Kudla City

ಕುಡ್ಲದಲ್ಲಿ ನ. 20 ರಂದು ನಂದಿನಿಯ ಈ ಐಟಂಗಳು ಪೂರ್ಣ ಫ್ರೀ !

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಈ ಬಾರಿ ವಿಶೇಷವಾದ ಎರಡು ಐಟಂಗಳನ್ನು ಮಾರ್ಕೆಟ್‌ಗೆ ಇಳಿಸಿದೆ ಇದರ ಪರಿಣಾಮ ಎರಡು ಐಟಂಗಳು ಸ್ಟಾಕ್ ಇರುವ ವರೆಗೆ ಪೂರ್ಣವಾಗಿ ನಾಟ್ ಫಾರ್ ಸೇಲ್ ಎನ್ನುವ ಮುದ್ರೆಯ ಜತೆಯಲ್ಲಿ ನ. 20 ರಂದು ಬೆಳಗ್ಗೆ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಮಾತು ಕೇಳಿ ನ.20 ರಂದು ದ.ಕದಲ್ಲಿ 11,500 ಸಾವಿರ ಬಾಟಲ್ ನಂದಿನಿ ಕಷಾಯ ಹಾಗೂ ನಂದಿನಿ ಕೋಲ್ಡ್ ಕಾಫಿ ಆಯ್ದ ನಂದಿನಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. ಅದು ಸ್ಟಾಕ್ ಮುಗಿಯುವರೆಗೆ ಮಾತ್ರ ಉಳಿದಂತೆ ಉಡುಪಿಯಲ್ಲಿ 5,500 ಸಾವಿರ ಬಾಟಲ್ ಕಷಾಯ, ಕೋಲ್ಡ್ ಕಾಫಿ ಸುವಾಸಿತ ಹಾಲು ಮಾರಾಟ ಮಾಡುವ ಡೀಲರ್, ಪಾರ್ಲರ್‌ಗಳಲ್ಲಿ ಸಿಗಲಿದೆ. ಈ ಮೂಲಕ 17 ಸಾವಿರ ಬಾಟಲಿ ಕಷಾಯ, ಕೋಲ್ಡ್ ಕಾಫಿ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ.

ಕುಡ್ಲದ ದೇವಳದಲ್ಲಿ ಬಾಳೆಲೆಯಲ್ಲಿ ಪಂಚಕಜ್ಜಾಯ

ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ದಕ್ಷಿಣ ಕನ್ನಡ ಅಥವಾ ಇತರ ಕಡೆಗಳ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಪ್ರಸಾದ ಕಟ್ಟಿಕೊಡುವ ವಾಡಿಕೆಯಿದೆ. ಆದರೆ ಇವೆಲ್ಲಕ್ಕೂ ಭಿನ್ನವಾಗಿ ಗಂಜಿಮಠದ ದೇವಸ್ಥಾನದ ಪಂಚಕಜ್ಜಾಯದ ಕಟ್ಟು ಹೊಸ ಸಂಚಲನವನ್ನೇ ಮೂಡಿಸಿದೆ.

ಹೌದು ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ನಡುವೆ ಗಂಜಿಮಠ ಜಂಕ್ಷನ್‌ನಲ್ಲಿ ಇರುವ ಪುರಾತನ ಕಾಲದ ಶ್ರೀ ಗಣಪತಿ ದೇವಾಲಯದಲ್ಲಿ ಕುಟುಂಬದ ಹಿರಿ ತಲೆಮಾರಿನಿಂದಲೂ ಇಲ್ಲಿ ಬಾಳೆ ಎಲೆಯಲ್ಲಿ ಪಂಚ ಕಜ್ಜಾಯ ಹಾಕಿ, ಬಾಳೆ ನಾರಿನಲ್ಲಿ ಕಟ್ಟಿಕೊಡುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.

ಈ ರೀತಿಯ ಸಂಪ್ರದಾಯ ಎಲ್ಲ ಕಡೆಯೂ ಆರಂಭವಾಗಬೇಕಾಗಿರುವುದು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕಾದ ಈ ಕಾಲಘಟ್ಟದಲ್ಲಿ ಅಗತ್ಯವಾಗಿದೆ.

ಬಳಸಿದ ಪ್ಲಾಸ್ಟಿಕ್ ಗೆ ದುಡ್ಡು ಕೊಡುವ ಜಯಣ್ಣ!

