服务不可用。 rain – Page 3 – Kudla City

Tagged: rain

ಕುಡ್ಲದಲ್ಲಿ ಮಳೆರಾಯನ ಕೆಲಸ ಆರಂಭ

ಒಂದೆಡೆ ಸಿಡಿಲು ಜತೆಗೆ ಕಾಣಿಸುವ ಗುಡುಗು ಇವುಗಳ ಜತೆಯಲ್ಲಿ ಗಾಳಿ ಜತೆಗೆ ಹನಿಯ ಲೀಲೆಗಳ ಜತೆಗೆ ಆರಂಭವಾದ ಮಳೆ ರಾತ್ರಿಯ ಸೆಕೆಯನ್ನು ತಣ್ಣಗೆ ಮಾಡುತ್ತಾ ಮಲಗುವ ಮಂದಿಯ ನಿದ್ರೆಗೆ ಜಾಗ ನೀಡಿದ ಅನುಭವ ಶನಿವಾರ ಮುಂಜಾನೆ ಹೊತ್ತಿಗೆ ನಡೆದಿದೆ.

ಹೌದು. ಕುಡ ಸಿಟಿಯೊಳಗೆ ಮಳೆರಾಯ ಭರ್ಜರಿ ಯಾಗಿ ಮಳೆ ಸುರಿಸಿ ಇಡೀ ಸಿಟಿಯನ್ನು ತಣ್ಣಗೆ ಮಾಡಿ ಹೋಗಿದ್ದಾನೆ.

ಕುಡ್ಲದ ಮೋಡಗಳು ಮಳೆ ಸುರಿಸೋದಿಲ್ಲ !

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲಮಳೆಯಾಗುವ ಸಾಧ್ಯತೆಗಳಿಲ್ಲ. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಾತ್ರ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಭಾಗಶ: ಮೋಡ ಕವಿದ ವಾತಾವರಣ ನೆಲೆಸಿದರೂ ರಾತ್ರಿಯಾಗುತ್ತಿದ್ದಂತೆ ಮೋಡ ಚದುರಿ ಹೋಗುತ್ತಿದೆ. ಫೋನಿ ಚಂಡಮಾರುತದ ಮಳೆ ನಿರೀಕ್ಷೆ ಕೂಡ ಜಿಲ್ಲೆಯ ಮಟ್ಟಿಗೆ ಹುಸಿಯಾಗಿದೆ. ಈ ನಡುವೆ ಚಂಡಮಾರುತ ಬಳಿಕ ಇಳಿಕೆಯಾದ ತಾಪಮಾನ ಜಿಲ್ಲೆಯಲ್ಲಿ ಮತ್ತೆ ಏರುತ್ತಿದೆ.

ಉದಾಸೀನತೆಗೆ ದೂಡಿದ ಮಳೆರಾಯನ ಆಟ !

ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.