Tagged: city

ಸತ್ಯನಾರಾಯಣ ಪೂಜೆ ತುಳುವರ ಪ್ರತಿ ಶುಭಕಾರ್ಯಕ್ಕೂ ಬೇಕು

ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮ ಅಥವಾ ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸತ್ಯನಾರಾಯಣ ದೇವರ ಪೂಜೆ ಯಂತೂ ಕಡ್ಡಾಯವಾಗಿ ಇರುತ್ತದೆ.
ವಿಶೇಷ ಎಂದರೆ ಕರಾವಳಿಯ ಭೂತರಾಧನೆ, ನಾಗಾರಾಧನೆಯಂತೇ ಸತ್ಯನಾರಾಯಣ ಪೂಜೆ ಕೂಡ ವಿಶಿಷ್ಟ ಪೂಜೆ,ಆರಾಧನೆಯಾಗಿ ಗಮನ ಸೆಳೆಯುತ್ತದೆ. ಪೂಜೆಯ ಸಮಯದಲ್ಲಿ‌ ಮಾಡುವ ಪ್ರಸಾದವಂತೂ ಎಲ್ಲರಿಗೂ ಬಹಳ‌ ಪ್ರಿಯ.

ವಿಶ್ವದಲ್ಲಿಯೇ ಕುಡ್ಲ ಸೇಫ್ ಸಿಟಿ

ಅಮೆರಿಕದ ಚಿಕಾಗೊ ಮೂಲದ ’ಟ್ರಿಬ್ಯೂನ್’ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೈಲಿ ಮೇಲ್’ ಎಂಬ ಪ್ರವಾಸ ಹಾಗೂ ಆಹಾರ ಕುರಿತ ವೆಬ್‌ಸೈಟ್ 2018ರ ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದಲ್ಲಿ ಮಂಗಳೂರು 31ನೇ ಸ್ಥಾನ ಪಡೆದಿದೆ. ವೆಬ್‌ಸೈಟ್ ಪ್ರಕಾರ ಸುರಕ್ಷತೆಯ ವಿಷಯದಲ್ಲಿ ಕಡಲ ನಗರಿ ಮಂಗಳೂರು ಎಂದಿಗೂ ಸೇಫ್ ಸಿಟಿ ಎನ್ನುವ ಖ್ಯಾತಿ ಪಡೆದುಕೊಂಡಿದೆ. ವಿಶೇಷವಾಗಿ ವಿಶ್ವದ 50 ಪಟ್ಟಿಯಲ್ಲಿ ಮಂಗಳೂರು ಬಂದಿರೋದು ಇಲ್ಲಿನ ಮಂದಿಗೆ ಹೆಮ್ಮೆಯ ವಿಚಾರ ಎನ್ನಬಹುದು.

ಕುಡ್ಲದ ಹುಡುಗಿ ಪ್ರಿಯಾರ ಮುಡಿಗೆ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟ

ಆಸೀಸ್ ನೆಲದಲ್ಲಿ ಕುಡ್ಲದ ಹುಡುಗಿಯೊಬ್ಬರು ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಗೆದ್ದುಕೊಳ್ಳುವುದೇ ಹೆಮ್ಮೆಯ ವಿಚಾರ. ಆಸ್ಟ್ರೇಲಿಯಾದ ವಿಕ್ಟೋರಿಯಾ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಕಾರ್ಕಳ ಬೇಸಿಕಲಿ ಬೆಳ್ಮಣ್ಣುವಿನ ಪ್ರಿಯಾ ಅವರು ಪ್ರಶಸ್ತಿ ಗೆದ್ದು ಬಂದಿದ್ದಾರೆ. ಅವರು ಹುಟ್ಟಿದ್ದು ಬೆಳ್ಮಣ್ಣು ಪ್ರದೇಶ ಓದು, ಬೆಳವಣಿಗೆ ಎಲ್ಲವೂ ಮಸ್ಕತ್, ಮೆಲ್ಬೋರ್ನ್‌ನಲ್ಲಿ ನಡೆದಿದೆ. ತಂದೆ, ತಾಯಿ ಇಬ್ಬರು ಕುಡ್ಲದವರು.

