ಮಂಗಳೂರು ಮಾತ್ರವಲ್ಲ ಇದು ಎಲ್ಲ ನಗರ, ಗ್ರಾಮಾಂತರ ಪ್ರದೇಶಗಳಲ್ಲಿರುವ ಎಲ್ಲರೂ ಹೇಳುವ ಮಾತು. ಐಟಿ, ಬಿಟಿ ಓದಿ ಬಂದವರು ಎಲ್ಲ ಕಡೆಯಲ್ಲೂ ಸಿಗ್ತಾರೆ ಮಾರಾಯ್ರೆ. ಈ ಕಾಯಿ ಕೀಳುವ ಮಂದಿಯಂತೂ ಸಿಗ್ತಾ ಇಲ್ಲ. ಸಿಕ್ಕರೂ ಕೂಡ ಒಳ್ಳೆಯ ಮೊತ್ತವನ್ನು ಕೀಳುತ್ತಾರೆ ಎನ್ನುವ ಮಾತು ಕಾಮನ್ ಆಗಿ ಸಿಗುತ್ತದೆ.
Tagged: citynews
ಉದ್ಯೋಗ ಹುಡುಕುವ ಮಹಿಳೆಯರಿಗೆ ಫ್ರೀ ಹಾಸ್ಟೆಲ್
208-19ನೇ ಸಾಲಿನ ಆಯವ್ಯಯ ಘೋಷಣೆಯಂತೆ ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ ಪ್ರವೇಶ ಪರೀಕ್ಷೆಗಳಿಗೆ ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ ೩ ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‌ಗಳಲ್ಲಿ ಕಲ್ಪಿಸಲಾಗುತ್ತದೆ.
ಬೆಂಗಳೂರಿನಲ್ಲಿ ಲಭ್ಯವಿರುವ 13 ಟ್ರಾನ್ಸಿಟ್ ಹಾಸ್ಟೆಲ್‌ಗಳು : ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23330846, 22925898.
ಶ್ರೀ ಶಾರದಾ ಕುಟೀರ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಶಂಕರಾಪುರ ದೂರವಾಣಿ ಸಂಖ್ಯೆ: 08026674697.
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22238574,
ಯುನಿವರ್ಸಿಟಿ ವುಮೆನ್ಸ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&22223314, 26631838, 9845023783.
ಮಹಾತ್ಮಾಗಾಂಧಿ ವಿದ್ಯಾಪೀಠ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26662226,
ಜಯನಗರ ಸ್ತ್ರೀ ಸಮಾಜ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26674697,
ಆಲ್ ಇಂಡಿಯಾ ವುಮೆನ್ಸ್ ಕಾನ್ಫೋರೆನ್ಸ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&26349676.
ಬಸವ ಸಮಿತಿ, ಬಸವ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:080&22723355,
ವಿಶಾಲ್ ವಿದ್ಯಾ ಸಂಸ್ಥೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ:9341289653.
ಕರ್ನಾಟಕ ರೂರಲ್ ಪೂರ್ ಆಂಡ್ ಹ್ಯಾಂಡಿಕ್ಯಾಪ್ಡ್ ಡೆವೆಲಪ್ ಮೆಂಟ್ ಸೊಸೈಟಿ, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಪೀನ್ಯಾ. ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯುನಿವರ್ಸಿಟಿ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&231604331,
ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಶನ್ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&25634813,
ರೀಜಿನಲ್ ಇಂಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ದೂರವಾಣಿ ಸಂಖ್ಯೆ: 080&23213243, 23218452.
ನಟಿ ಸೋನಾಲ್ ಹಿಂದಿರುವ ಶಕ್ತಿ !
ಕುಡ್ಲದ ಸೋನಾಲ್ ಮೊಂತೆರೋ ತುಳು ಸಿನಿಮಾದ ಮೂಲಕ ಪರಿಚಯವಾಗಿ ಈಗ ಕನ್ನಡದಲ್ಲಿ ಬ್ಯುಸಿ ಇರುವ ನಟಿಮಣಿ.
ತುಳುವಿನ ನಿರ್ದೇಶಕ ಸೂರಜ್ ಶೆಟ್ಟಿ ನಿರ್ದೇಶನದ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕ ಜತೆಗೆ ಜೈ ತುಳುನಾಡ್ ಸಿನಿಮಾದ ಮೂಲಕ ತುಳುವರಿಗೆ ಪರಿಚಯವಾದ ಸೋನಾಲ್ ಹಿಂದಿರುವ ಶಕ್ತಿ ಅವರ ಅಮ್ಮ ಲೀಟಾ ಮೊಂತೆರೋ.
ಬಣ್ಣದ ಬದುಕಿಗೆ ಅವರ ತಾಯಿ ನೀಡಿದ ಪ್ರೇರಣೆ, ಪ್ರೋತ್ಸಾಹ ಜತೆಗೆ ಸಹಕಾರದ ಮನೋಭಾವವೇ ಇಂದು ಸೋನಾಲ್ ತುಳು ಮಾತ್ರವಲ್ಲ ಕನ್ನಡದ ಸಿನಿಮಾ ಅಭಿಮಾನಿಗಳಿಗೂ ಪ್ರೀತಿಯ ಹುಡುಗಿಯಾಗಿದ್ದಾರೆ.
ಪಿಲಿಕುಳದ ಪ್ರಾಣಿ, ಪಕ್ಷಿಗಳಿಗೆ ಫ್ಯಾನ್ ಟ್ರೀಟ್‌ಮೆಂಟ್
ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈಗ ಪ್ರಾಣಿ, ಪಕ್ಷಿಗಳಿಗೆ ಈಗ ಯಾಂತ್ರೀಕೃತ ಫ್ಯಾನ್‌ಗಳ ಆಹ್ಲಾದಕರ ಗಾಳಿ, ಜತೆಗೆ ಅಲ್ಲಲ್ಲಿ ತಣ್ಣೀರ ಸಿಂಚನದ ಖುಷಿ… ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ಸೆಕೆ ತಡೆಯಲಾಗುತ್ತಿಲ್ಲ. ಹೀಗಾಗಿ ಪಿಲಿಕುಳ ಉದಾನವನದಲ್ಲಿರುವ ಪ್ರಾಣಿಗಳಿಗೆ ಬಿಸಿಲಿನ ತಾಪ ತಣಿಸಲು ಫ್ಯಾನ್, ನೀರು ಸಿಂಪಡಣೆ, ಜತೆಯಲ್ಲಿ ಶೀಟ್‌ಗಳಿಗೆ ಬಿಳಿ ಪೈಂಟ್ ಬಳಿಯುವ ಮೂಲ ಹೊಸ ಪ್ರಯತ್ನವನ್ನು ಮಾಡಲಾಗುತ್ತಿದೆ.
ಉದಾಸೀನತೆಗೆ ದೂಡಿದ ಮಳೆರಾಯನ ಆಟ !
ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.