ಕಾವೂರು ಬಿಜಿಎಸ್ ಸಂಸ್ಥೆಯಲ್ಲಿರುವ ವಿಶೇಷತೆ ಎಂದರೆ ಇಲ್ಲಿರುವ ಮೊಂಟೆಸರಿಯಿಂದ ಹಿಡಿದು ಪದವಿ ಕಾಲೇಜಿನ ವರೆಗೂ ಗುಣಮಟ್ಟದ ವಿದ್ಯೆಯ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ.
ಇದೇ ಕಾರಣದಿಂದ ಈ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರುವ ಜತೆಗೆ ಫಲಿತಾಂಶದಲ್ಲೂ ಎತ್ತಿದ ಕೈ. ಬಿಜಿಎಸ್‌ನ ಹಾಸ್ಟೆಲ್ ವಿಚಾರದಲ್ಲೂ ಅಷ್ಟೇ ಧ್ಯಾನ, ಯೋಗದ ಜತೆಯಲ್ಲಿ ಸಮಾಜದಲ್ಲಿ ಮೌಲ್ಯಯುತ ಬದುಕನ್ನು ಹೇಗೆ ಕಂಡು ಕೊಳ್ಳಬಹುದು ಎನ್ನುವ ವಿಚಾರದಲ್ಲೂ ಈ ಹಾಸ್ಟೆಲ್ ಎಲ್ಲರಿಗೂ ಪಾಠ ಮಾಡುತ್ತದೆ.