Tagged: puttur

ಪುತ್ತೂರಿನ ಮುತ್ತುಗಳು ಬೆಳೆದ ದೇವಸ್ಥಾನ

ಈ ಕೆರೆಯಲ್ಲಿ ಮುತ್ತುಗಳು ಸಿಕ್ಕಿತ್ತು ಇದೇ ಕಾರಣದಿಂದ ಪುತ್ತೂರು ಎನ್ನುವ ಊರಿಗೆ ಮುತ್ತು(ಹವಳ)ಗಳ ಊರು ಎಂದೇ ಕರೆಯಲಾಗುತ್ತದೆ. ಮುತ್ತು ಸಿಕ್ಕಿದ ಶ್ರೀಮಹಾಲಿಂಗೇಶ್ವರ ದೇವರ ಕೆರೆಯ ವಿಶೇಷತೆ ಎಂದರೆ ದೇವಳದ ಯಾವುದೇ ಪೂಜೆ ಕಾರ್ಯಕ್ಕೆ ಈ ನೀರನ್ನು ಬಳಸುತ್ತಿಲ್ಲ.

ತೀರ್ಥ ನೀಡುವ ವಿಚಾರವಾಗಲಿ ಅಥವಾ ಭಕ್ತರು ಸ್ನಾನ ಮಾಡುವುದಕ್ಕೆ ಈ ನೀರು ಬಳಕೆಯಾಗುತ್ತಿಲ್ಲ. ಇಡೀ ದ.ಕ ಅಥವಾ ರಾಜ್ಯದ ದೇವಳದ ಕೆರೆಗಳಲ್ಲಿ ಇಲ್ಲಿಯ ಕೆರೆ ಬಹಳ ವಿಶೇಷತೆಯನ್ನು ಹೊಂದಿದೆ. ಕೆರೆಯಲ್ಲಿ ಸಾಕಷ್ಟು ಸಂಖ್ಯೆಯ ಬಣ್ಣ ಬಣ್ಣದ ಮೀನುಗಳನ್ನು ನೋಡುವುದು ಭಕ್ತರ ಪಾಲಿಗಂತೂ ವಿಶೇಷತೆಯೇ ಹೌದು ಎನ್ನಬಹುದು.

ಈಗ ವಿಪರೀತ ಬಿಸಿಲು ಇರುವುದರಿಂದ ಈ ಪುಷ್ಕರಣಿಯ ಸುತ್ತಮುತ್ತ ಮೀನುಗಳಿಗಾಗಿ ಕಾರಂಜಿ ಮಾಡುವ ಮೂಲಕ ಅಮ್ಲ ಜನಕ ನೀಡುವ ಕೆಲಸವಾಗುತ್ತಿದೆ. ಅದರಲ್ಲೂ‌ ಮುಖ್ಯವಾಗಿ ಈ ಕೆರೆ ಎಂದಿಗೂ ಬತ್ತಿಲ್ಲ. ಒಟ್ಟಾಗಿ ಹೇಳುವುದಾದರೆ ಶ್ರೀಮಹಾಲಿಂಗೇಶ್ವರ ನ ಅದ್ಬುತ ಕೆಲಸಗಳಲ್ಲಿ ಈ ಕೆರೆ ಕೂಡ ಒಂದಾಗಿದೆ.

ಮಹಾಲಿಂಗೇಶ್ವರ ದೇವರಿಗೆ ಪ್ರೀತಿ, ಭಕ್ತಿ ತೋರಿಸುವ ಕಂಬಳ ಕೋಣಗಳು

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳದ ವಿಶೇಷತೆ ಎಂದರೆ ಕಂಬಳದ ಕೆರೆಗೆ ಇಳಿಯುವ ಮೊದಲು ಕಂಬಳದ ಕೋಣಗಳು ದೇವಸ್ಥಾನದ ಮುಂಭಾಗದಲ್ಲಿ ತಮ್ಮ ಪ್ರೀತಿ, ಭಕ್ತಿ ವಿಶ್ವಾಸವನ್ನು ತೋರಿಸುತ್ತದೆ.

