ಸ್ವಾಮಿ ದಯಮಾಡಿ ಧರ್ಮಸ್ಥಳಕ್ಕೆ ಸಧ್ಯಕ್ಕೆ ಬರಬೇಡಿ. ಇಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ನಿಮ್ಮ ಪ್ರವಾಸ ಮುಂದಕ್ಕೆ ಹಾಕಿಬಿಡಿ ಎನ್ನುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಯನ್ನು ಪತ್ರದ ಮೂಲಕ ಬಿಚ್ಚಿಟ್ಟವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಈ ಮೂಲಕ ಕುಡ್ಲ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲೂ ಸಮಸ್ಯೆ ಯ ಚಿತ್ರಣ ಈ ಪತ್ರದ ಮೂಲಕ ಅನಾವರಣ ಗೊಂಡಿತು.
Tagged: Mangalore city
ಕುಡ್ಲದ ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೂ ಬರ
ಒಂದೆಡೆ ಶಾಲಾ ಕಾಲೇಜುಗಳಿಗೆ ರಜೆ ಮತ್ತೊಂದು ಕಡೆ ಮುಸ್ಲಿಮರ ಉಪವಾಸ ಎರಡು ಜತೆಯಾದ ಪರಿಣಾಮ ಮಂಗಳೂರಿನ ಪ್ರಮುಖ ಆಸ್ಪತ್ರೆ ಸೇರಿದಂತೆ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಗಳ ಮೂಲಕ ರಕ್ತನೀಡುತ್ತಿದ್ದರು. ಮುಸ್ಲಿಂ ಸಂಘಟನೆ ಗಳು ಕೂಡ ಇದೇ ರೀತಿಯ ಕೆಲ್ಸ ಮಾಡುತ್ತಿದ್ದರು. ಆದರೆ ಇಬ್ಬರು ಈ ಸಲ ರಕ್ತ ನೀಡದ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ತೀವ್ರ ರಕ್ತದ ಕೊರತೆ ಕಾಣಿಸಿಕೊಂಡಿದೆ.
ಕುಡ್ಲದ ಬ್ಯೂಟೆಸ್ಟ್ ಬೀಚ್ ತಣ್ಣೀರು ಬಾವಿ ಯಾಕೆ ?
ಮಂಗಳೂರಿನ ಎಲ್ಲ ಬೀಚ್‌ಗಳು ಸುಂದರ ಎನ್ನುವ ಮಾತಿನಿಂದ ಆರಂಭಿಸುವುದಾದರೆ ತಣ್ಣೀರು ಬಾವಿ ಬೀಚ್ ಎಲ್ಲಕ್ಕಿಂತ ಹೆಚ್ಚು ಸುಂದರ ಎನ್ನುವುದು ಲೋಕಲ್ ಜತೆಗೆ ವಿದೇಶಿ ಪ್ರವಾಸಿಗರ ಮಾತು.
ಇಲ್ಲಿನ ಸೌಂದರ್ಯತೆಗೆ ಬಹುಮುಖ್ಯವಾದ ಕಾರಣಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲದೇ ಹೋದರೂ ಪ್ರೇಮಿಗಳಿಂದ ಹಿಡಿದು ಕುಟುಂಬ ವರ್ಗಕ್ಕೂ ಈ ಬೀಚ್ ಇಷ್ಟವಾಗುವಂತಿದೆ.
ತಣ್ಣನೆಯ ಗಾಳಿ ಅಲೆಗಳ ಅಬ್ಬರದೊಳಗೆ ಮುಳುಗುವ ಸೂರ್ಯನ ಬಿಂಬವನ್ನು ಕಾಣಬೇಕಾದರೆ ತಣ್ಣೀರು ಬಾವಿ ಬೀಚ್‌ಗೆ ಭೇಟಿ ನೀಡಿ. ವಿಶೇಷವಾಗಿ ಬಸ್‌ಗಳ ಸೌಕರ್ಯ ಹೆಚ್ಚಿನ ಪ್ರಮಾಣದಲ್ಲಿ ಇಲ್ಲದೇ ಹೋದರೂ ಕೂಡ ಸುಲ್ತಾನ್ ಬತ್ತೇರಿಯ ಮೂಲಕ ಪ್ರಯಾಣಿಕರ ಹಡಗಿನ ಮೂಲಕ ಹೋಗಬಹುದು. ಸ್ವಂತ ವಾಹನ ಇದ್ದರೆ ಕೂಳೂರು ಕಡೆಯಿಂದ ತಣ್ಣೀರು ಬಾವಿ ಬೀಚ್‌ಗೆ ಪ್ರಯಾಣ ಬೆಳೆಸಬಹುದು.
