Kudla City

ಕುಡ್ಲದಲ್ಲಿ ಮಳೆರಾಯನ ಕೆಲಸ ಆರಂಭ

ಒಂದೆಡೆ ಸಿಡಿಲು ಜತೆಗೆ ಕಾಣಿಸುವ ಗುಡುಗು ಇವುಗಳ ಜತೆಯಲ್ಲಿ ಗಾಳಿ ಜತೆಗೆ ಹನಿಯ ಲೀಲೆಗಳ ಜತೆಗೆ ಆರಂಭವಾದ ಮಳೆ ರಾತ್ರಿಯ ಸೆಕೆಯನ್ನು ತಣ್ಣಗೆ ಮಾಡುತ್ತಾ ಮಲಗುವ ಮಂದಿಯ ನಿದ್ರೆಗೆ ಜಾಗ ನೀಡಿದ ಅನುಭವ ಶನಿವಾರ ಮುಂಜಾನೆ ಹೊತ್ತಿಗೆ ನಡೆದಿದೆ.

ಹೌದು. ಕುಡ ಸಿಟಿಯೊಳಗೆ ಮಳೆರಾಯ ಭರ್ಜರಿ ಯಾಗಿ ಮಳೆ ಸುರಿಸಿ ಇಡೀ ಸಿಟಿಯನ್ನು ತಣ್ಣಗೆ ಮಾಡಿ ಹೋಗಿದ್ದಾನೆ.

ಮಾವು ತಿನ್ನಲು ಕದ್ರಿ ಪಾರ್ಕ್‌ಗೆ ಬನ್ನಿ

ಈಗ ಎಲ್ಲೆಡೆ ಮಾವಿನ ಸೀಸನ್. ಮಾರುಕಟ್ಟೆಯೊಳಗಂತೂ ತರೇವಾರಿ ಮಾವಿನ ಹಣ್ಣುಗಳು ಈಗಾಗಲೇ ಬಂದು ಬಿದ್ದಿದೆ. ಆದರೆ ಅಲ್ಲಿ ಎಲ್ಲವೂ ಉತ್ತಮವಾದ ಮಾವಿನ ಹಣ್ಣುಗಳು ಸಿಗೋದಿಲ್ಲ. ಕೆಮಿಕಲ್, ಕಾರ್ಬೈಡ್ ಹಾಕಿ ಮಾಗಿಸಿದ ಮಾವಿನ ಹಣ್ಣುಗಳೇ ಈಗ ಸಿಗುವಂತದ್ದು ಎನ್ನುವುದು ಕುಡ್ಲ ಸಿಟಿಯ ಮಂದಿಗೆ ಗೊತ್ತು.

ಆದರೆ ಒಂದಲ್ಲ ಎರಡಲ್ಲ ಬರೋಬರಿ ಹತ್ತರಿಂದ ಹದಿನೈದರಷ್ಟು ಹೆಚ್ಚಿನ ನಾನಾ ತಳಿಗಳ ಮಾವು ಕದ್ರಿ ಪಾರ್ಕ್‌ನ ಉದ್ಯಾನವನದ ಮಾವು ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ. ಮೂರು ದಿನಗಳ ಕಾಲ ನಡೆಯುವ ಈ ಮಾವು ಪ್ರದರ್ಶನ ಮಾರಾಟದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಾವು ಪ್ರಿಯರಿಗೆ ನಾನಾ ಮಾವು ತಳಿಗಳನ್ನು ಬೆಳೆಯುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಂದ ರೈತರು ನೇರವಾಗಿ ಮಾರಾಟ ಮಾಡಲು ಮಾವು ಮೇಳದಲ್ಲಿ ಮಾರಾಟ ಕಲ್ಪಿಸಲಾಗಿದೆ. ವಿಶೇಷವಾಗಿ ಅಲ್ಪೋನ್ಸಾ, ಮಲ್ಲಿಕಾ, ರಸಪೂರಿ, ಮಲಗೋವಾ, ದಸೇರಿ, ಸೆಂದೂರು, ತೋತಾಪುರಿ, ಬೆಗನ್ ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಿಮಾಯತ್ ಮಾವುಗಳ ಮಾರಾಟ ನಡೆಯಲಿದೆ.

