ಕರಾವಳಿಗೆ ಹುಲಿವೇಷ ಹೊಸತು ಏನೂ ಅಲ್ಲ. ಆದರೆ ಅಷ್ಟಮಿಗೆ ಇಲ್ಲಿನ ವಿದ್ಯಾರ್ಥಿಗಳೇ ಹುಲಿವೇಷ ಹಾಕಿಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಹೊಸ ದಾಖಲೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಹೌದು. ಇದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮಾತು.
Tagged: citykudla
ಅಡಕೆ ಹಾಳೆ ಟೋಪಿಯಲ್ಲಿ ಮೆಡಿಸಿನ್ ಪವರ್
ಅಡಕೆ ಹಾಳೆ ಟೋಪಿಗೆ ಅಂತಾರಾಷ್ಟ್ರ ಮಟ್ಟದ ಹೆಸರು ಸಲ್ಲುತ್ತಿದೆ. ಅಡಕೆ ಹಾಳೆ ಟೋಪಿಯಲ್ಲಿ ಔಷಧೀಯ ಗುಣಗಳ ಕುರಿತು ಅಧ್ಯಯನ ನಡೆಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವುದಕ್ಕಾಗಿ ಲಂಡನ್‌ನ ಪ್ರಮುಖ ಪರಿಸರ ವಿಜ್ಞಾನಿ ಗ್ಯಾರಿಡೆ ಲಾ ಪೊಮೆರೊಯಿನ್, ಮಹಾರಾಷ್ಟ್ರದ ಪುಣೆ ನಿವಾಸಿ, ಯುಎಸ್‌ನಲ್ಲಿರುವ ಸೆನ್ನಿವೆಲ್ ಕಂಪನಿ ಮಾಲೀಕ ಮುಗಧಾಮುಲ್ಲ ಅವರನ್ನು ಒಳಗೊಂಡ ತಂಡ ಜೂ. 29 ರಿಂದ ಜು.1ರ ತನಕ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಜಾಲ್ಸೂರಿಗೆಆಗಮಿಸಲಿದೆ.
ಪರಿಸರವಾದಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಡಾ. ಆರ್.ಕೆ.ನಾಯರ್ ಅವರ ಜಾಲ್ಸೂರಿನಲ್ಲಿರುವ ನಿವಾಸಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ದೇಶದ ೯ ರಾಜ್ಯಗಳಲ್ಲಿ 7 ಲಕ್ಷದಷ್ಟು ಸಸಿಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ ಡಾ. ಆರ್. ಕೆ.ನಾಯರ್. ಅವರಿಗೆ ನೇಪಾಳದಲ್ಲಿ ನೀಡಿದ ಸ್ವಾಗತ ಕಾರ‍್ಯಕ್ರಮದಲ್ಲಿ ಗ್ಯಾರಿಡಾ ಲಾ ಪೊಮೆರೊಯಿನ್ ಹಾಗೂ ಮುಗದಮುಲ್ಲಾ ಎಂಬವರ ಪರಿಚಯವಾಗಿದೆ. ಡಾ. ಆರ್.ಕೆ.ನಾಯರ್ ಅವರ ತಲೆಯಲ್ಲಿದ್ದ ಅಡಕೆ ಹಾಳೆಯ ಟೋಪಿಯನ್ನು ಸುಮಾರು 15 ನಿಮಿಷಗಳ ಕಾಲ ತಲೆ ಮೇಲಿಟ್ಟಾಗ ಉಂಟಾದ ಅನುಭವದ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲು ಪ್ರೇರಣೆಯಾಗಿದೆ.
ಹಾಳೆ ಟೋಪಿ ಧರಿಸಿದರೆ ತಲೆನೋವು, ಕಣ್ಣು ನೋವು, ಸಂಧಿ ನೋವು, ಸ್ನಾಯು ಸೆಳೆತ ನಿವಾರಣೆಯಾಗುತ್ತದೆ ಎಂಬುದನ್ನು ಈಗಾಗಲೇ ನಡೆಸಿದ ಸಂಶೋಧನೆಯಿಂದ ತಿಳಿಯಲಾಗಿದೆ. ಮಾತ್ರವಲ್ಲ ಈ ಟೋಪಿ ಧರಿಸಿದರೆ ಒಳ್ಳೆಯ ನಿದ್ರೆ ಮಾಡಲು ಸಹ ಸಹಾಯವಾಗುತ್ತದೆ ಎಂಬುದೂ ಸಹ ಸಂಶೋಧನೆಯ ಮೂಲಕವೇ ಕಂಡುಕೊಳ್ಳಲಾಗಿದೆ. ಅಲ್ಲದೇ, ಮೊಬೈಲ್ ಟವರ್ ಗಳ ವಿಕಿರಣವನ್ನು ತಡೆಯಲುಈ ಹಾಳೆ ಟೋಪಿ ಧರಿಸಿದರೆ ಸಾಧ್ಯವಾಗುತ್ತದೆ ಎಂಬುದುಸಾಬೀತಾಗಿದೆ. ಮೆದುಳಿನ ಕಾರ‍್ಯಚಟುವಟಿಕೆ ನಿಯಂತ್ರಣದಲ್ಲೂಹಾಳೆಯ ಪರಿಣಾಕಾರಿಯಾಗಿದೆ.
ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹಾಳೆ ಟೋಪಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಬಯಲುಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈಗಲೂ ಬಳಸುತ್ತಿದ್ದಾರೆ. ಕೃಷಿ ಸಂಬಂಧಿತ ನಾನಾ ಕಾರ‍್ಯಕ್ರಮಗಳಲ್ಲಿ ಈಗಲೂ ವೇದಿಕೆಯಲ್ಲಿ ಅತಿಥಿಗಳು ಹಾಳೆ ಟೋಪಿ ಧರಿಸುತ್ತಾರೆ.
