೇತ್ರದಲ್ಲಿ ಬೆಳೆದು ಬಂದಿದ್ದೇನೆ ಎಂದು ಕರಾವಳಿ ಜತೆಗಿನ ಒಡನಾಟವನ್ನು ವಿ.ಜಿ. ಸಿದ್ದಾರ್ಥ ಬಿಚ್ಚಿ ಇಟ್ಟಿದ್ದರು.

ಕಣಿಲೆ ಕಂಡ್ರೆ ಕುಡ್ಲದವರಿಗೆ ಬರೀ ಖುಷಿ

ಬಿದಿರಿನ ಕಣಿಲೆ ಎಂದರೆ ಕುಡ್ಲದವರಿಗೆ ಬಹಳ ಇಷ್ಟ. ಮಳೆಗಾಲದಲ್ಲಂತೂ ಇದರ ಪಲ್ಯ ಅಥವಾ ಯಾವುದೇ ಐಟಂ ಮಾಡಿದ್ರು ಚಪ್ಪರಿಸಿಕೊಂಡು ತಿನ್ನುತ್ತಾರೆ.

ವಿಶೇಷ ಎಂದರೆ ಕಣಿಲೆಯಲ್ಲಿ ಔಷಧೀಯ ಗುಣವಿದೆ. ಅದಕ್ಕೂ ಮುಖ್ಯವಾಗಿ ಕಡಿಮೆ ಕ್ಯಾಲೋರಿ, ಮಿತವಾದ ಕಾರ್ಬೋಹೈಡ್ರೇಟ್ ಸೇರಿದಂತೆ ಪಚನ ಕ್ರಿಯೆ ಗೂ ಇದು ಸಹಕಾರಿ. ಹಳೆಯ ಕಾಲದಲ್ಲಿ ತುಳುನಾಡಿನ ಜನರು ಮಳೆಗಾಲದಲ್ಲಿ ಹೆಚ್ಚು ಇದನ್ನು ಬಳಸುತ್ತಿದ್ದರು ಈ ಮೂಲಕ ಮಳೆಗಾಲದ ರೋಗಗಳಿಂದ ಮುಕ್ತಿ ಪಡೆಯುತ್ತಿದ್ದರು ಈಗ ಬಿದಿರು ಕಡಿಮೆಯಾಗುತ್ತಿದೆ. ಕಣಿಲೆ ಕೂಡ ಸಿಗುತ್ತಿಲ್ಲ ಇಂಗ್ಲಿಷ್ ಔಷಧೀಯ ಮುಂದೆ ಈ ಕಣಿಲೆ ಕೂಡ ಸಪ್ಪೆಯಾಗಿದೆ.

ಕುಡ್ಲಕ್ಕೆ ಬಂತು ಫ್ರೆಶ್ ಫಿಶ್ ಮಾರಾಯ್ರೆ !

ಕುಡ್ಲದ ಮೀನು ಮಾರುಕಟ್ಟೆ ಗೆ ಕಳೆದ ನಾಲ್ಕೈದು ದಿನಗಳಿಂದ ತಾಜಾ ಮೀನುಗಳು ಬರುತ್ತಿದೆ. ಬಿಳಿ ಸಿಗಡಿ, ಅಡೆಮೀನ್, ಬೊಳ್ಳೆಂಜೀರ್ ಹೀಗೆ ಮೀನುಗಳ ಮೇಲೆ ಫ್ರೆಶ್ ಫಿಶ್ ಮೀನು ಮಾರುಕಟ್ಟೆ ಗೆ ದಾಂಗುಡಿ ಇಡುತ್ತಿದೆ.

ಮುಖ್ಯವಾಗಿ ರಾಣಿ ಬಲೆ ಹಾಗೂ ಪಟ್ಟೆಬಲೆಯ ನಾಡದೋಣಿಗಳು ಉತ್ತಮ ಮೀನುಗಾರಿಕೆ ಯನ್ನು ಮಾಡುತ್ತಿದೆ. ಕಳೆದ ಒಂದೂವರೆ ತಿಂಗಳಿನಿಂದ ಮದ್ರಾಸ್, ಓಮನ್ ಸೇರಿದಂತೆ ಫ್ರಿಜರ್ ಮೀನುಗಳ ನ್ನು ತಿಂದ ಕರಾವಳಿಯ ಮೀನು ಪ್ರಿಯರಿಗಂತೂ ಇದೊಂದು ಖುಷಿಯ ವಿಚಾರ.