Tagged: fish

ಕುಡ್ಲದಲ್ಲಿ ಪರಿಚಯವಾದ ಚಾಂದಿನಿ ಮೀನು !

ಮಳೆಗಾಲದಲ್ಲಿ ಮೀನು ಮಾರುಕಟ್ಟೆಯಲ್ಲಿ ಸಮುದ್ರದ ತಾಜಾ ಮೀನು ವಿರಳವಾಗುತ್ತಿದ್ದಂತೆ ಹೊಳೆ ಮೀನುಗಳು ಬರಲಾರಂಭಿಸುತ್ತವೆ. ಈಗ ಉತ್ತರ ಕನ್ನಡ ಕಡೆಯ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಅಪರೂಪದ ಚಾಂದಿನಿ ಮೀನು ಮಾರುಕಟ್ಟೆಗೆ ಬರಲಾರಂಭವಾಗಿದೆ.
ಇದು ನೋಡಲು ಸಮುದ್ರದ ಕೆಂಬೇರಿ ಮೀನಿನ ಮಾದರಿಯದ್ದು. ರುಚಿಯಲ್ಲೂ ಅದೇ ಹೋಲಿಕೆ. ಹಾಗಾಗಿ ತಾಜಾ ಚಾಂದಿನಿ ಮೀನನ್ನು ಗ್ರಾಹಕರು ಇಷ್ಟಪಡುವಂತಾಗಿದೆ. ಹೊಟೇಲುಗಳಲ್ಲಿಯೂ ಈ ಮೀನು ಬೇಡಿಕೆ ಗಳಿಸಿದೆ.
ಕೆಜಿಯೊಂದಕ್ಕೆ 300 ರೂ. ಬೆಲೆ ಇದೆ. ಸುಮಾರು 3 ಕೆಜಿಯಷ್ಟು ತೂಕದ ಮೀನು ಕೂಡ ಮೀನು ಮಾರಾಟ ಮಹಿಳೆಯ ಬಳಿ ಕಾಣಸಿಕ್ಕಿದೆ. ಸಿಹಿ ನೀರಿನ ಬಲು ಅಪರೂಪದ ಈ ಮೀನನ್ನು ಒಳನಾಡಿನ ಕೆಲವೆಡೆ ಕೃಷಿ ಮಾಡುತ್ತಾರೆ. ವ್ಯಾಪಾರಿಗಳು ತರಿಸಿ ವ್ಯಾಪಾರ ಮಾಡುತ್ತಿದ್ದಾರೆ. ಒಮ್ಮೆ ಖರೀದಿಸಿದ ಮಂದಿ ಮತ್ತೆ ಕೇಳುತ್ತಿದ್ದಾರೆ ಎನ್ನುವುದು ಫಿಶ್ ಮಾರ್ಕೆಟ್‌ನವರ ಮಾತು.

ಒಣಮೀನು ಎಂದರೆ ಕುಡ್ಲದ ಬ್ರ್ಯಾಂಡ್

ಒಣಮೀನು ಕುಡ್ಲದ ಭಾಷೆಯಲ್ಲಿ ಹೇಳುವುದಾದರೆ ನುಂಗೆಲ್ ಮೀನ್. ಕುಡ್ಲ ಅರ್ಥಾತ್ ಕರಾವಳಿಯ ಬ್ರ್ಯಾಂಡ್ ಪಟ್ಟಿಯಲ್ಲಿ ಒಂದಾಗಿದೆ. ಕಾರಣ ಮಂಗಳೂರಿನ ಬೆಂಗ್ರೆ, ಹೊಯಿಗೆ ಬಜಾರ್, ಬೊಂಬು ಬಜಾರ್ ಎಲ್ಲವೂ ನುಂಗೇಲ್ ಮೀನಿಗೆ ಫೇಮಸ್ ಸ್ಥಳಗಳು.

ಗುಜರಾತ್ ಹಾಗೂ ಉಡುಪಿಯ ಮಲ್ಪೆಯಿಂದಲೂ ಒಣಮೀನು ಮಂಗಳೂರಿನ ಬೊಂಬು ಬಜಾರ್ ನ ಗೋದಾಮುಗಳಲ್ಲಿ ತುಂಬಿಸಲಾಗುತ್ತದೆ. ಆದರೆ ಎಲ್ಲಿಂದಲ್ಲೂ ಒಣಮೀನು ತಂದರೂ‌ಕೂಡ ಕರಾವಳಿಯ ಒಣಮೀನಿನ ಮುಂದೆ ಯಾವುದು ಇಲ್ಲ ಕಾರಣ ಇಲ್ಲಿನ ಬಿಸಿಲು ಜತೆಗೆ‌ ಕಡಲಿನ ನೀರು ಸೇರುವ ಉಪ್ಪು ಎಲ್ಲವೂ ಒಣಮೀನಿಗೆ ಉತ್ತಮ ವ್ಯಾಲು ತಂದು ಕೊಡುತ್ತದೆ. ಇಲ್ಲಿಂದ ಹೊರರಾಜ್ಯಗಳಿಗೆ ಸೇರಿದಂತೆ ವಿದೇಶಗಳಿಗೂ ಕುಡ್ಲದ ನುಂಗೆಲ್ ಮೀನ್ ರಫ್ತು ಅಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.

