Tagged: citykudla

ಸಿಟಿಯಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಿದ ಹುಡುಗ

ನಗರ ಬೆಳೆಯುತ್ತಾ ಸಾಗುತ್ತಿದ್ದಂತೆ ಪಕ್ಷಿ,ಪ್ರಾಣಿಗಳ ಸಂತತಿ ಇಳಿಮುಖವಾಗುತ್ತಿರುವ ದೃಶ್ಯಗಳು ದಿನನಿತ್ಯನೂ ನಗರವಾಸಿಗಳು ಗಮನಕ್ಕೆ ಬಂದಿರಬಹುದು. ಬೆಳಗ್ಗೆ ಎದ್ದಾಗ ಹಕ್ಕಿಗಳ ಕಲರವ ಕೂಡ ಕಡಿಮೆಯಾಗುತ್ತಿದೆ. ಇಂತಹ ಹತ್ತಾರು ದೃಶ್ಯಗಳನ್ನು ನೋಡಿದ ಕುಡ್ಲ ಸಿಟಿಯ ಹುಡುಗ ತೌಸಿಫ್ ಅಹಮ್ಮದ್ ಅವರು ಪೈಪ್‌ಗಳ ಮೂಲಕ ಗೂಡು ಕಟ್ಟಿ ಪಕ್ಷಿಗಳ ಸಂತತಿ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರೀಯ ಸದಸ್ಯ ತೌಸಿಫ್ ಅಹಮ್ಮದ್ ಕುಡ್ಲ ಸಿಟಿಯ ಪಕ್ಷಿಗಳ ಮೇಲೆ ವಿಶೇಷವಾದ ಕಾಳಜಿ ಬೆಳೆಸಿಕೊಂಡಿದ್ದಾರೆ. ತೌಸಿಫ್ ಹೇಳುವಂತೆ ನಗರ ಪ್ರದೇಶದಲ್ಲಿ ಪಕ್ಷಿಗಳಿಗೆ ನೆಮ್ಮದಿಯಿಂದ ಗೂಡು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.

ನಗರದ ಕಾಂಕ್ರೀಟ್ ಬದುಕಿನಿಂದಾಗಿ ಹಕ್ಕಿಗಳು ಎಸಿ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಬಾಕ್ಸ್‌ಗಳ ನಡುವೆ ಗೂಡು ಕಟ್ಟಿಕೊಂಡು ಬಿಡುತ್ತದೆ. ಈ ಕಾರಣದಿಂದ ಹಕ್ಕಿಗಳು ಸಾಯುವ ಘಟನೆಗಳು ಜಾಸ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ ಶಾಕ್‌ನಿಂದಾಗಿ ತಾಯಿ ಹಕ್ಕಿ ಮೃತಪಟ್ಟಿದೆ ಮರಿಗಳು ತಾವು ದಯವಿಟ್ಟು ಕೊಂಡೋಗಿ ಬದುಕು ಕೊಡಿ ಎನ್ನುವ ಮನವಿಗಳೇ ಜಾಸ್ತಿಯಾಗಿ ಬರುತ್ತಿದೆಯಂತೆ.

ಇದಕ್ಕಾಗಿ 20 ಅಡಿ ಉದ್ದದ ಪಿವಿಸಿ ಪೈಪ್‌ವನ್ನು 2.5ಅಡಿ ಉದ್ದಕ್ಕೆ ಕತ್ತರಿಸಿಕೊಂಡು ಎರಡು ಬದಿಗೂ ಕ್ಯಾಪ್ ಹಾಕಿಕೊಂಡು ಮುಚ್ಚಲಾಗುತ್ತದೆ. ಈ ಬಳಿಕ 2.5 ಅಡಿ ಉದ್ದದ ಪೈಪ್‌ಗೆ ಮೂರು ರಂಧ್ರಗಳನ್ನು ಕೊರೆದು ನಂತರ ಅದನ್ನು ಮನೆಯ ಯಾವುದೇ ಭಾಗದಲ್ಲಿ ಇಟ್ಟರೆ ಸಾಕು. ಹಕ್ಕಿಗಳು ಬಂದು ಅಲ್ಲಿ ಗೂಡು ಕಟ್ಟುತ್ತದೆ ಎನ್ನುತ್ತಾರೆ ತೌಸಿಫ್.

ಪ್ಲಾಸ್ಟಿಕ್ ಬಿಟ್ಟುಬಿಡಿ ಬಾಳೆಲೆ ಜೀವಕೊಡಿ

ಪ್ಲಾಸ್ಟಿಕ್ ಬಿಟ್ಟು ಬಾಳೆಲೆಗೆ ಅವಕಾಶ ಕೊಡಿ ಎನ್ನುವ ಕುಡ್ಲ ಸಿಟಿಯ ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಖ್ಯವಾಗಿ ಮಂಗಳೂರಿನ ರವಿಚಂದ್ರ ಎನ್ನುವ ವರು ಬಾಳೆಲೆ ಹಾಗೂ ಅಡಕೆ ಹಾಳೆಯ ಮೂಲಕ ಏನೆಲ್ಲ ಪರಿಸರಪೂರಕವಾದ ವಸ್ತುಗಳನ್ನುಪ್ಲಾಸ್ಟಿಕ್ ಗೆ ಪರ್ಯಾಯ ವಾಗಿ ಬಳಸಬಹುದು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದರ ಜತೆಯಲ್ಲಿ ಹಳೆಯ ರದ್ದಿ ಪೇಪರ್ ನಿಂದಲೂ ಬ್ಯಾಗ್ ತಯಾರಿಸುವ ಕುರಿತು ಮಂಗಳೂರಿನ ಸಂತೋಷ್ ಪೂಜಾರಿ ಅವರು ಪ್ರಯೋಗ ಮಾಡಿ ಕಳುಹಿಸಿದ್ದಾರೆ. ಮಂಗಳೂರು ಮಾತ್ರವಲ್ಲ ಇಡೀ ದೇಶದ ಜನತೆ ಪ್ಲಾಸ್ಟಿಕ್ ನಿಂದ ದೂರ ಓಡುತ್ತಿದ್ದಾರೆ. ಪರ್ಯಾಯ ವಸ್ತುಗಳ ಕಡೆಗೆ ಮನಸ್ಸು ಮಾಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಮುಂದಿನ ನಮ್ಮ ಮಕ್ಕಳ ಬದುಕಿಗೆ ಒಳ್ಳೆಯ ಪರಿಸರ ಬಿಟ್ಟು ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕುಡ್ಲಸಿಟಿಯ ಅಭಿಯಾನಕ್ಕೆ ಕೈಜೋಡಿಸಿ..

ಪಂಪ್‌ವೆಲ್ ಸರ್ಕಲ್ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕು ?

ಪಂಪ್‌ವೆಲ್ ಸರ್ಕಲ್ ಮಂಗಳೂರಿನ ಹೆಬ್ಬಾಗಿಲು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇಡೀ ಕುಡ್ಲದ ಇತಿಹಾಸದಲ್ಲಿ ಇಂತಹ ಒಂದು ಸರ್ಕಲ್ ನಿರ್ಮಾಣ ಮಾಡುವ ಕನಸ್ಸು ಇನ್ನು ಕೂಡ ಪೂರ್ಣವಾಗಿಲ್ಲ.
ಜನಪ್ರತಿನಿಧಿಗಳನ್ನು ನೇರವಾಗಿಲ್ಲ ಕೇಳುವ ಧೈರ್ಯ ಇಲ್ಲದ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಪಂಪ್‌ವೆಲ್ ಸರ್ಕಲ್ ಕನಸ್ಸು ಇನ್ನು ಪೂರ್ಣವಾಗಲು ಅದೆಷ್ಟೋ ವರ್ಷಗಳೇ ಬೇಕು ಮಾರಾಯ್ರೆ. ಎಂಜಿನಿಯರ್ ಡೇ ಆಚರಣೆ ಮಾಡುವಾಗ ಪಂಪ್‌ವೆಲ್ ಸರ್ಕಲ್ ಮಾಡಲು ಶ್ರಮ ಪಟ್ಟ ಎಂಜಿನಿಯರ್‌ಗಳನ್ನು ಬಿಟ್ಟು ಉಳಿದವರಿಗೆ ಹ್ಯಾಪಿ ಎಂಜಿನಿಯರ‍್ಸ್ ಡೇ.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು !

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದು ಹಳೇ ಕಾಲದ ಪದ್ಧತಿ. ಆಯುರ್ವೇದದಲ್ಲೂ ಇದರ ಉಲ್ಲೇಖವಿದೆ. ಈ ಹಳೆ ಕಾಲದ ಪದ್ಧತಿಯಿಂದಲೇ ಬೆರಗಾಗುವಂಥ ಆರೋಗ್ಯಕರ ಪರಿಣಾಮಗಳಿವೆ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ 8 ಗಂಟೆಗಳ ಬಳಿಕ ಕುಡಿಯಬೇಕು. ಇದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ.ತಾಮ್ರ ಜೀರ್ಣಕ್ರಿಯೆಗೆ ಸಹಕಾರಿ. ತಾಮ್ರದ ಪಾತ್ರೆಯಲ್ಲಿನ ನೀರು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
ತಾಮ್ರ ಕ್ಯಾನ್ಸರ್ ಹಾಗೂ ಅಧಿಕ ರಕ್ತದೊತ್ತಡ ತಡೆಗೂ ಉತ್ತಮ.ತಾಮ್ರ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.ತಾಮ್ರದ ಪಾತ್ರೆಯಲ್ಲಿನ ನೀರನ್ನು ದಿನವೂ ಕುಡಿದಲ್ಲಿ ಇದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ.
ತಾಮ್ರ ರಕ್ತಹೀನತೆಯನ್ನೂ ತಡೆಯುತ್ತದೆ.ದೇಹದಲ್ಲಿನ ಕೊಬ್ಬನ್ನು ಕರಗಿಸಲೂ ತಾಮ್ರ ಸಹಕಾರಿ. ಹೀಗಾಗಿ ತಾಮ್ರ ಉಪಯೋಗಿಸುವಿಕೆಯಿಂದ ತೂಕವೂ ಇಳಿಯುತ್ತದೆ. ತಾಮ್ರದಲ್ಲಿ ನಂಜುನಿರೋಧಕ ಗುಣಗಳಿದ್ದು ಇದು ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿ.

ಚಂದ್ರನ ಅಂಗಳದ ಸಾಹಸದಲ್ಲಿ ಕಾರ್ಲದ ವಿಜ್ಞಾನಿ

ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಡರ್ ನ ಸಾಹಸದಲ್ಲಿ‌ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ಕಾರ್ಲದ ಮೂಲದ ವಿಜ್ಞಾನಿ ವೈ.ದೇವದಾಸ್ ಶೆಣೈ ಕೂಡ ಒಬ್ಬರು. ಅವರು ಸರಕಾರಿ ಶಾಲೆಯಲ್ಲಿ ಓದಿದವರು. ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡು ಈಗ ಇಸ್ರೋದ ವಿಜ್ಞಾನಿಗಳ ಸಾಲಿನಲ್ಲಿ ನಿಂತಿರೋದು ಹೆಮ್ಮೆಯ ವಿಚಾರ.