ವಿದ್ಯೆಯ ಜತೆಗೆ ಜೀವನ ಮೌಲ್ಯ ಹೇಳುವ ಹಾಸ್ಟೆಲ್

ಕಾವೂರು ಬಿಜಿಎಸ್ ಸಂಸ್ಥೆಯಲ್ಲಿರುವ ವಿಶೇಷತೆ ಎಂದರೆ ಇಲ್ಲಿರುವ ಮೊಂಟೆಸರಿಯಿಂದ ಹಿಡಿದು ಪದವಿ ಕಾಲೇಜಿನ ವರೆಗೂ ಗುಣಮಟ್ಟದ ವಿದ್ಯೆಯ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ.

ಇದೇ ಕಾರಣದಿಂದ ಈ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರುವ ಜತೆಗೆ ಫಲಿತಾಂಶದಲ್ಲೂ ಎತ್ತಿದ ಕೈ. ಬಿಜಿಎಸ್‌ನ ಹಾಸ್ಟೆಲ್ ವಿಚಾರದಲ್ಲೂ ಅಷ್ಟೇ ಧ್ಯಾನ, ಯೋಗದ ಜತೆಯಲ್ಲಿ ಸಮಾಜದಲ್ಲಿ ಮೌಲ್ಯಯುತ ಬದುಕನ್ನು ಹೇಗೆ ಕಂಡು ಕೊಳ್ಳಬಹುದು ಎನ್ನುವ ವಿಚಾರದಲ್ಲೂ ಈ ಹಾಸ್ಟೆಲ್ ಎಲ್ಲರಿಗೂ ಪಾಠ ಮಾಡುತ್ತದೆ.

ಮಂಗಳೂರು ಸಂಸದರಾಗಿ ನಳಿನ್ ಭರ್ಜರಿ ಆಯ್ಕೆ

ಮಂಗಳೂರು ಸಂಸದರಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆ ಯಾಗುವ ಮೂಲಕ ಮೂರು ಬಾರಿ ಸಂಸದರಾಗಿ ದಾಖಲೆ‌ ನಿರ್ಮಿಸಿದ್ದಾರೆ. ಇದು ನಳಿನ್ ರ ಹ್ಯಾಟ್ರಿಕ್ ಗೆಲುವು ಎನ್ನುವುದು ವಿಶೇಷ. ಪ್ರತಿ ಹಂತದ ಮತ ಎಣಿಕೆಯಲ್ಲೂ ಲೀಡ್ ಉಳಿಸಿಕೊಂಡು ಜಿಲ್ಲೆಯ ಜನತೆ ಮೋದಿ ಅಭಿವೃದ್ಧಿ ಯ ಮಂತ್ರಕ್ಕೆ ಪೂರ್ಣ ಅಂಕ ನೀಡಿದ್ದಾರೆ ಎನ್ನುವುದು ಮತದಾರರ ಅಭಿಪ್ರಾಯ.

ಕುಡ್ಲ ಸಿಟಿ ಕೂಲ್ ಜತೆಗೆ ಮತ ಎಣಿಕೆಯ ಬಿಸಿ !

ಕುಡ್ಲ ಸಿಟಿ ಮತ್ತೆ ಕೂಲ್ ಆಗಿದೆ. ಒಂದೆಡೆ ರಾತ್ರಿ ಸುರಿದ ಮಳೆಗೆ ಇಳೆ ತುಂಬಾನೇ ತಣ್ಣಗಾಗಿ ತಂಪು ಬೀರುತ್ತಿದೆ.
ಇನ್ನೊಂದೆಡೆ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ‍್ಯ ಕೂಡ ಚುರುಕಿನಿಂದ ನಡೆಯುತ್ತಿರುವ ಜತೆಯಲ್ಲಿ ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದ ನಳಿನ್ ಕುಮಾರ್ ಕಟೀಲ್ ಈ ಬಾರಿನೂ ಗೆಲುವ ಎಲ್ಲ ಸೂಚನೆಗಳು ರವಾನೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಖಾತ್ರಿಯಾಗಿದೆ.