ಕುಡ್ಲ ಮಾತ್ರವಲ್ಲ ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ಅತ್ತಿಯಾದ ಒತ್ತಡ, ವ್ಯಾಯಾಮ ಕೊರತೆಯ ಜತೆಯಲ್ಲಿ ಮೈಯಲ್ಲಿ ಕೊಲೆಸ್ಟ್ರಾಲ್ ಗೊತ್ತಿಲ್ಲದೇ ಜಾಗ ಪಡೆದುಕೊಂಡು ದುಡೂತಿತನ ಬೆಳೆದುಬಿಡುತ್ತದೆ. ಇಂತಹ ಕೊಲೆಸ್ಟ್ರಾಲ್‌ವನ್ನು ಸುಲಭದಲ್ಲಿ ತೆಗೆಯಲು ಹಿಜಾಮಾ ದಿ ಬೆಸ್ಟ್ ಟ್ರೀಟ್‌ಮೆಂಟ್. ಅದನ್ನು ನುರಿತ ವೈದ್ಯರು ಮಾತ್ರ ಮಾಡಿದರೆ ಇದಕ್ಕೆಲ್ಲ ಪರಿಹಾರ ಸಿಗುತ್ತದೆ.
ಕುದ್ರೋಳಿಯ ಆಯುರ್ ಹೆಲ್ತ್ ಕೇರ್‌ನಲ್ಲಿ ಇಂತಹ ಟ್ರೀಟ್‌ಮೆಂಟ್ ತಜ್ಞ ವೈದ್ಯರಿಂದ ನಡೆಯುತ್ತದೆ. ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.
Author: Team Kudla City
ಬೆಳ್ತಂಗಡಿ ತಹಸೀಲ್ದಾರ್ ರ ಜನ ಮೆಚ್ಚುವ ಕೆಲ್ಸ
ಇವರು ಬೇರೆ ಯಾರು ಅಲ್ಲ. ಬೆಳ್ತಂಗಡಿಯ ತಹಸೀಲ್ದಾರ್ ಗಣಪತಿ ಶಾಸ್ತ್ರಿ. ಇತ್ತೀಚಿಗೆ ಬಂದ ನೆರೆಯಿಂದಾಗಿ ಹಾನಿಗೊಳಗಾದದಂತಹ ಪ್ರದೇಶದಲ್ಲಿ ನೆರೆ ಪರಿಹಾರದ ಕಾರ್ಯದಲ್ಲಿ ನಿರತರಾಗಿರುವ ಬೆಳ್ತಂಗಡಿಯ ತಹಶೀಲ್ದಾರರು ಜನಸಾಮಾನ್ಯರಂತೆ ದಿನನಿತ್ಯದ ವಸ್ತುಗಳನ್ನು ನೆರೆ ಪೀಡಿತ ಪ್ರದೇಶಕ್ಕೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಇಂದು ಸೋಮಾರಿತನ ತೋರಿಸುವ ಅಧಿಕಾರಿಗಳಿಗೊಂದು ಪಾಠ.
ಕುಡ್ಲದ ವಿದ್ಯಾರ್ಥಿಗಳ ಮನಸ್ಸು ಗೆದ್ದ ಡಿಸಿ ಸೆಂಥಿಲ್ !
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಈ ಬಾರಿ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ಮಾಡುವ ಜತೆಯಲ್ಲಿ ಸಂದೇಶ ನೀಡುವ ವಿಶೇಷ ಅವಕಾಶ ಒದಗಿ ಬಂದಿತ್ತು.
ವಿಶೇಷವಾಗಿ ಸಂದೇಶದ ತುಂಬಾ ಕರಾವಳಿಯಲ್ಲಿ ಕಾಣಿಸಿಕೊಂಡ ನೆರೆಗೆ ಜನರು ಸ್ಪಂಧಿಸಿದ ರೀತಿ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಳುವ ಜತೆಯಲ್ಲಿ ಕರಾವಳಿಯ ಜನರು ಭಯಬೀಳುವ ಅಗತ್ಯವಿಲ್ಲ ಜಿಲ್ಲಾಡಳಿತ ನಿಮ್ಮ ಜತೆಯಲ್ಲಿ ಇದೆ ಎನ್ನುವ ಭರವಸೆ ತುಂಬುವ ಮಾತುಗಳು ಇಡೀ ಜಿಲ್ಲೆಯ ಜನರಿಗೆ ಹೊಸ ವಿಶ್ವಾಸವನ್ನು ತಂದುಕೊಟ್ಟಿದೆ.