ಇಡೀ ವಿಶ್ವವೇ ಪ್ಲಾಸ್ಟಿಕ್ ಕುರಿತು ತಲೆ ಕಡೆಸಿಕೊಂಡಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ಹೋಗುತ್ತಿದೆ. ಇಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ದ ಶ್ರೀಸಾಮಾನ್ಯರೊಬ್ಬರು ಡಿಫರೆಂಟ್ ಶೈಲಿಯಲ್ಲಿ ಹೋರಾಟ ಮಾಡಿದ್ದಾರೆ. ಇವರ ಹೆಸರು ಜಯಪ್ರಕಾಶ್ ಎಕ್ಕೂರು .

ಕಂಕನಾಡಿ ಹತ್ತಿರ ಪುಟ್ಟದಾದ ಲಾಂಡ್ರಿ ಶಾಫ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಜತೆಯಲ್ಲಿ ಅವರು ಪ್ಲಾಸ್ಟಿಕ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರು ಒಂದು ಬಳಸಿದ ಪ್ಲಾಸ್ಟಿಕ್ ಗೆ ಐವತ್ತು ಪೈಸೆ ನೀಡುತ್ತಾರೆ. ಒಬ್ಬರು ಎರಡು ಪ್ಲಾಸ್ಟಿಕ್ ಮಾತ್ರ ನೀಡಬಹುದು. ಎರಡು ಪ್ಲಾಸ್ಟಿಕ್ ಗೆ ಒಂದು ರೂಪಾಯಿ ಕೊಟ್ಟು ಖರೀದಿ ಮಾಡಿ ಅದನ್ನು ನಗರಪಾಲಿಕೆ ಗೆ ಕೊಟ್ಟು ಬಿಡುತ್ತಾರೆ ಅದರಿಂದ ಅವರಿಗೆ ಏನೂ ಲಾಭ ವಿಲ್ಲ. ಇದರ ಜತೆಯಲ್ಲಿ ಅವರ ಪರಿಸರ ಸ್ನೇಹಿ ಪೆನ್, ಬಟ್ಟೆ ಚೀಲ ಹೀಗೆ ಪರಿಸರ ಪೂರಕ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

ಇದು ಅವರ ಲಾಭದ ಬ್ಯುಸಿನೆಸ್ ಅಲ್ಲ. ಆದರೆ ಇಂತಹ ವಿಚಾರದಿಂದ ಜನರಲ್ಲಿ ಪರಿಸರ ಕಾಳಜಿ ಬೆಳೆಸುವುದು ಅವರ ಉದ್ದೇಶ. ಅವರಲ್ಲಿ ನೂರು ರೂಪಾಯಿ ಯ ಐಟಂ ತೆಗೆದುಕೊಂಡರೆ ಶೇ.10ರಷ್ಟು ಬಳಸಿದ ಪ್ಲಾಸ್ಟಿಕ್ ಕೊಟ್ಟರೆ ಸಾಕು ನಂತರ 90 ರೂ ಕೊಟ್ಟು ಐಟಂ ತೆಗೆದುಕೊಳ್ಳಬಹುದು. ಕುಡ್ಲದ ಕದ್ರಿ ಪಾರ್ಕ್ ಮುಂಭಾಗ ಪ್ರತಿ ಭಾನುವಾರ ಸಂಜೆ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.

