Tagged: Kudla

ಕುಡ್ಲ ದಕ್ಕೆಯಲ್ಲಿ ಓಮನ್,ಮದ್ರಾಸ್ ದರ ಗಲಾಟೆ !

ಕುಡ್ಲದ ಮೀನುಗಾರಿಕೆ ದಕ್ಕೆಯಲ್ಲಿ ವಿಶಿಷ್ಟ ರೀತಿಯ ದರ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇದರ ಪರಿಣಾಮ ಬೂತಾಯಿ ಮೀನು ಕೆಜಿ ಗೆ 80 ರ ಅಸುಪಾಸಿಗೆ ಗ್ರಾಹಕರಿಗೆ ಸಿಗುವಂತಹ ಭಾಗ್ಯ ಭಾನುವಾರ ಲಭ್ಯವಾಗಿದೆ.

ಕಾರಣ ಇಷ್ಟೇ ಮಂಗಳೂರಿನಲ್ಲಿ ಮೀನುಗಾರಿಕೆಗೆ ರಜೆ ಯಾವ ಬೋಟುಗಳು ಮೀನುಗಾರಿಕೆಗೆ ಇಳಿಯುತ್ತಿಲ್ಲ ಓಮನ್ ಹಾಗೂ‌ ಮದ್ರಾಸ್ ಕಡೆಯಿಂದ ಬೂತಾಯಿ ಮೀನು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಬೂತಾಯಿ ದರ ಮೀನುಗಾರಿಕೆ ರಜೆ ಅವಧಿಯಲ್ಲಿ ಮೊದಲ ಬಾರಿಗೆ ರೇಟ್ ಕಡಿಮೆಯಾಗಿದೆ.

ದೇಶದಲ್ಲಿಯೇ ಅಪೂರ್ವ ಕುಡ್ಲದ ಮಳೆ ರಸ್ತೆ

ದೇಶದ ಯಾವುದೇ ನಗರದಲ್ಲೂ ಮಳೆ ಬಂದಾಗ ನೀರು ರಸ್ತೆಯ ಬದಿಯಲ್ಲಿರುವ ಚರಂಡಿ ಮೂಲಕ ಹರಿದು ಹೋಗುತ್ತದೆ. ಆದರೆ ಮಂಗಳೂರಿನಲ್ಲಿ ಮಾತ್ರ ಮಳೆ ನೀರು ರಸ್ತೆಯಲ್ಲೇ ಸಾಗುತ್ತದೆ. ಸ್ಮಾರ್ಟ್ ಸಿಟಿ ಮಂಗಳೂರು ಮಳೆ ರಸ್ತೆ ನೋಡುವುದು ಚೆಂದ ಸಮಸ್ಯೆಗಳು ಮಾತ್ರ ಬಹಳವಿದೆ.

ಕುಡ್ಲದ ಮೊದಲ ಸ್ಟಾರ್ ಹೋಟೆಲ್ ಗೊತ್ತಾ..?

ಕುಡ್ಲದ ಮೊದಲ ಸ್ಟಾರ್ ಹೋಟೆಲ್ ಯಾವುದು ಎಂದು ಹುಡುಕಾಡಿದರೆ ಸಿಗುವ ಮೊದಲ ಹೆಸರು ವುಡ್ ಲ್ಯಾಂಡ್. ಜ್ಯೋತಿ ಯಿಂದ ಇಳಿದು ಕೊಂಚ ಕೆಳಗೆ ಬಂದರೆ ಸಾಕು ವುಡ್ ಲ್ಯಾಂಡ್ ಸಿಗುತ್ತದೆ ಮುಖ್ಯ ವಾಗಿ ಸಿಟಿಯೊಳಗೆ ಇಷ್ಟೊಂದು ಪಾರ್ಕಿಂಗ್ ಗೆ ವ್ಯವಸ್ಥೆ ಇರುವ ಹೋಟೆಲ್ ಯಾವುದು ಇಲ್ಲ. ಇಲ್ಲಿನ ಫುಡ್ ಕುರಿತು ಎರಡು ಮಾತಿಲ್ಲ ದೀ ಬೆಸ್ಟ್ ಎನ್ನುತ್ತಾರೆ ಕುಡ್ಲದ ಜನ. ಹೋಟೆಲ್ ಒಳಗೆ ಹೋಗದೇ ನೀವು ಪಾರ್ಕಿಂಗ್ ನಲ್ಲಿಯೇ ಕೂತು ತಿನ್ನುವ ಕಲ್ಚರ್ ಬೆಳೆಸಿದ ಕುಡ್ಲದ ಮೊದಲ ಹೋಟೆಲ್ ಎನ್ನುವುದು ಗ್ರಾಹಕರ ಅಭಿಪ್ರಾಯ.

ಹಲಸಿನ ಹಣ್ಣಿನಲ್ಲಿ ಸೋಪ್ ರೆಡಿ

ಕಳೆದ ಕೆಲವು ವರ್ಷಗಳಿಂದೀಚೆಗೆ ಹಲಸು ಪ್ರಿಯರು ದೇಶಾದ್ಯಂತ ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದವರಾದ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಹರೀಶ್, ತಾವೇ ಸ್ವತಃ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಪ್ರಯೋಗ ಮಾಡಿಕೊಂಡು ಸೋಪ್ ತಯಾರಿಸಿದ್ದಾರೆ. ಸೋಪ್ ತಯಾರಿಸುವಾಗ ಹಲಸಿನ ಹಣ್ಣು, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆ ಬಳಸಿದ್ದಾರೆ. ಹಲಸಿನ ಬೀಜ ಬಳಸಿಲ್ಲ. ಈ ಸೋಪ್‌ನಲ್ಲಿ ವಿಟಮಿನ್ ಸಿ ಮತ್ತು ಡಿ ಇದ್ದು, ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಅತ್ಯುತ್ತಮ ಮದ್ದು ಎನ್ನುವುದು ಅವರ ಮಾತು.

ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಪ್ಲ್ಯಾನ್ ಇಟ್ಟುಕೊಂಡಿರುವ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ತಾನು ತಯಾರಿಸಿದ ಸೋಪ್‌ಗೆ ‘ಝ್ಯ’ ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ.

ಕುಡ್ಲದಲ್ಲಿ ಆರೋಗ್ಯ ಪೂರ್ಣ ಯೋಗ

ಕುಡ್ಲದಲ್ಲಿ ಯೋಗದ ಆಚರಣೆಯ ಸಂಭ್ರಮವೇ ಬೇರೆ. ಮುಂಜಾನೆಯಲ್ಲಿ ಮಳೆರಾಯನ ದಿಢೀರ್ ಎಂಟ್ರಿಯ ಜತೆಯಲ್ಲಿಯೇ ನಾನಾ ಸಂಘಟನೆಗಳು ಯೋಗದಲ್ಲಿ ಆರೋಗ್ಯವನ್ನು ಹುಡುಕಲು ಪ್ರಯತ್ನ ಪಟ್ಟಿದ್ದು ಈಗಾಗಲೇ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.
ಮಂಗಳೂರಿನ ಲೇಡಿಹಿಲ್ ವೃತ್ತದಿಂದ ಕೆನರಾ ಶಾಲೆಯ ವರೆಗಿನ ಎರಡು ರಸ್ತೆಯಲ್ಲೇ ಸಾವಿರಕ್ಕೂ ಅಧಿಕ ಯೋಗಪಟುಗಳು ಮುಂಜಾನೆ ಹೊತ್ತು ಯೋಗದಲ್ಲಿ ನಿರತರಾಗುವ ಮೂಲಕ ಕುಡ್ಲದ ಜನರಿಗೆ ಯೋಗದ ಬಗ್ಗೆ ಮಾಹಿತಿ, ಜಾಗೃತಿಯನ್ನು ಹುಟ್ಟುಹಾಕುವ ಕಾರ‍್ಯವನ್ನು ಮಾಡಿದರು.