ಆಹಾರ ಪಾರ್ಸೆಲ್ ಗೆ ಕುಡ್ಲದ ಹುಡುಗಿಯರ ಲಗ್ಗೆ
ಕುಡ್ಲದಲ್ಲಿ ಆಹಾರ ಪಾರ್ಸೆಲ್ ಅಥವಾ ಫುಡ್ ಡೆಲಿವರಿ ವ್ಯಾಪಾರ ಸಿಕ್ಕಾಪಟ್ಟೆ ಜೋರಾಗಿ ನಡೆಯುತ್ತಿದೆ ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಯಲ್ಲಿ ಈಗಾಗಲೇ ಹುಡುಗರ ಜತೆಯಲ್ಲಿ ಹುಡುಗಿಯರು ಕೂಡ ಫುಡ್ ಡೆಲಿವರಿ ವ್ಯವಸ್ಥೆ ಯೊಳಗೆ ಬಂದು ನಿಂತಿದ್ದಾರೆ ಕುಡ್ಲದ ಲ್ಲೂ ಈಗ ಡೆಲಿವರಿ ಬಾಯ್ಸ್ ಜತೆಯಲ್ಲಿ ಡೆಲಿವರಿ ಗರ್ಲ್ಸ್ ಕೂಡ ಸೇರಿಕೊಳ್ಳುತ್ತಿದ್ದಾರೆ.
ಒಂದು ಲೆಕ್ಕದ ಪ್ರಕಾರ ಮೂರು ಮಂದಿ ಹುಡುಗಿಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಉರ್ವದ ಮೇಘನಾ ಕೂಡ ಒಬ್ಬರು. ಅವರು ಬೇಸಿಕಲಿ ಬಿಎ ಸಾಹಿತ್ಯ ಓದಿದವರು ವಿದೇಶದಲ್ಲಿ ದುಡಿದು ಬಂದವರು ಆದರೂ ಈ ಫುಡ್ ಡೆಲಿವರಿ ಗರ್ಲ್ಸ್ ವ್ಯವಸ್ಥೆ ಯ ಪಾತ್ರವಾಗಬೇಕೆಂದು ಮುಂದೆ ಬಂದಿದ್ದಾರೆ. ಹುಡುಗಿಯರು ಯಾವುದಕ್ಕೂ ಕಮ್ಮಿ ಇಲ್ಲ ಎನ್ನುಎನ್ನುವುದಕ್ಕೆ ಇದೊಂದು ಉತ್ತಮ ಸ್ಯಾಂಪಲ್ ಎನ್ನಲು ಯಾವುದೇ ಅಡ್ಡಿ ಮಾತು ಇಲ್ಲ.
ಮಳೆಯ ಭಯಕ್ಕೆ ಮಂಗಳ ಸ್ಟೇಡಿಯಂ ಗೆ ಟರ್ಪಲ್ ಹೊದಿಕೆ
ಕುಡ್ಲದ ಅದರಲ್ಲೂ ಜಿಲ್ಲೆಯ ಪ್ರತಿಷ್ಟಿತ ಮಂಗಳ ಸ್ಟೇಡಿಯಂ ನ ಛಾವಣಿಗೆ ಭದ್ರತೆ ಯ ದೃಷ್ಟಿಯಿಂದ ಟರ್ಪಲ್ ಹೊದಿಕೆಯನ್ನು ಹಾಕಲಾಗಿದೆ. ಈಗಾಗಲೇ ಮೇಲ್ಚಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡ ಪರಿಣಾಮ ಇಂತಹ ಕಾರ್ಯಕ್ಕೆ ಕ್ರೀಡಾ ಇಲಾಖೆ ಮುಂದಾಗಿದೆ.
13 ವರ್ಷ ಭರ್ತಿ 1 ಲಕ್ಷ ಗಿಡ ನೆಟ್ಟ ಜೀತ್ !
ಒಂದಲ್ಲ ಎರಡಲ್ಲ ಭರ್ತಿ 13 ವರ್ಷದಲ್ಲಿ ಜೀತ್ ಮಿಲಾನ್ ರೋಚ್ ನೆಟ್ಟ ಗಿಡಗಳ ಸಂಖ್ಯೆ ಭರ್ತಿ 1 ಲಕ್ಷಕ್ಕೂ ಮಿಕ್ಕಿದೆ. ಇದೆಲ್ಲವೂ ಅವರೇ ತಮ್ಮ ಸ್ವಂತ ಖರ್ಚಿನಲ್ಲಿ ನೆಟ್ಟ ಗಿಡಗಳು.
ಮುಖ್ಯವಾಗಿ ರಸ್ತೆ ಬದಿ, ಸಶ್ಮಾನ ಹೀಗೆ ಮಂಗಳೂರಿನಲ್ಲಿ ಎಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಅವರು ಗಿಡ ನೆಡುವ ಕೆಲಸ ಮಾಡುತ್ತಾರೆ.
ಎಲ್ಲರಿಗೂ ಇತರ ವೃತ್ತಿ ಯ ನಡುವೆ ಗಿಡ ನೆಡುವ ಹವ್ಯಾಸ ಇದ್ದರೆ ಇವರಿಗೆ ಇದೇ ಫುಲ್ ಟೈಮ್ ಕಾಯಕ. ಪರಿಸರ ದಿನದ ಅಂಗವಾಗಿ ಕುಡ್ಲ ಸಿಟಿ ಯ ಹೆಮ್ಮೆಯ ಇಂತಹ ಕತೆಗಳನ್ನು ನಿಮ್ಮ ಮುಂದೆ ಇಡುತ್ತಿದೆ.