ಪ್ಲಾಸ್ಟಿಕ್ ಬಿಟ್ಟು ಬಾಳೆಲೆಗೆ ಅವಕಾಶ ಕೊಡಿ ಎನ್ನುವ ಕುಡ್ಲ ಸಿಟಿಯ ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಖ್ಯವಾಗಿ ಮಂಗಳೂರಿನ ರವಿಚಂದ್ರ ಎನ್ನುವ ವರು ಬಾಳೆಲೆ ಹಾಗೂ ಅಡಕೆ ಹಾಳೆಯ ಮೂಲಕ ಏನೆಲ್ಲ ಪರಿಸರಪೂರಕವಾದ ವಸ್ತುಗಳನ್ನುಪ್ಲಾಸ್ಟಿಕ್ ಗೆ ಪರ್ಯಾಯ ವಾಗಿ ಬಳಸಬಹುದು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದರ ಜತೆಯಲ್ಲಿ ಹಳೆಯ ರದ್ದಿ ಪೇಪರ್ ನಿಂದಲೂ ಬ್ಯಾಗ್ ತಯಾರಿಸುವ ಕುರಿತು ಮಂಗಳೂರಿನ ಸಂತೋಷ್ ಪೂಜಾರಿ ಅವರು ಪ್ರಯೋಗ ಮಾಡಿ ಕಳುಹಿಸಿದ್ದಾರೆ. ಮಂಗಳೂರು ಮಾತ್ರವಲ್ಲ ಇಡೀ ದೇಶದ ಜನತೆ ಪ್ಲಾಸ್ಟಿಕ್ ನಿಂದ ದೂರ ಓಡುತ್ತಿದ್ದಾರೆ. ಪರ್ಯಾಯ ವಸ್ತುಗಳ ಕಡೆಗೆ ಮನಸ್ಸು ಮಾಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಮುಂದಿನ ನಮ್ಮ ಮಕ್ಕಳ ಬದುಕಿಗೆ ಒಳ್ಳೆಯ ಪರಿಸರ ಬಿಟ್ಟು ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕುಡ್ಲಸಿಟಿಯ ಅಭಿಯಾನಕ್ಕೆ ಕೈಜೋಡಿಸಿ..
Tagged: Mangalore city
ಮಂಗಳೂರಿನ ಚರ್ಚ್ ಗಳಲ್ಲೂ ಅನ್ನದಾನ !
ಮಂಗಳೂರಿಗೆ ಬಂದು ಊಟಕ್ಕೆ ಹಣ ಇಲ್ಲಹೊಟ್ಟೆಯಲ್ಲಿ ಕೂರಬೇಕಿಲ್ಲ. ಮಂಗಳೂರಿನ ಕದ್ರಿ, ಕುದ್ರೋಳಿ, ಕಟೀಲು, ಸುಂಕದಕಟ್ಟೆ ದೇವಳದಲ್ಲಿ ಭಕ್ತಾದಿಗಳಿಗೆ ಮಧ್ಯಾಹ್ನ ಉಚಿತ ಊಟ(ದೇವರ ಪ್ರಸಾದ)ದ ವ್ಯವಸ್ಥೆ ಇರುತ್ತದೆ. ಅದರಲ್ಲೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲೂ ಇಂತಹ ಅನ್ನದಾನದ ಕಲ್ಪನೆಯನ್ನು ಆಳವಡಿಸಿಕೊಂಡಿದ್ದಾರೆ.
ದಿನನಿತ್ಯದ ಊಟದ ವ್ಯವಸ್ಥೆ ಇಲ್ಲದೇ ಇದ್ದರೂ ಕೂಡ ಕೆಲವೊಂದು ವಿಶೇಷ ದಿನಗಳಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಮಂಗಳೂರಿನ ಕೆಲವೊಂದು ಕ್ರೈಸ್ತ ಧರ್ಮದ ಪುಣ್ಯಕ್ಷೇತ್ರಗಳಾದ ಮುಡಿಪು ಸಂತ ಜೋಸೆಫ್( ಶುಕ್ರವಾರ), ಪಕ್ಷಿಕೆರೆ ಸಂತ ಜೂದ್(ಮಂಗಳವಾರ) ಬೋಂದೆಲ್ ಸಂತ ಲಾರೆನ್ಸ್ (ಮಂಗಳವಾರ), ಅಲಂಗಾರು ಬಾಲಯೇಸು ಮಂದಿರ( ಶುಕ್ರವಾರ), ಬಿಕರ್ನಕಟ್ಟೆ ಬಾಲಯೇಸು ಮಂದಿರ (ಗುರುವಾರ) ದೇವರ ಪ್ರಸಾದ(ಅನ್ನದಾನ)ದ ವ್ಯವಸ್ಥೆ ಇರುತ್ತದೆ.
ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರ ಸ್ನೇಹಿ
ಕಾವೂರಿನಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷ ಎಂದರೆ ಅಲ್ಲಿ ಶಿಕ್ಷಣ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಬದಲಾಗಿ ಇಡೀ ಬಿಜಿಎಸ್ ಶಿಕ್ಷಣ ಸಂಸ್ಥೆ ಪರಿಸರದ ಕುರಿತು ಕಾಳಜಿಯನ್ನು ಇಟ್ಟುಕೊಂಡಿದೆ. ಮರ, ಗಿಡಗಳ ಜತೆಗೆ ಪರಿಸರ ಪೂರಕ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪೂರಕವಾಗಿದೆ.
ವಿಶೇಷವಾಗಿ ಬಿಜಿಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಹೇಳುವಂತೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗಿಡ- ಮರ ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಂಗಳದಿಂದ ಪ್ರಾರಂಭವಾಗಬೇಕು. ಪ್ರಕೃತಿಯು ದೇವರಿಗೆ ಸಮಾನ, ಇದನ್ನು ಕಾಪಾಡಿದರೆ ದೇವರ ಅನುಗ್ರಹ ಲಭಿಸುತ್ತದೆ. ಹೇಗೆ ಮರ, ನದಿ, ಪ್ರಾಣಿ ಪಕ್ಷಿಗಳು ಪರರಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತವೆಯೋ ಹಾಗೆ ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾರ್ಥವನ್ನು ಬಿಟ್ಟು ಮರಗಿಡಗಳನ್ನು ಬೆಳೆಸಬೇಕು.
ಜಗತ್ತಿನಾದ್ಯಂತ ಪರಿಸರ ಮಲೀನವಾಗುತ್ತಿದೆ. ಇದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ಒಂದೊಂದು ಗಿಡ ನೆಟ್ಟು ಬೆಳಸಬೇಕು ಎನ್ನುವುದು ಅವರ ಮಾತು. ವಿಶೇಷವಾಗಿ ಪರಿಸರದ ದಿನಾಚರಣೆಯ ಅಂಗವಾಗಿ ಈಗಾಗಲೇ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ, ಮಾಹಿತಿ ನೀಡುವ ಕಾರ‍್ಯ ಸಾಗುತ್ತಿದೆ.
ಕರಾವಳಿಯ ಅತೀ ಹೆಚ್ಚು ಚರ್ಚ್ ಗಳ ಹೆಸರು ಸಂತ ಅಂತೋನಿ
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅತೀ ಹೆಚ್ಚು ಚರ್ಚ್ ಗಳಲ್ಲಿ ಸಂತ ಅಂತೋನಿ ಹೆಸರು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಬೆಳ್ತಂಗಡಿ ಯ ನಾರಾವಿ ಹಾಗೂ ಉಜಿರೆಯಲ್ಲಿ ಸಂತ ಅಂತೋನಿ ಚರ್ಚ್ ಗಳಿದ್ದಾರೆ.
ಉಳಿದಂತೆ ಅಲ್ಲಿಪಾದೆ, ಬನ್ನೂರು, ಕೂಳೂರು, ಪೆರ್ಮಾಯಿ ಯಲ್ಲಿ ಸಂತ ಅಂತೋನಿ ಅವರಿಗೆ ಸಮರ್ಪಿತ ವಾದ ಚರ್ಚ್ ಗಳಿವೆ. ಮಂಗಳೂರಿನಲ್ಲ ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಹಾಗೂ ಮಿಲಾಗ್ರಿಸ್ ನಲ್ಲಿ ಪುಣ್ಯಕ್ಷೇತ್ರ ವಿದೆ.
ಕೂಳೂರಿನ ಚರ್ಚ್ ಅತೀ ಪುರಾತನ ಚರ್ಚ್ ಎಂದರೆ 1888 ರಲ್ಲಿ ಸ್ಥಾಪನೆಯಾಯಿತು. ಈ ಬಳಿಕ ಪೆರ್ಮಾಯಿ 2003 ರಲ್ಲಿ ಆರಂಭ ವಾಯಿತು. ಮೇ 31 ರಿಂದ ಈ ಎಲ್ಲ ಚರ್ಚ್ ಗಳಲ್ಲಿ ವಿಶೇಷ ನೊವೆನಾ ಹಾಗೂ ಜೂನ್ 13 ರಂದು ಸಂತ ಅಂತೋನಿ ಅವರ ಹಬ್ಬ ನಡೆಯಲಿದೆ. ಅಂದಹಾಗೆ ಕರಾವಳಿಯಲ್ಲಿ ಈ ಸಂತ ನನ್ನು ಬಿಟ್ಟರೆ ಸಂತ ಲಾರೆನ್ಸ್ ಚರ್ಚ್ ಗಳು ಕೂಡ ಇದೆ.
ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ
ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.
ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.
ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.