ಕಳೆದ 27 ವರ್ಷಗಳಿಂದ ಇಲ್ಲಿ ಕೋಟಿ ಚೆನ್ನಯ ಕಂಬಳ ನಡೆಯುತ್ತಿದೆ. ಕರಾವಳಿ ಕಂಬಳದಲ್ಲಿಯೇ ಅತೀ ಹೆಚ್ಚು ಜನ ಸೇರುವ ಕಂಬಳ ಎಂದೇ ಈ ಕಂಬಳವನ್ನು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇವರ ಗದ್ದೆಯಲ್ಲಿ ನಡೆಯುವ ಕಂಬಳದಲ್ಲಿ ಹೆಚ್ಚು ಕಡಿಮೆ 150ಕ್ಕೂ ಅಧಿಕ ಕೋಣದ ಜೋಡಿಗಳು ಕಾಣಿಸಿಕೊಳ್ಳುತ್ತದೆ.

ಇವರು ವೈದ್ಯರಲ್ಲ ಬಟ್ ಬಡವರ ಪಾಲಿನ ದೇವರು !

ಪುತ್ತೂರಿನ ಡಾ.ಶಿವರಾಮ ಭಟ್ ಅವರ ಕ್ಲಿನಿಕ್‌ನಲ್ಲಿರುವ ಕಂಪೌಂಡರ್ ಭಟ್ಟರು ಪುತ್ತೂರಿನ ಮಂದಿಗೆ ಚಿರಪರಿಚಿತ ಮುಖ. ಯಾವುದೇ ಕಾಯಿಲೆ ಇರಲಿ ಅವರು ನೀಡುವ ಮದ್ದು ರೋಗಿಯ ಕಾಯಿಲೆಗೆ ಗುಣಪಡಿಸುವ ಶಕ್ತಿಯಿದೆ. ಅವರ ನಗು ಮೊಗದ ಮಾತು ರೋಗಿಗೆ ಕಾಯಿಲೆಯಲ್ಲೂ ಹೊಸ ಚೈತನ್ಯ ನೀಡುತ್ತದೆ.
ಅವರ ಮದ್ದಿನ ರೇಟು ಕೂಡ ಬಹಳ ಕಡಿಮೆ. ಕೆಲವೊಂದು ಸಲ ಬಡವರು ಬಂದರೆ ಉಚಿತವಾಗಿ ಮದ್ದು ನೀಡಿದ ಉದಾಹರಣೆಗಳು ಸಾಕಷ್ಟಿದೆ. ಡಾ. ಶಿವರಾಮ ಭಟ್ ಅವರ ಕಾಲದಿಂದಲ್ಲೂ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಡಾ. ಶಿವರಾಮ ಭಟ್ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿದ್ದಾರೆ.
ಈಗ ಡಾ.ಶಿವರಾಮ ಭಟ್ಟರು ಇಲ್ಲ ಆದರೆ ಅವರ ಪುತ್ರ ಡಾ. ಶ್ಯಾಮ್ ಭಟ್ ಇದ್ದರೆ ಅವರಿಗೂ ಕಂಪೌಂಡರ್ ಭಟ್ಟರು ಎಂದರೆ ಅದೇ ಪ್ರೀತಿ. ರೋಗಿಗಳಿಗೂ ಅವರು ಎಂದರೆ ವಿಶೇಷ ಗೌರವ ಜತೆಗೆ ಅಪಾರ ಪ್ರೀತಿ.

ಗೆದ್ದಲು ನಾಶಕ್ಕೆ ದಡ್ಡಾಲ ಮರದ ತೊಗಡೆಯ ಮೆಡಿಸಿನ್

ಕರಾವಳಿಯ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುವ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಗೆದ್ದಲು ನಾಶಕ ದ್ರಾವಣ ತಯಾರಿಸುವ ಪುತ್ತೂರಿನ ವಿದ್ಯಾರ್ಥಿನಿಯರಿಬ್ಬರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ರಜತ ಪದಕ ಗಳಿಸಿದೆ.

