ಬಿಜೆಪಿ ನಾಯಕಿ ದಿ.ಸುಷ್ಮಾ ಸ್ವರಾಜ್ ಸಾಕಷ್ಟು ಬಾರಿ ಮಂಗಳೂರು ಸೇರಿದಂತೆ ಕರಾವಳಿಯ ಉಡುಪಿಗೂ ಬಂದಿದ್ದಾರೆ. ವಿಶೇಷ ಎಂದರೆ ಪ್ರತಿ ಸಾರಿನೂ ಬರುವಾಗ ಅವರಿಗೆ ಕರಾವಳಿಯ ಅವರ ಅಭಿಮಾನಿಗಳು ಪ್ರೀತಿಯಿಂದ ಮಲ್ಲಿಗೆ ನೀಡಲಾಗುತ್ತಿತ್ತು. ಅವರು ಅಷ್ಟೇ ಪ್ರೀತಿಯಿಂದ ಸ್ವೀಕಾರ ಮಾಡಿ ತಲೆಗೆ ಇಟ್ಟುಬಿಡುತ್ತಿದ್ದರು. ಮಲ್ಲಿಗೆ ಸೂಸುವ ಪರಿಮಳದಿಂದ ಮತ್ತಷ್ಟು ಹುರುಪು ಅವರಲ್ಲಿ ಬಂದು ಬಿಡುತ್ತಿತ್ತು ಎನ್ನುವ ಮಾತನ್ನು ಅವರ ಅಭಿಮಾನಿ ಗಳು ಹೇಳುತ್ತಾರೆ.
Kudla City
ಕುಡ್ಲದ ಮಳೆಗೆ ಮತ್ತೆ ಶಾಲೆ,ಕಾಲೇಜಿಗೆ ರಜೆ
ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಆ.8ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಾಲೆ,ಕಾಲೇಜಿಗೆ ಮತ್ತೆ ಮಳೆಯ ರಜೆ ಆರಂಭ
ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಆ.7ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಗಳೂರು,ಪುಣೆ, ಕಾಸರಗೋಡು: ಕೆಎಸ್ಸಾರ್ಟಿಸಿ ಅಂಬಾರಿ
ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಮಂಗಳೂರು-ಪುಣೆ ನಡುವೆ ಸೇವೆ ಆರಂಭಿಸಲಿರುವ ‘ಅಂಬಾರಿ ಡ್ರೀಮ್ ಕ್ಲಾಸ್ ಮಲ್ಲಿ ಆಕ್ಸ್‌ಲ್ ಎಸಿ ಸ್ಲೀಪರ್’ ಹಾಗೂ ಮಂಗಳೂರು- ಕಾಸರಗೋಡು ನಡುವೆ ನೂತನ ವೋಲ್ವೊ ಬಸ್‌ಗೆ ಚಾಲನೆ ಸಿಕ್ಕಿದೆ.
ಮಂಗಳೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ 14.2ಮೀಟರ್ ಉದ್ದದ ವೋಲ್ವೊ ಸ್ಲೀಪರ್ ಗಾಡಿ ಪುಣೆಗೆ ಪ್ರಯಾಣ ಬೆಳೆಸಲಿದೆ. ಮಂಗಳೂರಿನಿಂದ ಪುಣೆಗೆ ತೆರಳುವ ಬಸ್ ಉಡುಪಿ, ಭಟ್ಕಳ, ಹೊನ್ನಾವರ, ಅಂಕೋಲ ಮಾರ್ಗವಾಗಿ ಸಂಚರಿಸುತ್ತದೆ. ಪ್ರತೀ ಒಬ್ಬ ಪ್ರಯಾಣಿಕರಿಗೆ 1350 ರೂ. ಪ್ರಯಾಣದರ ನಿಗದಿಪಡಿಸಲಾಗಿದೆ. ಪ್ರತೀ ದಿನ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.45 ಕ್ಕೆ ಪುಣೆ ತಲುಪಲಿದೆ. ಪುಣೆಯಿಂದ ಸಂಜೆ 6.30 ಗೆ ಹೊರಡುವ ಬಸ್ಸು ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ .
ಅಂಬಾರಿ ವೈಶಿಷ್ಟ್ಯ: ಅಂಬಾರಿ ಡ್ರೀಮ್ ಮಲ್ಟಿ ಆಕ್ಸ್‌ಲ್ ಎಸಿ ಸ್ಲೀಪರ್ ಬಸ್ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಆರಾಮದಾಯಕ ಪ್ರಯಾಣ, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್ಸ್, ಆಕರ್ಷಕ ಹಾಗೂ ಮೋಹಕ ಒಳಾಂಗಣ ವಿನ್ಯಾಸ, ವಿಸ್ತಾರವಾದ ಸ್ಥಳಾವಕಾಶ, ಪ್ರತ್ಯೇಕ ಮೊಬಲ್ ಚಾರ್ಜಿಂಗ್ ಪಾಯಿಂಟ್ಸ್, ನೀರಿನ ಬಾಟಲಿಗಳಿಗಾಗಿ ಸ್ಥಳ, ವಿಶಾಲ ಕಿಟಕಿ, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ನಿರ್ಗಮನ ಬಾಗಿಲುಗಳು, ಅಗ್ನಿ ಅನಾಹುತ ತಪ್ಪಿಸಲು ಫಯರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಮ್‌ಗಳ ಜೋಡಣೆ, ಶಕ್ತಿಯುತ ಮತ್ತು ಪರಿಣಾಮಕಾರಿ ಹವಾನಿಯಂತ್ರಕಗಳನ್ನು ಹೊಂದಿದೆ.
ವೇಳಾಪಟ್ಟಿ: ಮಂಗಳೂರಿನಿಂದ ಕಾಸರಗೋಡಿಗೆ ಮೊದಲ ಹಂತದಲ್ಲಿ ಎರಡು ಎಸಿ ವೋಲ್ವೊ ಬಸ್ ಕಾರ್ಯಾಚರಣೆ ಮಾಡಲಿದೆ. ಬೆಳಗ್ಗೆ 7 ಗಂಟೆ, 7.30, 7.45, 8, 10, 10.30, 10.45, 11.15, 2, 2.30, 2.45, 3.15, 6, 6.30ಕ್ಕೆ ಮತ್ತು ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9, 9.15, 9.45, 12, 12.30, 1, 1.30, 4.15, 4.45, 5.15 ಮತ್ತು 5.30ಕ್ಕೆ ಬಸ್ ಸಂಚರಿಸಲಿದೆ. ಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14ಟ್ರಿಪ್ ಎಸಿ ವೋಲ್ವೊ ಬಸ್ ಸಂಚರಿಸಲಿದ್ದು, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿದೆ. ದಿನದ ಪಾಸಿಗೆ 130 ರೂ. ದರ ನಿಗದಿಪಡಿಸಲಾಗಿದ್ದು, ದಿನದಲ್ಲಿ ಎರಡು ಬಾರಿ ಪ್ರಯಾಣ ಮಾಡಬಹುದಾಗಿದೆ.
ಕುಡುಪು, ಕುಕ್ಕೆ, ಮಂಜೇಶ್ವರ ದೇವಳದಲ್ಲಿ ನಾಗರ ಪಂಚಮಿಗೆ ಯಾಕೆ ವಿಶೇಷ?
ಮಂಗಳೂರಿನ ಕುಡುಪು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಜತೆಯಲ್ಲಿ ಮಂಜೇಶ್ವರದ ಅನಂತೇಶ್ವರ ದೇವಸ್ಥಾನ ಮೂರು ದೇವಳದಲ್ಲಿ ನಾಗರ ಪಂಚಮಿ ಎಂದಾಕ್ಷಣ ಬಹಳಷ್ಟು ವಿಶೇಷತೆಗಳಿರುತ್ತದೆ. ಈ ಮೂರು ದೇವಳಗಳು ಕೂಡ ನಾಗನಿಗೆ ವಿಶಿಷ್ಟವಾದ ಸ್ಥಾನಮಾನವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಪ್ರಮುಖ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಳ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕರಾವಳಿಯ ಪ್ರಮುಖ ನಾಗ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳೆಲ್ಲವನ್ನೂ ಮಂಜೇಶ್ವರ ಶ್ರಿಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿಷ್ಣು, ಈಶ್ವರ ಹಾಗೂ ನಾಗ ದೇವರ ಸಾನಿಧ್ಯವಿದೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಧಾನ ಆಚರಣೆಗಳು.