ಹಸಿರು ಶಾರದೆ ಎನ್ನುವ ಕಲ್ಪನೆಯೇ ಬಹಳ ಅಪರೂಪ. ಜಾಗತಿಕ ಮಟ್ಟದಲ್ಲಿ ಹಸಿರು ಉಳಿಸಲು ಹೋರಾಟ ನಡೆಯುತ್ತಿದ್ದಾಗ ಮಂಗಳೂರಿನ ಪಡೀಲ್ ಕರ್ಮಾರ್‌ನಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿಯವರು ಈ ಬಾರಿ ತಮ್ಮ ಶಾರದೆ ಮಾತೆಯನ್ನು ಹಸಿರೀಕರಣದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.
ಶಾರದಾ ಮಾತೆಯ ಮೂರ್ತಿಯ ಅಸುಪಾಸಿನಲ್ಲಿ ವಿಶೇಷವಾದ ಗಿಡಗಳನ್ನು ಇಡುವ ಜತೆಯಲ್ಲಿ ಭಕ್ತರಿಗೂ ಹಸಿರಿನ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪೂರ್ತಿಯಾಗಿ ಶಾರದಾ ಮಾತೆಯ ವೇದಿಕೆಯ ತುಂಬಾ ಹಸಿರಿನ ತೋರಣ, ಚಪ್ಪರ ಎಲ್ಲವೂ ಭಕ್ತರಿಗೆ ಹೊಸ ಅನುಭವವನ್ನು ನೀಡಬಲ್ಲದು.
Tagged: green
ನವದೇವತೆ- 4 ಕೂಷ್ಮಾಂಡಾ
ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೊರ್ಯನೊಳಗೆ ನೆಲೆಸುವಷ್ಟು ಪ್ರಖರವಾದ ದೇವತೆಯಾಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರದ ಜಿಲ್ಲೆಯ ಘಟಾಂಪುರದಲ್ಲಿದೆ.
ಪರಿಸರದೊಂದಿಗೆ ಪ್ರೀತಿಯ ಸ್ವಾತಂತ್ರ್ಯ ಆಚರಿಸಿ
ಪರಿಸರ ಹಾಗೂ ಸ್ವಾತಂತ್ರ್ಯಕ್ಕೆ ಎಲ್ಲಿಂದ ಎಲ್ಲಿ ಸಂಬಂಧ ಅಂದುಕೊಳ್ಳಬೇಡಿ. ಮಕ್ಕಳು ಕೈಯಲ್ಲಿ ಪ್ಲಾಸ್ಟಿಕ್ ಬಾವುಟ ಹಿಡಿದುಕೊಂಡು ಪರಿಸರಕ್ಕೆ ಹಾನಿ ಮಾಡುವುದು ಪ್ರತಿ ವರ್ಷನೂ ನಡೆದುಕೊಂಡು ಬರುವ ವಿಚಾರ. ಆದರೆ ಈ ಬಾರಿಯಂತೂ ಪರಿಸರದ ಜತೆಯಲ್ಲಿ ಸ್ವಾತಂತ್ರ್ಯವನ್ನು ಆಚರಿಸಲು ಪಕ್ಷಿಕರೆಯ ನಿತಿನ್ ವಾಸ್ ಸೂಪರ್ ಐಡಿಯಾ ನೀಡಿದ್ದಾರೆ ಅದನ್ನು ಫಾಲೋ ಮಾಡಿಕೊಂಡು ಹೋದರೆ ಬಾವುಟದಲ್ಲೂ ಗಿಡ ಬೆಳೆಸಬಹುದು.
ಹಳೆಯ ರದ್ದಿ ಪೇಪರ್‌ಗಳನ್ನು ಸಂಗ್ರಹಿಸಿ ಹಳೆಯ ವಿಧಾನಗಳನ್ನು ಬಳಸಿ ಹೊಸದಾಗಿ ಪೇಪರ್ ತಯಾರಿಸಿ ಇದರಿಂದ ಆಮಂತ್ರಣ ಪತ್ರಿಕೆ, ಬುಕ್ ಪ್ಯಾಡ್, ಜುವೆಲ್ಲರಿ ಬಾಕ್ಸ್, ಡಿಸೈನ್ ಬೌಲ್, ವಿಗ್ರಹಗಳು, ಪೆನ್‌ಸ್ಟ್ಯಾಂಡ್, ಪೆನ್ಸಿಲ್, ಪೆನ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ. ಬಳಕೆಯ ನಂತರ ಪೇಪರ್ ತಯಾರಿಸುವಾಗ ಅದಕ್ಕೆ ನಾನಾ ಜಾತಿಯ ಹೂವಿನ ಗಿಡಗಳ ಹಾಗೂ ತರಕಾರಿ ಬೀಜಗಳನ್ನು ಅಳವಡಿಸುತ್ತಾರೆ. ಇವುಗಳನ್ನು ಮಣ್ಣಲ್ಲಿ ಹಾಕಿದರೆ ಮೊಳಕೆ ಒಡೆದು ನಾನಾ ಜಾತಿಯ ಹೂ, ತರಕಾರಿ ಗಿಡಗಳಾಗಿ ಬೆಳೆಯುತ್ತದೆ.
ಕುಡ್ಲ ಮುಂದಕ್ಕೆ ಬರೀ ಕಾಂಕ್ರೀಟ್ ಸಿಟಿ !
ಜಗತ್ತು ಬದಲಾಗಿದೆ ಅದರಲ್ಲೂ ಕುಡ್ಲ ಕೂಡ ಅಷ್ಟೇ ವೇಗದಲ್ಲಿ ಬದಲಾಗುತ್ತಿದೆ. ಮನುಷ್ಯ ನ ಸ್ವಾರ್ಥ ದ ಬದುಕು ಎಲ್ಲಕ್ಕೂ ಕಾರಣವಾಗಿದೆ. ಗೂಗಲ್ ಅರ್ಥ್ ಈ ಎಲ್ಲ ಬದಲಾವಣೆಯನ್ನು ಸಮರ್ಥ ವಾಗಿ ದಾಖಲೆ ಮಾಡುವ ಕಾರ್ಯವನ್ನು ಮಾಡಿದೆ.
ಮಂಗಳೂರು 2004 ರಲ್ಲಿ ಎಷ್ಟು ಮರ,ಗಿಡಗಳ ಜತೆಗೆ ಹಸಿರು ತುಂಬಿದ ನಗರವಾಗಿತ್ತು. ಈ ಬಳಿಕ ಮಂಗಳೂರು 2014 ರಲ್ಲಿ ಹೇಗಿದೆ. ಈಗ ಮಂಗಳೂರಿನಲ್ಲಿ ಎಷ್ಟು ಹಸಿರಿದೆ. ಮುಂದೆ ಕುಡ್ಲ ಏನಾಗಲಿದೆ ಎನ್ನುವ ಎಚ್ಚರಿಕೆಯನ್ನು ಗೂಗಲ್ ಅರ್ಥ್ ವಿವರ ವಾಗಿ ಚಿತ್ರದ ಮೂಲಕ ವಿವರಿಸಿದೆ. ಮುಂದಿನ ದಿನಗಳಲ್ಲಿ ಹಸಿರು ಕುಡ್ಲ ಸಿಟಿಯ ಉಸಿರಾಗಲಿ.
ಪಾಕೆಟ್‌ಮನಿಯಿಂದ ‘ಹನಿ’ಯ ಪರಿಸರ ಹೋರಾಟ !
ಒಂದಲ್ಲ ಎರಡಲ್ಲ ಭರ್ತಿ 3 ವರ್ಷದಲ್ಲಿ 3೦೦ಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಹುಟ್ಟುಹಾಕಿದ ವಿದ್ಯಾರ್ಥಿನಿ ಹನಿ ಎಚ್. ಆರ್ ಅವರು ಇಂತಹ ಕೆಲಸವನ್ನು ಬರೀ ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಇಟ್ಟುಕೊಂಡು ರಜಾ ದಿನಗಳಲ್ಲಿ ಮಾಡುತ್ತಿದ್ದಾರೆ.
ಪರಿಸರದ ಮೇಲೆ ಪ್ರೀತಿ ಹುಟ್ಟಲು ಯಾವುದೇ ವಯಸ್ಸಿನ ಹಂಗಿಲ್ಲ. ಯಾರು ಕೂಡ ಪರಿಸರವನ್ನು ಪ್ರೀತಿಸಬಹುದು, ಕಾಳಜಿಯನ್ನು ತೋರಿಸಬಹುದು ಎನ್ನುವುದಕ್ಕೆ ಅವರೇ ಬೆಸ್ಟ್ ಉದಾಹರಣೆ. ಮುಡಿಪಿನ ಜವಾಹರ್ ನವೋದಯ ವಿದ್ಯಾಲಯದ 7 ನೇ ತರಗತಿಯಲ್ಲಿ ಓದುತ್ತಿರುವ ಹನಿಗೆ ಪರಿಸರದ ಮೇಲೆ ವಿಶೇಷ ವ್ಯಾವೋಹ.
ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಅವಳು ತನ್ನದೇ ಗ್ರೀನ್ ವಾರಿಯರ್ಸ್ ತಂಡ ಕಟ್ಟಿಕೊಂಡು ಜಪ್ಪಿನಮೊಗರು, ಕಡೆಕಾರು, ಚಿಕ್ಕಮಗಳೂರು, ಬಾಳೆಹೊನ್ನೂರು ಹೀಗೆ ಹತ್ತಾರು ಕಡೆಯಲ್ಲಿ 3೦೦ಕ್ಕೂ ಅಧಿಕ ಗಿಡಗಳನ್ನು ನೆಡುತ್ತಾ ಹಸಿರು ಉಳಿಸಿ ಎನ್ನುವ ಅಭಿಯಾನವನ್ನು ಯಾರಿಗೂ ಹೇಳದೇ ಹುಟ್ಟುಹಾಕಿದ್ದಾರೆ.
ಅದು ಕೂಡ ತನ್ನ ಶಾಲಾ ರಜಾ ದಿನಗಳಲ್ಲಿ ಎನ್ನುವುದು ವಿಶೇಷ. ಮಕ್ಕಳಿಗೆ ರಜೆ ಎಂದಾಕ್ಷಣ ಪ್ರವಾಸಕ್ಕೆ ಹೋಗುವುದು, ಆಟವಾಡುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿಯೇ ಮಗ್ನರಾಗುವುದು ಕಾಮನ್. ಆದರೆ ಹನಿ ಕೊಂಚ ಭಿನ್ನ ಹುಡುಗಿ ಅವಳಿಗೆ ರಜಾ ದಿನಗಳಲ್ಲಿ ಪರಿಸರದ ಬಗ್ಗೆಯೇ ಹೆಚ್ಚು ಕಾಳಜಿ ಬರುತ್ತದೆ.