ಎಸ್ಸೆಸ್ಸೆಲ್ಸಿ ತುಳು ಭಾಷೆಯಲ್ಲಿ 100 ರಿಸಲ್ಟ್
ಎಸ್ಸೆಸ್ಸೆಲ್ಸಿ ಫಲಿತಾಂಶ ಈಗಾಗಲೇ ಹೊರಬಿದಿದ್ದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಐಚ್ಚಿಕ ವಿಷಯವಾಗಿ ಬೋಧಿಸಲಾಗುತ್ತಿದ್ದು ಈ ಬಾರಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಒಟ್ಟು 617 ವಿದ್ಯಾರ್ಥಿಗಳು ತುಳು ಭಾಷೆ ಪರೀಕ್ಷೆ ಬರೆದಿದ್ದಾರೆ.
ಅದರಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು ಶೇ. 100 ಫಲಿತಾಶ ದಾಖಲಾಗಿದೆ. ಅದರಲ್ಲಿಯೂ 63 ವಿದ್ಯಾರ್ಥಿಗಳು ನೂರಕ್ಕೆ100 ಅಂಕ ಪಡೆದಿದ್ದಾರೆ.ಉಭಯ ಜಿಲ್ಲೆಗಳ ಒಟ್ಟು 41 ಶಾಲೆಗಳಲ್ಲಿ ತುಳು ಪಠ್ಯ ಬೋಧನೆ ನಡೆಯುತ್ತಿದೆ. ತುಳುವಿನಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಿಲ್ಲೆಯ ಒಟ್ಟು ಫಲಿತಾಶದಲ್ಲಿ ಏರಿಕೆ ಕಂಡುಬಂದಿದೆ.
ನೂರು ದಾಟಿದರೂ ಇವರು ಕುಡ್ಲದ ಟ್ರಾಫಿಕ್ ವಾರ್ಡನ್
ಮಂಗಳೂರು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಜತೆಗೆ ಅವರ ಸಿಬ್ಬಂದಿಗಳು ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ.
ಆದರೆ ಮಂಗಳೂರಿನಲ್ಲಿ ಹಿರಿಯ ಜೀವವೊಂದು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹೌದು. 100 ವರ್ಷದಲ್ಲಿರುವ ಜೋಯ್ ಗೊನ್ಸಾಲ್ವೀಸ್ ಅವರು ನಗರದ ಪ್ರಮುಖ ಸರ್ಕಲ್‌ಗಳಾದ ನಂತೂರು, ಕೆಪಿಟಿ ಸರ್ಕಲ್ ಬಳಿಯಲ್ಲಿ ಟ್ರಾಣ ಮಾಡುವ ಕೆಲಸ ಮಾಡುತ್ತಾರೆ.
ಅವರೇ ಟ್ರಾಫಿಕ್ ವಾರ್ಡನ್ ಸ್ಕ್ವಾಡ್ ಹುಟ್ಟುಹಾಕುವಲ್ಲಿ ಕೆಲಸ ಮಾಡಿದವರು. ಅಂದಹಾಗೆ ಜೋಯ್ ಅವರು ಇದು ಸಂಬಳಕ್ಕೆ ಮಾಡುತ್ತಿರುವ ಕೆಲಸವಲ್ಲ ಬದಲಾಗಿ ತಮ್ಮ ಆತ್ಮತೃಪ್ತಿಗಾಗಿ ಕೆಲಸ ಮಾಡುತ್ತಿದ್ದಾರೆ.
ಟ್ರಾಫಿಕ್ ಪೊಲೀಸರಿಗೆ ದಣಿವಾದಾಗ ಜ್ಯೂಸ್ ಸೇರಿದಂತೆ ಇತರ ಉಪಚಾರದಲ್ಲೂ ಜೋಯ್ ಅವರು ಎತ್ತಿದ ಕೈ. ಇವರ ಸೇವೆಯನ್ನು ಇಲಾಖೆ ಕೂಡ ಗಮನಿಸಿಕೊಂಡು ಸನ್ಮಾನಿಸಿದೆ.