ಕರಾವಳಿಯ ಪ್ರಮುಖ ಮಾರ್ಕೆಟ್ ಗೆ ತರಕಾರಿ, ಆಡು,ಕೋಳಿ ಯಾವುದು ಕೂಡ ಬೇಡಿಕೆಯಷ್ಟು ಪೂರೈಕೆ ಇಲ್ಲ ಘಾಟ್ ಸೆಕ್ಷನ್ ನಲ್ಲಿ ಸಂಚಾರ ಬಂದ್, ವಿಪರೀತ ಮಳೆಯ ಸಮಸ್ಯೆಯಿಂದ ಎಲ್ಲ ದರಗಳು ಗಗನಕ್ಕೆ ಏಣಿ ಹಾಕಿದೆ. ಒಂದೆಡೆ ಬಕ್ರೀದ್ ಹಬ್ಬದ ಆಚರಣೆ ಗೂ ಈ ವಿಚಾರಗಳು ಅಡ್ಡಿ ಮಾಡಿದೆ.
Tagged: heavy rain
ಕುಡ್ಲದ ಮಳೆಗೆ ಮೂರನೇ ದಿನನೂ ರಜೆ !
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.9ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ.