ಕರಾವಳಿಯ ಪ್ರಮುಖ ಮಾರ್ಕೆಟ್ ಗೆ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.
Tagged: market
ಡೆಂಗೆಗೆ ಅಡುಗೆ ಮನೆಯಲ್ಲಿದೆ ಮದ್ದು !
ಕುಡ್ಲದಲ್ಲಿ ಡೆಂಗೆಯಿಂದ ಈಗಾಗಲೇ ಐವರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ ಆದರೆ ಬಹಳಷ್ಟು ಮಂದಿಗೆ ಈ ರೋಗ ಬರುವುದಕ್ಕಿಂತ ಮೊದಲೇ ಎಚ್ಚರವಾದರೆ ಇದೆಲ್ಲವೂ ನಡೆಯುತ್ತಿರಲಿಲ್ಲ.
ಹೌದು. ಡೆಂಗೆಯ ಸೊಳ್ಳೆ ಯಿಂದ ಪಾರಾಗಲು ಅಡುಗೆಮನೆಯಲ್ಲಿ ಇರುವ ತೆಂಗಿನ ಎಣ್ಣೆ, ಕಹಿಬೇವಿನ ಆಯಿಲ್, ನೀಮ್ ಗ್ರಾಸ್ ಆಯಿಲ್ ಸೇರಿದಂತೆ ಮಾರ್ಕೆಟ್ ನಲ್ಲಿ ಸಿಗುವ ಕ್ರೀಮ್ ಗಳನ್ನು ಕೈ ಕಾಲುಗಳಿಗೆ ಉಜ್ಜಿಕೊಂಡು ನಂತರ ಹೊರಗಡೆ ಹೋದರೆ ಯಾವುದೇ ಸೊಳ್ಳೆ ಕೂಡ ಹತ್ತಿರಕ್ಕೆ ಸುಳಿಯಲಾರದು.
ಮಾರುಕಟ್ಟೆಯಲ್ಲಿ ಯಾಕೆ ಈಗ ರೇಟ್ ಏರುತ್ತಿದೆ ?
ಮಾರುಕಟ್ಟೆಯೊಳಗೆ ತರಕಾರಿ ರೇಟು ಕೂಡ ಏರಿಕೆಯಾಗುತ್ತಿದೆ. ಮುಖ್ಯವಾಗಿ ಬೀನ್ಸ್ ಕೆಜಿವೊಂದಕ್ಕೆ 60 ರೂ ಇದ್ದದ್ದು ಈಗ ಭರ್ತಿ 120-130ರೂಗೆ ತಲುಪಿದೆ. ಅಲಸಂಡೆ ಕೂಡ ಬೇಡಿಕೆ ಜಾಸ್ತಿ ಇದ್ದರೂ ಪೂರೈಕೆ ಸರಿಯಾಗಿ ನಡೆಯದ ಪರಿಣಾಮ 50 ರೂ ನಿಂದ 90 ರೂ.ಗೆ ಎರಡು ದಿನಗಳಲ್ಲಿ ಜಿಗಿತ ಕಂಡಿದೆ.
ಕಾಯಿ ಮೆಣಸು, ನೀರುಳ್ಳಿ, ಟೊಮೆಟೋ ಹೀರೆಕಾಯಿ, ಸ್ಥಳೀಯ ಬೆಂಡೆಗೂ ರೇಟು ಏರುಗತಿಯಲ್ಲಿದೆ. ಸ್ಥಳೀಯ ತರಕಾರಿಗಳಾದ ಬಸಳೆ ಹಾಗೂ ಅರಿವೆ ಸೊಪ್ಪಿನ ಪೂರೈಕೆ ಬೇಡಿಕೆಯಷ್ಟು ಇರುವ ಪರಿಣಾಮ ರೇಟು ಏರಿಕೆ ಕಂಡಿಲ್ಲ. ಇದರ ಜತೆಗೆ ಬಿಸಿಲಿಗೆ ಹೆಚ್ಚಾಗಿ ತರಕಾರಿ ಕಡೆಗೆ ಜನರು ಹೆಚ್ಚಿನ ಒಲವು ಹಾಗೂ ಮದುವೆ ಸಮಾರಂಭಗಳು ಕೂಡ ಇರುವುದರಿಂದ ಈ ತರಕಾರಿಗಳ ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ ಎನ್ನುವುದು ಅವರ ಮಾತು. ಜತೆಗೆ ಹಣ್ಣು ಹಂಪಲು ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ.
*ಮಾಂಸಹಾರಿಗಳಿಗೆ ಬರೆ:* ಬ್ಲಾಯರ್ ಕೋಳಿಯ ರೇಟು ಕೆಲವು ದಿನಗಳಿಂದ ಕೆಜಿವೊಂದಕ್ಕೆ 145 ರೂ.ನಲ್ಲಿ ಸಾಗುತ್ತಿದೆ. ಟೈಸನ್‌ಗೂ ಕೆಜಿವೊಂದಕ್ಕೆ 150 ರೂ.ಕಡೆಗೆ ಸಾಗಿದೆ. ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ಮದುವೆ ಸಮಾರಂಭಗಳು ಜಾಸ್ತಿಯಾಗಿರುವುದರಿಂದ ಕೋಳಿ ಉದ್ಯಮ ಕೂಡ ಚುರುಕುಗೊಂಡಿದೆ. ಮತ್ತೊಂದೆಡೆ ಬನ್ನೂರು ಕುರಿಯ ದರವಂತೂ ನಿಂತಲ್ಲೇ ನಿಂತು ಉದಾಹರಣೆಗಳು ಇಲ್ಲ.
ಬನ್ನೂರು ಕುರಿಗೆ ಕೆಜಿಗೆ ಈಗ 620 ರೂ. ಇದ್ದರೆ ಆಡಿನ ಮಾಂಸಕ್ಕೆ 440 ರೂ ತಲುಪಿದೆ. ಇದರ ಜತೆಗೆ ಮೀನಿನ ದರದಲ್ಲೂ ಸಾಕಷ್ಟು ದರ ಏರಿದೆ. ಆಂಜಲ್ ಈಗ ಕೆಜಿಗೆ 1 ಸಾವಿರ ದಾಟಿದರೆ ಬೂತಾಯಿ ರೇಟು ಬಂಗುಡೆ ಮೀನಿಗಿಂತ ಜಾಸ್ತಿ.