ಮಂಗಳೂರು-ವಿಜಯಪುರ ರೈಲು ಕುಡ್ಲಕ್ಕೆ ಬಂತು

ಮಂಗಳೂರು-ವಿಜಯಪುರ ನಡುವೆ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಂಗಳವಾರ ಸಂಜೆ ಆರಂಭಗೊಂಡ ಸೂಪರ್ ಫಾಸ್ಟ್ ತತ್ಕಾಲ್ ಎಕ್ಸ್‌ಪ್ರೆಸ್ ಪ್ರಥಮ ರೈಲು ಪ್ರಯಾಣಕ್ಕೆ ನಿಲ್ದಾಣದಲ್ಲಿ ಬಹಳಷ್ಟು ಮಂದಿ ಸಾಕ್ಷಿಯಾದರು. ವಿಜಯಪುರದಿಂದ ಸೋಮವಾರ ಸಂಜೆ ಹೊರಟು ಮಂಗಳವಾರ ಮಂಗಳೂರು ತಲುಪಿದ ರೈಲಿಗೆ ಹಾದಿಯುದ್ದಕ್ಕೂ ನಾನಾ ನಿಲ್ದಾಣಗಳಲ್ಲಿ ಸಂಭ್ರಮದ ಸ್ವಾಗತ ದೊರೆಯಿತು.
ಮೊದಲ ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಹಳಷ್ಟು ಮಂದಿಗೆ ಈ ರೈಲಿನ ಪ್ರಯಾಣದ ಕುರಿತು ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಈ ರೀತಿ ನಡೆದಿದೆ. ಮುಂದೆ ದಿನ ಕಳೆದಂತೆ ಇದೆಲ್ಲವೂ ಸರಿಯಾಗಲಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೊಸ ರೈಲು ಸೇವೆಯಿಂದ ಉತ್ತರ ಕರ್ನಾಟಕಕ್ಕೆ ಕನಿಷ್ಠ ಪ್ರಯಾಣ ದರದಲ್ಲಿ ಸುಲಭ ಸಂಪರ್ಕ ದೊರೆಯಲಿದೆ. ಪ್ರಸ್ತುತ ದಕ್ಷಿಣ ಕನ್ನಡ ಅಥವಾ ಉಡುಪಿ ನಗರದಿಂದ ಹುಬ್ಬಳ್ಳಿ- ಧಾರವಾಡ- ಬೆಳಗಾಂಗೆ ಯಾವುದೇ ನೇರ ರೈಲು ಸಂಪರ್ಕವಿರುವುದಿಲ್ಲ. ಹೊಸ ರೈಲಿನಿಂದ ಗದಗ, ಚಿತ್ರದುರ್ಗ, ವಿಜಾಪುರ, ಧಾರವಾಡ, ಹೈದರಾಬಾದ್, ತಿರುಪತಿ ಸಂಪರ್ಕಕ್ಕೆ ಕೂಡ ಅನುಕೂಲಕರವಾಗಿದೆ.
tgas: Vijayapura, Bijapur, Mangaluru, Hubballi, Arsikere, Hassan, Central, Karnataka, regions, coastal belt, South Western Railway, daily train

ವಿದ್ಯಾರ್ಥಿಗಳಿಂದ ಸಂತ ಆಂತೋನಿ ಆಶ್ರಮ ಭೇಟಿ

ಇಂದಿನ ವಿದ್ಯಾರ್ಥಿಗಳಿಗೆ ಆಶ್ರಮ ವಾಸಿಗಳ ಪರಿಚಯವೇ ಇರುವುದಿಲ್ಲ. ಓದು, ಕಲಿಕೆ ಜತೆಗೆ ಮೊಬೈಲ್ ಎನ್ನುವ ಜಂಗಮದೊಂದಿಗೆ ಆಟ ಬಿಟ್ಟರೆ ಉಳಿದ ಎಲ್ಲ ವಿಚಾರಗಳಲ್ಲಿಯೂ ಅವರು ಉತ್ಸಾಹ ತೋರಿಸುವುದೇ ಕಡಿಮೆ.
ಆಶ್ರಮವಾಸಿಗಳ ಬದುಕು, ಬವಣೆ, ಕಷ್ಟ- ಸುಖಗಳನ್ನು ಹತ್ತಿರದಿಂದ ನೋಡುವ ಜತೆಗೆ ಅವರ ಜತೆಯಲ್ಲಿ ಸ್ವಲ್ಪ ಕಾಲ ಕಳೆಯುವ ಈ ಮೂಲಕ ಅಶ್ರಮದಲ್ಲಿ ವಾಸವಾಗಿರುವ ಮೊಗದಲ್ಲಿ ನೆಮ್ಮದಿ ತರುವ ಕೆಲಸವೊಂದು ನಡೆದಿದೆ.
ಹೌದು. ಮಂಗಳೂರಿನ ಸಂತ ಆಂತೋನಿ ಆಶ್ರಮ ಜೆಪ್ಪುವಿಗೆ ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಮೊಂಟೆಸರಿಯಿಂದ ಹತ್ತನೇ ತರಗತಿಯ ವರೆಗಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ತಾವು ಆಶ್ರಮವಾಸಿಗಳಿಗೆ ತಂದ ಉಡುಗೊರೆಯನ್ನು ಕೊಟ್ಟು ಆಶ್ರಮವಾಸಿಗಳನ್ನು ಖುಷಿ ಪಡಿಸಿದರು.