ಗೆದ್ದಲು ನಾಶಕ್ಕೆ ದಡ್ಡಾಲ ಮರದ ತೊಗಡೆಯ ಮೆಡಿಸಿನ್

ಕರಾವಳಿಯ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುವ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಗೆದ್ದಲು ನಾಶಕ ದ್ರಾವಣ ತಯಾರಿಸುವ ಪುತ್ತೂರಿನ ವಿದ್ಯಾರ್ಥಿನಿಯರಿಬ್ಬರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ರಜತ ಪದಕ ಗಳಿಸಿದೆ.

ಪುತ್ತೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಇವರಿಬ್ಬರೂ ಅಮೆರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂನ್ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ತಮ್ಮ ಪ್ರಾಜೆಕ್ಟ್ ಮಂಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಯಾವುದೇ ಕೃತಕ ವಸ್ತುವಾಗಲೀ, ರಾಸಾಯನಿಕವಾಗಲೀ ಬಳಸದೆ ಕೇವಲ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಅದರಿಂದ ಈ ಜಲೀಯ ಸಾರ ತಯಾರಿಸಲಾಗಿತ್ತು. ಸಾಮಾನ್ಯವಾಗಿ ಮನೆಯ ಒಳಗೆ, ಹೊರಗೆ ಕಾಣಿಸುವ ಗೆದ್ದಲುಗಳನ್ನು ಈ ಸಾರದ ಮೂಲಕ ಸುಲಭವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯಿಲ್ಲ ಎಂಬುದನ್ನು ಪ್ರಾಜೆಕ್ಟ್ ಮೂಲಕ ತೋರಿಸಿಕೊಡಲಾಗಿತ್ತು.

ಒಣಮೀನು ಎಂದರೆ ಕುಡ್ಲದ ಬ್ರ್ಯಾಂಡ್

ಒಣಮೀನು ಕುಡ್ಲದ ಭಾಷೆಯಲ್ಲಿ ಹೇಳುವುದಾದರೆ ನುಂಗೆಲ್ ಮೀನ್. ಕುಡ್ಲ ಅರ್ಥಾತ್ ಕರಾವಳಿಯ ಬ್ರ್ಯಾಂಡ್ ಪಟ್ಟಿಯಲ್ಲಿ ಒಂದಾಗಿದೆ. ಕಾರಣ ಮಂಗಳೂರಿನ ಬೆಂಗ್ರೆ, ಹೊಯಿಗೆ ಬಜಾರ್, ಬೊಂಬು ಬಜಾರ್ ಎಲ್ಲವೂ ನುಂಗೇಲ್ ಮೀನಿಗೆ ಫೇಮಸ್ ಸ್ಥಳಗಳು.

ಗುಜರಾತ್ ಹಾಗೂ ಉಡುಪಿಯ ಮಲ್ಪೆಯಿಂದಲೂ ಒಣಮೀನು ಮಂಗಳೂರಿನ ಬೊಂಬು ಬಜಾರ್ ನ ಗೋದಾಮುಗಳಲ್ಲಿ ತುಂಬಿಸಲಾಗುತ್ತದೆ. ಆದರೆ ಎಲ್ಲಿಂದಲ್ಲೂ ಒಣಮೀನು ತಂದರೂ‌ಕೂಡ ಕರಾವಳಿಯ ಒಣಮೀನಿನ ಮುಂದೆ ಯಾವುದು ಇಲ್ಲ ಕಾರಣ ಇಲ್ಲಿನ ಬಿಸಿಲು ಜತೆಗೆ‌ ಕಡಲಿನ ನೀರು ಸೇರುವ ಉಪ್ಪು ಎಲ್ಲವೂ ಒಣಮೀನಿಗೆ ಉತ್ತಮ ವ್ಯಾಲು ತಂದು ಕೊಡುತ್ತದೆ. ಇಲ್ಲಿಂದ ಹೊರರಾಜ್ಯಗಳಿಗೆ ಸೇರಿದಂತೆ ವಿದೇಶಗಳಿಗೂ ಕುಡ್ಲದ ನುಂಗೆಲ್ ಮೀನ್ ರಫ್ತು ಅಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ.