ಇಂದಿನ ವಿದ್ಯಾರ್ಥಿಗಳಿಗೆ ಆಶ್ರಮ ವಾಸಿಗಳ ಪರಿಚಯವೇ ಇರುವುದಿಲ್ಲ. ಓದು, ಕಲಿಕೆ ಜತೆಗೆ ಮೊಬೈಲ್ ಎನ್ನುವ ಜಂಗಮದೊಂದಿಗೆ ಆಟ ಬಿಟ್ಟರೆ ಉಳಿದ ಎಲ್ಲ ವಿಚಾರಗಳಲ್ಲಿಯೂ ಅವರು ಉತ್ಸಾಹ ತೋರಿಸುವುದೇ ಕಡಿಮೆ.
ಆಶ್ರಮವಾಸಿಗಳ ಬದುಕು, ಬವಣೆ, ಕಷ್ಟ- ಸುಖಗಳನ್ನು ಹತ್ತಿರದಿಂದ ನೋಡುವ ಜತೆಗೆ ಅವರ ಜತೆಯಲ್ಲಿ ಸ್ವಲ್ಪ ಕಾಲ ಕಳೆಯುವ ಈ ಮೂಲಕ ಅಶ್ರಮದಲ್ಲಿ ವಾಸವಾಗಿರುವ ಮೊಗದಲ್ಲಿ ನೆಮ್ಮದಿ ತರುವ ಕೆಲಸವೊಂದು ನಡೆದಿದೆ.
ಹೌದು. ಮಂಗಳೂರಿನ ಸಂತ ಆಂತೋನಿ ಆಶ್ರಮ ಜೆಪ್ಪುವಿಗೆ ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಮೊಂಟೆಸರಿಯಿಂದ ಹತ್ತನೇ ತರಗತಿಯ ವರೆಗಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ತಾವು ಆಶ್ರಮವಾಸಿಗಳಿಗೆ ತಂದ ಉಡುಗೊರೆಯನ್ನು ಕೊಟ್ಟು ಆಶ್ರಮವಾಸಿಗಳನ್ನು ಖುಷಿ ಪಡಿಸಿದರು.
Tagged: mangalore
ಆನ್‌ಲೈನ್‌ನ ಸೆಕೆಂಡ್ ಸೇಲ್‌ನಲ್ಲಿ ಹಣ ಮಂಗಮಾಯ
ಆನ್‌ಲೈನ್‌ನಲ್ಲಿ ಸೆಕೆಂಡ್ ಸೇಲ್ ಪೀಠೋಪಕರಣಗಳನ್ನು ಮಾರಾಟ ಮಾಡುವುದಾಗಿ ಕುಡ್ಲದ ವ್ಯಕ್ತಿಯೊಬ್ಬರು ಬ್ರೋಕರ್ ಮುಖೇನ ಜಾಹೀರಾತು ಹಾಕಿದ್ದರು. ಇದಕ್ಕೆ ತಮಗೆ ಬೇಕು ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಸಾಮಗ್ರಿಯನ್ನು ಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಪೀಠೋಪಕರಣ ಖರೀದಿ ಮೊತ್ತವನ್ನು ಆನ್‌ಲೈನ್ ಮೂಲಕ ಕಳುಹಿಸುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದ. ಅದರಂತೆ ಪಿರ್ಯಾದಿದಾರರು ಲಿಂಕ್ ಒತ್ತಿದ್ದು, ತಕ್ಷಣ ಕ್ರಮವಾಗಿ ಅವರ ಖಾತೆಯಿಂದ 80 ಸಾವಿರಕ್ಕೂ ಅಧಿಕ ಮೊತ್ತವನ್ನು ಪೀಠೋಪಕರಣ ಸೇಲ್ ಮಾಡುವ ವ್ಯಕ್ತಿ ಕಳೆದುಕೊಂಡು ಮೂರು ನಾಮಹಾಕಿದ ಘಟನೆಯೊಂದು ವರದಿಯಾಗಿದೆ.
ರಸ್ತೆಯ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಪುಟ್ಟರಾಮ
ಕರಾವಳಿಯ ಯಾವ ರಸ್ತೆಯನ್ನು ನೋಡಿದರೂ ಕೂಡ ಅಲ್ಲಿ ಹೊಂಡಗಳೇ ಕಾಣಿಸಿಕೊಳ್ಳುತ್ತಿದೆ. ಸವಾರರಂತೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಈ ರಸ್ತೆಯಲ್ಲಿ ಹೊಂಡಗಳು ಸ್ಮಾರ್ಟ್ ಸಿಟಿ ಕುಡ್ಲದಲ್ಲೂ ಭರ್ಜರಿಯಾಗಿದೆ.
ಮಂಗಳೂರಿನ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆಯಂಚಿನಲ್ಲಿದ್ದ ಗುಂಡಿಯೊಂದು ದ್ವಿಚಕ್ರ ಸವಾರರಾಗಿ ಕಂಟಕವಾಗಿದ್ದು ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆಯಾಗದಿರುವುದರಿಂದ ಬೇಸತ್ತ ಪೂರ್ವ ಸಂಚಾರಿ ಠಾಣೆ (ಕದ್ರಿ) ಯ ಸಿಬ್ಬಂದಿ ಪುಟ್ಟರಾಮ ತಾನೇ ಕಲ್ಲು, ಮಣ್ಣು ಹಾಕಿಕೊಂಡು ಮುಚ್ಚುವ ಮೂಲಕ ವಿಶೇಷವಾದ ಕೆಲಸವನ್ನು ಮಾಡಿ ವಾಹನ ಸವಾರರ ಮನಸ್ಸು ಗೆದ್ದುಬಿಟ್ಟಿದ್ದಾರೆ.
ಮಂಗಳಾದೇವಿ ಅಮ್ಮನ ಸುಂದರ ಮೆರವಣಿಗೆ
ಮಂಗಳೂರಿನ ಬೋಳಾರ ಮಹತೋಭಾರ ಶ್ರೀಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಮಂಗಳಾದೇವಿಯ ಉತ್ಸವ ಮೂರ್ತಿಯ ಶೋಭಾಯಾತ್ರೆಯನ್ನು ಕಣ್ಣಾರೆ ನೋಡುವ ಭಾಗ್ಯವೇ ಒಂದು ವಿಶಿಷ್ಟ. ನವರಾತ್ರಿ ಸಮಯದಲ್ಲಿ ಇಲ್ಲಿ ನಡೆಯುವ ರಥೋತ್ಸವವಂತೂ ಕರಾವಳಿಯ ದೇವಳಗಳಲ್ಲಿ ಸಿಗುವುದೇ ಅಪರೂಪ. ಅಂದಹಾಗೆ ಮಂಗಳೂರು ಹೆಸರಿನ ಹಿಂದಿನ ಶಕ್ತಿಯೇ ಮಂಗಳಾದೇವಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.
ಕುಡ್ಲದಲ್ಲಿ ಹಸಿರು ಶಾರದೆಯ ಸೊಬಗು
ಹಸಿರು ಶಾರದೆ ಎನ್ನುವ ಕಲ್ಪನೆಯೇ ಬಹಳ ಅಪರೂಪ. ಜಾಗತಿಕ ಮಟ್ಟದಲ್ಲಿ ಹಸಿರು ಉಳಿಸಲು ಹೋರಾಟ ನಡೆಯುತ್ತಿದ್ದಾಗ ಮಂಗಳೂರಿನ ಪಡೀಲ್ ಕರ್ಮಾರ್‌ನಲ್ಲಿ ಸಾರ್ವಜನಿಕ ಶಾರದೋತ್ಸವ ಸಮಿತಿಯವರು ಈ ಬಾರಿ ತಮ್ಮ ಶಾರದೆ ಮಾತೆಯನ್ನು ಹಸಿರೀಕರಣದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.
ಶಾರದಾ ಮಾತೆಯ ಮೂರ್ತಿಯ ಅಸುಪಾಸಿನಲ್ಲಿ ವಿಶೇಷವಾದ ಗಿಡಗಳನ್ನು ಇಡುವ ಜತೆಯಲ್ಲಿ ಭಕ್ತರಿಗೂ ಹಸಿರಿನ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಪೂರ್ತಿಯಾಗಿ ಶಾರದಾ ಮಾತೆಯ ವೇದಿಕೆಯ ತುಂಬಾ ಹಸಿರಿನ ತೋರಣ, ಚಪ್ಪರ ಎಲ್ಲವೂ ಭಕ್ತರಿಗೆ ಹೊಸ ಅನುಭವವನ್ನು ನೀಡಬಲ್ಲದು.