Tagged: school

ಸರಕಾರಿ ಶಾಲೆಗೆ ಮರುಹುಟ್ಟು ನೀಡಿದ ಮಗ್ಗಿ ಮೇಡಂ

ಸರಕಾರಿ ಶಾಲೆ ಎಂದರೆ ಮೂಗು ಮುರಿದುಕೊಳ್ಳುವವರೇ ಜಾಸ್ತಿ. ಆದರೆ ಬೊಕ್ಕಪಟ್ಣ-3 ಶಾಲೆಯ ವಿದ್ಯಾರ್ಥಿಗಳ ವಿಜ್ಞಾನ ಪ್ರಯೋಗವೊಂದು ರಾಷ್ಟ್ರ ಮಟ್ಟದಲ್ಲಿಯೇ ಗುರುತಿಸಿಕೊಂಡಿರುವ ಮೂಲಕ ಅಗಸ್ತ್ಯ ಇಂಟರ್‍ನ್ಯಾಷನಲ್‍ಫೌಂಡೇಶನ್ ಈ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಇಂಗಿತ ವ್ಯಕ್ತಪಡಿಸಿದೆ. ಬೊಕ್ಕಪಟ್ಣ-3 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಪ್ರಿಯಾಂಕಾ, ರೇಖಾ, ಪ್ರೀತಿ ಹಾಗೂ 6ನೇತರಗತಿಯ ಪಲ್ಲವಿ, ಪ್ರೇಮಾ ಜತೆಗೂಡಿ ಹಡಗಿನಲ್ಲಿ ಆಗುವ ತೈಲ ಸೋರಿಕೆಯಿಂದ ಹೊರಚೆಲ್ಲಿದ ತೈಲವನ್ನು ಯಾವರೀತಿಯಲ್ಲಿ ಮತ್ತೆ ಪಡೆದುಕೊಳ್ಳಬಹುದು ಎನ್ನುವ ವಿಚಾರದಮೇಲೆ ವಿಜ್ಞಾನದ ಒಂದು ಪ್ರಯೋಗ ರಾಷ್ಟ್ರಮಟ್ಟದ ಐನ್‍ಸ್ಟೀನ್ ಹಂಟ್ ಸ್ಪರ್ಧೆಯಲ್ಲಿ ಗಮನ ಸೆಳೆಯುವ ಜತೆಗೆಬೆಂಗಳೂರು ಮೂಲದ ಅಗಸ್ತ್ಯ ಇಂಟರ್‍ನ್ಯಾಷನಲ್‍ಫೌಂಡೇಶನ್‍ನ ಗಮನ ಕೂಡ ಸೆಳೆದುಬಿಟ್ಟಿದೆ.
ಈಸಂಸ್ಥೆಯವರು ಈ ಪ್ರಯೋಗಕ್ಕೆ ಮೆಚ್ಚಿದ್ದು ಮಾತ್ರವಲ್ಲ ಇದನ್ನುಮತ್ತಷ್ಟು ಅಭಿವೃದ್ಧಿ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವನ್ನುನೀಡುವ ಕೆಲಸ ಮಾಡಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗಮನಸೆಳೆದ ಮಕ್ಕಳು:ಮಂಗಳೂರಿನ ಕಾಗ್ನಿಸೆಂಟ್ ಸಂಸ್ಥೆ ತನ್ನ ಔಟ್ ರೀಚ್‍ಕಾರ್ಯಕ್ರಮದ ಮೂಲಕ ಅಲ್ಲಿನ ಸಿಬ್ಬಂದಿ ಕೆಲಸದ ಬಿಡುವಿನವೇಳೆಯಲ್ಲಿ ಪೂರ್ಣವಾಗಿ ಈ ಬೊಕ್ಕಪಟ್ಣ-3 ಶಾಲೆಯಮಕ್ಕಳಿಗೆ ಇಂಗ್ಲಿಷ್ ಕಲಿಕೆ, ನೃತ್ಯ ಸೇರಿದಂತೆ ಪ್ರತಿಯೊಂದುವಿಚಾರದಲ್ಲೂ ನೆರವಾಗುತ್ತಿದ್ದಾರೆ.
ಇದರ ಜತೆಯಲ್ಲಿಕಾಗ್ನಿಸೆಂಟ್ ಸಂಸ್ಥೆ ಶಾಲಾ ಮಟ್ಟ, ತಾಲೂಕು ಮಟ್ಟ ಹಾಗೂರಾಷ್ಟ್ರ ಮಟ್ಟದಲ್ಲಿ ಐನ್‍ಸ್ಟೀನ್ ಹಂಟ್ ಎನ್ನುವ ವಿಜ್ಞಾನ ಪ್ರಯೋಗಗಳಿಗೆ ಒಂದು ಸ್ಪರ್ಧೆ ಹಮ್ಮಿಕೊಳ್ಳುತ್ತದೆ. ಈಸ್ಪರ್ಧೆಯಲ್ಲಿ ದೇಶದ ನಾನಾ ರಾಜ್ಯಗಳಿಂದ 19 ಶಾಲೆಗಳುಭಾಗವಹಿಸಿದ್ದವು. ವಿಶೇಷವಾಗಿ ಸರಕಾರಿ ಶಾಲೆಯಾದ ಬೊಕ್ಕಪಟ್ಣ-3ವಿದ್ಯಾರ್ಥಿಗಳು ಮಳೆಕೊಯ್ಲಿನಲ್ಲಿ ಸಂಗ್ರಹವಾದ ನೀರನ್ನುಜಲಶಕ್ತಿಯಿಂದ ನೀರನ್ನು ಮೇಲೆತ್ತಿಕೊಂಡು ಕೈ ತೋಟಕ್ಕೆ ನೀಡುವ ವಿಜ್ಞಾನ ಮಾದರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಬಹುಮಾನ ಪಡೆದಿತ್ತು. ಇದರ ಜತೆಗೆ ತೈಲ ಸೋರಿಕೆಯವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಭಾಗವಹಿಸಿತ್ತು. ಅಗಸ್ತ್ಯ ಫೌಂಡೇಶನ್‍ನವರು ತೀರ್ಪುಗಾರರಾಗಿದ್ದರು. ಆನ್‍ಲೈನ್‍ಮೂಲಕ ನಡೆದ ಸ್ಪರ್ಧೆ ಯಲ್ಲಿ ಬೊಕ್ಕಪಟ್ಣ-3 ಶಾಲೆಯವಿದ್ಯಾರ್ಥಿಗಳು ತಮ್ಮ ಪ್ರಯೋಗವನ್ನು ತೋರಿಸಿಕೊಟ್ಟಿದ್ದರು.
ಅದರಲ್ಲೂ ವಿಶೇಷ ವಾಗಿ ಹಡಗಿನಲ್ಲಿ ತೈಲ ಸೋರಿಕೆಯಿಂದಮರಳಿ ತೈಲವನ್ನು ಪಡೆಯುವ ವಿಜ್ಞಾನ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿ ಸಲು ತಾವು ಪ್ರೋತ್ಸಾಹ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಾಗ್ದೆಲಿನ್ ಶಾಲೆಗೆ ಕೈ ತೋಟದ ತರಕಾರಿ ಬೆಂಡೆ, ಬದನೆ, ಅಲಸಂಡೆ ಹೀಗೆ ತರಹೇವಾರಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಇಸ್ಕಾನ್ ಸಂಸ್ಥೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರೆ, ತರಕಾರಿಬೆಳೆದಂತೆ ಮುಖ್ಯ ಶಿಕ್ಷಕಿಯ ಉಸ್ತುವಾರಿಯಲ್ಲಿ ತರಕಾರಿ ಪಲ್ಯಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳಿಗೆ ನೀಡಲಾಗುತ್ತದೆ. ಮತ್ತೊಂದೆಡೆ ಬಾಳೆಗೊನೆಯಿಂದ ಬಾಳೆಹಣ್ಣುಗಳನ್ನು ಮಕ್ಕಳಿಗೆ ನೀಡುವ ಕೆಲಸವಾಗುತ್ತಿದೆ.ಅಡಕೆ ಮರ, ವೀಳ್ಯದೆಲೆ ಬೆಳೆಸುವ ಉದ್ದೇಶಇಟ್ಟುಕೊಳ್ಳಲಾಗಿದೆ. ಇದರ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುವ ಕಾರ್ಯವೂ ನಡೆಯುತ್ತಿದೆ.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕುತ್ತಾ ನಂತರ ಅದನ್ನುವಿಜ್ಞಾನದ ಪ್ರಯೋಗ ರೂಪಕ್ಕೆ ಇಳಿಸಿಕೊಂಡು ಅದನ್ನೇ ಶಾಲೆಯ ಅಭಿವೃದ್ಧಿಗೆ ಬಳಸುತ್ತಾರೆ. ಜಲಶಕ್ತಿಯ ಮೂಲಕ ನೀರು ಎತ್ತುವ ಪ್ರಯೋಗವನ್ನು ಶಾಲೆಯಲ್ಲಿ ಮಾಡಲಾದ ಕೈತೋಟಕ್ಕೆ ಬೇಸಿಗೆಯಲ್ಲಿ ನೀರು ಹಾಕಲು ವಿದ್ಯುತ್ ಅಭಾವ ಇರುತ್ತದೆ. ಈ ಸಮಯದಲ್ಲಿ ಜಲಶಕ್ತಿಯ ಮೂಲಕ ನೀರು ಎತ್ತಿಕೊಡುವ ಮೂಲಕ ವಿದ್ಯುತ್ ಉಳಿತಾಯ ಮಾಡುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ. -ಮಾಗ್ದೆಲಿನ್ ಪ್ರಭಾರ ಮುಖ್ಯ ಶಿಕ್ಷಕಿ, ಬೊಕ್ಕಪಟ್ಣ-3 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಕಾಸರಗೋಡಿನ ಸರಕಾರಿ ಶಾಲೆಯಲ್ಲಿ ಒಂಬತ್ತು ಭಾಷೆಗಳ ಕಲರವ