ಕುಡ್ಲ ದಕ್ಕೆಯಲ್ಲಿ ಓಮನ್,ಮದ್ರಾಸ್ ದರ ಗಲಾಟೆ !

ಕುಡ್ಲದ ಮೀನುಗಾರಿಕೆ ದಕ್ಕೆಯಲ್ಲಿ ವಿಶಿಷ್ಟ ರೀತಿಯ ದರ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇದರ ಪರಿಣಾಮ ಬೂತಾಯಿ ಮೀನು ಕೆಜಿ ಗೆ 80 ರ ಅಸುಪಾಸಿಗೆ ಗ್ರಾಹಕರಿಗೆ ಸಿಗುವಂತಹ ಭಾಗ್ಯ ಭಾನುವಾರ ಲಭ್ಯವಾಗಿದೆ.

ಕಾರಣ ಇಷ್ಟೇ ಮಂಗಳೂರಿನಲ್ಲಿ ಮೀನುಗಾರಿಕೆಗೆ ರಜೆ ಯಾವ ಬೋಟುಗಳು ಮೀನುಗಾರಿಕೆಗೆ ಇಳಿಯುತ್ತಿಲ್ಲ ಓಮನ್ ಹಾಗೂ‌ ಮದ್ರಾಸ್ ಕಡೆಯಿಂದ ಬೂತಾಯಿ ಮೀನು ಸಾಕಷ್ಟು ಪ್ರಮಾಣದಲ್ಲಿ ಬರುವುದರಿಂದ ಬೂತಾಯಿ ದರ ಮೀನುಗಾರಿಕೆ ರಜೆ ಅವಧಿಯಲ್ಲಿ ಮೊದಲ ಬಾರಿಗೆ ರೇಟ್ ಕಡಿಮೆಯಾಗಿದೆ.

ಕುಡ್ಲದಲ್ಲಿ ಸಿಂಗಲ್ ಬಂಗುಡೆಗೆ ಭರ್ತಿ 100

ಒಂದೆಡೆ ಯಾಂತ್ರೀಕೃತ ಮೀನುಗಾರಿಕೆ ನಿಂತಿದೆ. ಇನ್ನೊಂದು ಕಡೆಯಲ್ಲಿ ನಾಡದೋಣಿ ಕೂಡ‌ ಮೀನುಗಾರಿಕೆ ಗೆ ಹೋಗುತ್ತಾ ಇಲ್ಲ ಇದರ ಪರಿಣಾಮ ಕುಡ್ಲದಲ್ಲಿ ಮೀನಿಗೆ ರೇಟ್ ಜಾಸ್ತಿಯಾಗುತ್ತಿದೆ. ಬೂತಾಯಿಗೂ ಬಂಗಾರದ ಬೆಲೆಯಿದೆ.

ಬಂಗುಡೆಯಂತೂ ದೊಡ್ಡ ಗಾತ್ರದ್ದು ಸಿಂಗಲ್ ಗೆ ಭರ್ತಿ 100 ರೂ. ಆಗಿದೆ. ಅದರಲ್ಲೂ ಮುಖ್ಯವಾಗಿ ಶೀತಲೀಕೃತ ಬಂಗುಡೆ ಕೆಜಿಗೆ ಭರ್ತಿ 450 ರೂ ಆಸುಪಾಸಿನಲ್ಲಿದೆ.

ಕರಾವಳಿ ಮೀನುಗಾರರ ಹೆಸರು ಕೆಡಿಸಿದ ಕ್ಲಾತಿ!

ಕೆಲವು ತಿಂಗಳ ಹಿಂದೆ ಕೇರಳ ಸೇರಿದಂತೆ ನೆರೆಯ ರಾಜ್ಯಗಳಿಗೆ ಅಪ್ಪಳಿಸಿದ ಓಖಿ ಚಂಡಮಾರುತದ ಪ್ರಭಾವ ಕಡಿಮೆಯಾದರೂ ಕರಾವಳಿಯ ಮೀನುಗಾರರು ಮಾತ್ರ ಇನ್ನು ಕೂಡ ಅದರ ಪ್ರಭಾವದಿಂದ ಹೊರಬಂದಿಲ್ಲ.

ಈ ಚಂಡಮಾರುತದ ಬಳಿಕ ಕರಾವಳಿ ಗೆ ಹೊಸ ಮೀನೊಂದು ಎಂಟ್ರಿ‌ಪಡೆದುಕೊಂಡಿದೆ ಇದು ಬರೀ ಫಿಶ್ ಮಿಲ್ ಗೆ ಮಾತ್ರ ಸಾಗಬೇಕಾದ ಕ್ಲಾತಿ ಮೀನು ಅತಿಯಾದ ವಾಸನೆ ಇರುವ ಈ ಮೀನು ಕರಾವಳಿಯ ಮೀನುಗಾರರ ಬಲೆಗೆ ದಿನಕ್ಕೆ 60 ಟನ್ ಗಳ ಬೀಳುತ್ತಿದೆ. ಇದರ ಪರಿಣಾಮ ಇತರ ಮೀನು ರುಚಿ ಕಳೆದು ಕೊಳ್ಳುತ್ತಿಕೊಳ್ಳುತ್ತಿದೆ ಎನ್ನುವುಮೀನುಗಾರರ ವಾದ.