Tagged: students

ಇನ್ನು ಸ್ಕೂಲ್ ಗೆ ಹೊರಡುವ ಸಮಯ

ಇಂದಿನಿಂದ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಬರಲಿದ್ದಾರೆ. ಹೌದು. ಇಂದಿನಿಂದ ಶಾಲಾ ಆರಂಭ ನಡೆಯಲಿದೆ.
ಒಂದೆಡೆ ಬಿರು ಬಿಸಿಲು ಜತೆಗೆ ಮಳೆರಾಯ ಕೃಪೆ ತೋರಿಸದ ಪರಿಣಾಮ ಪುಟಾಣಿ ಮಕ್ಕಳು ಶಾಲೆಯ ದಾರಿ ಹಿಡಿಯಲೇ ಬೇಕಾಗುತ್ತದೆ.

ಮುಖ್ಯವಾಗಿ ಕೆಲವೊಂದು ಖಾಸಗಿ ಶಾಲೆಗಳು ಆರಂಭ ಕೊಂಚ ತಡವಾಗುವ ಸಾಧ್ಯತೆಯಿದೆ. ಉಳಿದಂತೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ ಬೇಗನೆ ಬಂದು ತಲುಪಿದೆ.

ಸಿಇಟಿಯಲ್ಲಿ ಕುಡ್ಲದ ವಿದ್ಯಾರ್ಥಿಗಳು ಹೇಗೆ ರ‍್ಯಾಂಕ್ ಪಡೆಯುತ್ತಾರೆ?

ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಟಾಪ್ 10 ನಲ್ಲಿ ಒಟ್ಟು 9 ರ‍್ಯಾಂಕ್‌ಗಳು ಬಂದಿವೆ. ಇದರಲ್ಲಿ ಮಂಗಳೂರಿನ ಎಕ್ಸ್‌ಫರ್ಟ್ ಕಾಲೇಜಿಗೆ 8 ರ‍್ಯಾಂಕ್ ಮತ್ತು ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಒಂದು ರ‍್ಯಾಂಕ್ ಬಂದಿದೆ.

ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿಗಳಾದ ಆರ್.ಚಿನ್ಮಯ್ ಎಂಜಿನಿಯರಿಂಗ್ 2ನೇ ಮತ್ತು ಫಾರ್ಮಸಿಯಲ್ಲಿ 3ನೇ ರ‍್ಯಾಂಕ್ ಗಳಿಸಿದ್ದಾರೆ. ಭುವನ್ ವಿ.ಬಿ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 3ನೇ ರ‍್ಯಾಂಕ್, ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಸಮರ್ಥ್ ಮಯ್ಯ ಎಂಜಿನಿಯರಿಂಗ್‌ನಲ್ಲಿ 5ನೇ ರ‍್ಯಾಂಕ್, ಆಶಯ್ ಜೈನ್ ಸಿ.ಎ. ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್‌ನಲ್ಲಿ 7ನೇ ರ‍್ಯಾಂಕ್, ಸುದೇಶ್ ಗೌಡ ಜೆ. ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 7ನೇ ರ‍್ಯಾಂಕ್, ಯಶ್ ಬನ್ನೂರು ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 9ನೇ ರ‍್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಪಿಯು ಕಾಲೇಜಿನ ಎಸ್.ದರ್ಶನ್ ಸಮರ್ಥ ಬಿಎಸ್ಸಿ (ಅಗ್ರಿಕಲ್ಚರ್)ನಲ್ಲಿ 10ನೇ ರ‍್ಯಾಂಕ್ ಗಳಿಸಿದ್ದಾರೆ.

ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ

ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತ‌ನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ‌ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.