ಸರಕಾರಿ ಶಾಲೆಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ, ಇಂಗ್ಲಿಷ್ ಕಲಿಯುವುದು ಸಾಮಾನ್ಯ. ಆದರೆ ಕಾಸರಗೋಡು ಸಮೀಪದ ಪಾಂಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ತುಳು, ಕೊಂಕಣಿ, ಮರಾಠಿ ಸೇರಿದಂತೆ ಸುಮಾರು ಒಂಬತ್ತು ಭಾಷೆಗಳ ಪರಿಚಯ ಮಾಡಿಕೊಡಲಾಗುತ್ತಿದೆ.

ಹಳ್ಳಿ ಪ್ರದೇಶದಲ್ಲಿರುವ ಪಾಂಡಿ ಶಾಲೆಯಲ್ಲಿ ಅಸೆಂಬ್ಲಿ ವೇಳೆ ತುಳು, ಕನ್ನಡ, ಮರಾಠಿ, ಕೊಂಕಣಿ, ಅರೇಬಿಕ್, ಮಲಯಾಳ, ಹಿಂದಿ, ಇಂಗ್ಲಿಷ್, ಬ್ಯಾರಿ ಭಾಷೆಯ ಸೊಗಡು ಹರಿಯುತ್ತದೆ. ನಾರಾಯಣ ದೇಲಂಪಾಡಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ವಿದ್ಯಾರ್ಥಿಗಳ ವಿಕಸನಕ್ಕಾಗಿ ಈ ಕ್ಲಾಸ್ ಅಸೆಂಬ್ಲಿ ಎಂಬ ವಿನೂತನ ಯೋಜನೆ ಆರಂಭಿಸಿದ್ದರು.

ಈಗ ವಾರದಲ್ಲಿ ಎರಡು ದಿನ, ಸೋಮವಾರ ಮತ್ತು ಗುರುವಾರ ಶಾಲೆಯಲ್ಲಿ 9ಕ್ಕೂ ಹೆಚ್ಚು ಭಾಷೆಗಳನ್ನು ಪರಿಚಯ ಮಾಡಿಕೊಡಲಾಗುತ್ತಿದೆ. ಇಲ್ಲಿ 12ರ ವರೆಗೆ ತರಗತಿಗಳು ಇವೆಯಾದರೂ ಈ ಚಟುವಟಿಕೆಯನ್ನು 1-10ನೇ ತರಗತಿಯ ಮಕ್ಕಳಿಗೆ ಮಾತ್ರ ನಡೆಸಲಾಗುತ್ತಿದೆ.
ಬೆಳಗ್ಗಿನ ಪ್ರಾರ್ಥನೆ ಸಮಯದಲ್ಲಿ ಸುಮಾರು 12 ವಿದ್ಯಾರ್ಥಿಗಳು ಎದುರು ನಿಂತು ಒಂದೊಂದು ಭಾಷೆಯಲ್ಲಿ ಗೀತಾ ವಾಚನ, ವಾರ್ತೆಗಳು, ಪುಸ್ತಕ ಪರಿಚಯ, ಚಿಂತನೆ, ದಿನ ವಿಶೇಷ ಇತ್ಯಾದಿ ನಡೆಸುತ್ತಾರೆ. ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ಸರಿಯುತ್ತರ ನೀಡಿದವರಿಗೆ ಬಹುಮಾನ ನೀಡಲಾಗುತ್ತದೆ. ಪ್ರತೀ ಬಾರಿ ತರಗತಿ, ವಿದ್ಯಾರ್ಥಿಗಳು ಬದಲಾಗುತ್ತಾರೆ.

ಪಾಂಡಿ ಪ್ರೌಢಶಾಲೆಯು ಕಾಸರಗೋಡಿನಿಂದ ಸುಮಾರು 40 ಕಿ.ಮೀ., ಅಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಮುಖ್ಯ ಶಿಕ್ಷಕರಾಗಿದ್ದ ನಾರಾಯಣ ದೇಲಂಪಾಡಿ ಆರಂಭಿಸಿದ ಚಟುವಟಿಕೆಗಳು ಶಾಲೆಯ ಸ್ವರೂಪವನ್ನೇ ಬದಲಾಯಿಸಿವೆ.

ದ.ಕದಲ್ಲಿ ಇನ್ನು ಆ.13ಕ್ಕೆ ಶಾಲಾ ಕಾಲೇಜು ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.10ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ. ಇದರ ಜತೆಯಲ್ಲಿ ಆ.11 ಭಾನುವಾರ ಹಾಗೂ ಆ.12ರಂದು ಬಕ್ರೀದ್ ಹಬ್ಬದ ಗೌಜಿ ಇರುವುದರಿಂದ ಎಲ್ಲವೂ ಮಕ್ಕಳಿಗೆ ರಜೆಯಾಗಿ ಪರಿವರ್ತನೆಯಾಗಿದೆ ಈ ಮೂಲಕ ಆ.13ರ ಬಳಿಕ ಸರಿಯಾಗಿ ಮಳೆ ಬಿಟ್ಟರೆ ಶಾಲಾ ಕಾಲೇಜು ಆರಂಭವಾಗುವ ನಿರೀಕ್ಷೆಯಿದೆ.

ಕುಡ್ಲದ ಮಳೆಗೆ‌ ಮೂರನೇ ದಿನನೂ ರಜೆ !

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.9ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ.

ಕುಡ್ಲದ ಮಳೆಗೆ ಮತ್ತೆ ಶಾಲೆ,ಕಾಲೇಜಿಗೆ ರಜೆ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಆ.8ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.