ಅವರ ಮಾತಿನಲ್ಲಿ ಹೇಳುವುದಾದರೆ ಒಂದು ಪೀಳಿಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿತು. ಈಗ ನಾವೆಲ್ಲ ಭಾರತವನ್ನು ವಿಶ್ವತ ಅತ್ಯುನ್ನತ ಸ್ಥಾನಕ್ಕೆ ಏರಿಸಲು ನಮ್ಮ ಜೀವನವನ್ನು ತೊಡಗಿಸಿಕೊಂಡು ಇತಿಹಾಸ ಸೃಷ್ಟಿಸೋಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಾಂತಿಯಿಂದ ಬಾಳು ಕಟ್ಟಿಕೊಳ್ಳಲು ಶ್ರಮಿಸೋಣ ಎನ್ನುವುದು ಇಡೀ ಸಂದೇಶದ ಸಾರ.
ಅಂದಹಾಗೆ ಡಿಸಿ ಸೆಂಥಿಲ್ ಬರೀ ಕರಾವಳಿಯ ಜನರಿಗೆ ಮಾತ್ರವಲ್ಲ ಇಲ್ಲಿ ಶೈಕ್ಷಣಿಕ ಬದುಕು ಕಟ್ಟಲು ಬಂದವರಿಗೂ ಅವರೆಂದರೆ ಬಹಳ ಇಷ್ಟ. ಮಳೆ ಬಂದಾಗ ಅವರು ಮಕ್ಕಳು ಕುರಿತು ವಹಿಸುವ ಕಾಳಜಿಯಿಂದ ಮಕ್ಕಳ ಪ್ರೀತಿಯ ಡಿಸಿ ಆಗಿದ್ದಾರೆ ಎನ್ನುವುದಕ್ಕೆ ಇಂದಿನ ಕಾರ‍್ಯಕ್ರಮದಲ್ಲಿ ಸೆಲ್ಫಿ ತೆಗೆದ ವಿದ್ಯಾರ್ಥಿಗಳೇ ಸಾಕ್ಷಿ.
ಕುಡ್ಲದ ಕಾರ್ನಾಡ್ ಸದಾಶಿವ ರಾವ್ ರಸ್ತೆ ಕತೆ…
ಕಾರ್ನಾಡ್ ಸದಾಶಿವ ರಾವ್ ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವರಿವರು. ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ ಕಾರ್ನಾಡ್ ಎಂದೇ ಚಿರಪರಿಚಿತರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು.
ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ. ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.
1936 ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬಯಿಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9 ರಂದು ಸಾವನ್ನಪ್ಪಿದ್ದರು. ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು.
ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು ಧರ್ಮರಾಜ ಅಂತ ಕರೆದಿದ್ದರು. ಅಂದಹಾಗೆ ಅವರ ನೆನಪಿಗಾಗಿ ಕುಡ್ಲದ ಕೆ.ಎಸ್.ರಾವ್ ರಸ್ತೆ ಅವರ ನೆನಪಿಗಾಗಿ ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳು, ಬ್ಯಾಂಕ್‌ಗಳು ಕಾರ‍್ಯಾಚರಿಸುತ್ತಿದೆ.
pics: Nandan Bhat
ಚಾರ್ಮಾಡಿಯಲ್ಲಿ ಒಂದು ತಿಂಗಳು ಹೋಗಲೇ ಬೇಡಿ ಮಾರಾಯ್ರೆ
ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಸೆಕ್ಷನ್‌ನಲ್ಲಿ ಅಪಾರ ಮಳೆಯಿಂದಾಗಿ ಗುಡ್ಡ ಕುಸಿತಗೊಂಡು ಸಂಚಾರ ಪೂರ್ಣವಾಗಿ ಒಂದು ತಿಂಗಳ ಕಾಲ ಎಲ್ಲ ವಾಹನಗಳ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಆ.14 ರಂದು ಮಧ್ಯ ರಾತ್ರಿ 12ಗಂಟೆಯಿಂದ ಸೆಪ್ಟೆಂಬರ್ 14ರ ಮಧ್ಯ ರಾತ್ರಿ 12 ವರೆಗೆ ಸಂಚಾರ ಸ್ಥಗಿತಗೊಂಡಿದೆ.
ಇದರ ಬದಲು ಉಜಿರೆ- ಧರ್ಮಸ್ಥಳ- ಕೊಕ್ಕಡ-ಗುಂಡ್ಯ- ಶಿರಾಡಿ ಮೂಲಕ ಸಂಚಾರ ಮಾಡಬೇಕು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಜನ್ನಾಪುರ- ಆನೆಮಹಲ್- ಶಿರಾಡಿ- ಗುಂಡ್ಯ ಮೂಲಕ ಸಂಚರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.