ಪುತ್ತೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಇವರಿಬ್ಬರೂ ಅಮೆರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂನ್ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ತಮ್ಮ ಪ್ರಾಜೆಕ್ಟ್ ಮಂಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಯಾವುದೇ ಕೃತಕ ವಸ್ತುವಾಗಲೀ, ರಾಸಾಯನಿಕವಾಗಲೀ ಬಳಸದೆ ಕೇವಲ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಅದರಿಂದ ಈ ಜಲೀಯ ಸಾರ ತಯಾರಿಸಲಾಗಿತ್ತು. ಸಾಮಾನ್ಯವಾಗಿ ಮನೆಯ ಒಳಗೆ, ಹೊರಗೆ ಕಾಣಿಸುವ ಗೆದ್ದಲುಗಳನ್ನು ಈ ಸಾರದ ಮೂಲಕ ಸುಲಭವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯಿಲ್ಲ ಎಂಬುದನ್ನು ಪ್ರಾಜೆಕ್ಟ್ ಮೂಲಕ ತೋರಿಸಿಕೊಡಲಾಗಿತ್ತು.

ಕರಾವಳಿಯ ಅತೀ ಹೆಚ್ಚು ಚರ್ಚ್ ಗಳ ಹೆಸರು ಸಂತ ಅಂತೋನಿ

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅತೀ ಹೆಚ್ಚು ಚರ್ಚ್ ಗಳಲ್ಲಿ ಸಂತ ಅಂತೋನಿ ಹೆಸರು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಬೆಳ್ತಂಗಡಿ ಯ ನಾರಾವಿ ಹಾಗೂ ಉಜಿರೆಯಲ್ಲಿ ಸಂತ ಅಂತೋನಿ ಚರ್ಚ್ ಗಳಿದ್ದಾರೆ.
ಉಳಿದಂತೆ ಅಲ್ಲಿಪಾದೆ, ಬನ್ನೂರು, ಕೂಳೂರು, ಪೆರ್ಮಾಯಿ ಯಲ್ಲಿ ಸಂತ ಅಂತೋನಿ ಅವರಿಗೆ ಸಮರ್ಪಿತ ವಾದ ಚರ್ಚ್ ಗಳಿವೆ. ಮಂಗಳೂರಿನಲ್ಲ ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಹಾಗೂ ಮಿಲಾಗ್ರಿಸ್ ನಲ್ಲಿ ಪುಣ್ಯಕ್ಷೇತ್ರ ವಿದೆ.
ಕೂಳೂರಿನ ಚರ್ಚ್ ಅತೀ ಪುರಾತನ ಚರ್ಚ್ ಎಂದರೆ 1888 ರಲ್ಲಿ ಸ್ಥಾಪನೆಯಾಯಿತು. ಈ ಬಳಿಕ ಪೆರ್ಮಾಯಿ 2003 ರಲ್ಲಿ ಆರಂಭ ವಾಯಿತು. ಮೇ 31 ರಿಂದ ಈ ಎಲ್ಲ ಚರ್ಚ್ ಗಳಲ್ಲಿ ವಿಶೇಷ ನೊವೆನಾ ಹಾಗೂ ಜೂನ್ 13 ರಂದು ಸಂತ ಅಂತೋನಿ ಅವರ ಹಬ್ಬ ನಡೆಯಲಿದೆ. ಅಂದಹಾಗೆ ಕರಾವಳಿಯಲ್ಲಿ ಈ ಸಂತ ನನ್ನು ಬಿಟ್ಟರೆ ಸಂತ ಲಾರೆನ್ಸ್ ಚರ್ಚ್ ಗಳು ಕೂಡ ಇದೆ.