Kudla City

ಭೂಮಿ ಉಳಿಸಲು ವಿಶಿಷ್ಟ ಪ್ರತಿಭಟನೆ

ಇಡೀ ವಿಶ್ವವೇ ಗ್ಲೋಬಲ್ ವಾರ್ಮಿಂಗ್ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿದೆ. ಭೂಮಿಯ ಮೇಲೆ ಮನುಷ್ಯ ನ ಉಪಟಳ ಜಾಸ್ತಿಯಾಗುತ್ತಿದೆ. ನೀರು,ವಾಯು, ಪರಿಸರದ ಎಲ್ಲ ಮೂಲ ಗಳು ಹಾಳಾಗುತ್ತಿದೆ. ಈ ವಿಚಾರದಲ್ಲಿ ಮಂಗಳೂರಿನ ಪ್ರಜ್ಣಾವಂತ ನಾಗರಿಕರು ಮಂಗಳೂರು ಮಹಾ ನಗರ ಪಾಲಿಕೆಯ ಮುಂದೆ ನಿಂತು ತಮ್ಮ ಪ್ರತಿಭಟನೆ ಯನ್ನು ವ್ಯಕ್ತಪಡಿಸಿದರು. ವಿಶೇಷ ಎಂದರೆ ಬರೀ ದೊಡ್ಡವರು ಮಾತ್ರವಲ್ಲ ಪುಟಾಣಿ ಮಕ್ಕಳು ಕೂಡ ಅವರಿಗೆ ಜತೆ ನೀಡಿದರು.

ಸಿಟಿಯಲ್ಲಿ ಹಕ್ಕಿಗಳಿಗೆ ಗೂಡು ಕಟ್ಟಿದ ಹುಡುಗ

ನಗರ ಬೆಳೆಯುತ್ತಾ ಸಾಗುತ್ತಿದ್ದಂತೆ ಪಕ್ಷಿ,ಪ್ರಾಣಿಗಳ ಸಂತತಿ ಇಳಿಮುಖವಾಗುತ್ತಿರುವ ದೃಶ್ಯಗಳು ದಿನನಿತ್ಯನೂ ನಗರವಾಸಿಗಳು ಗಮನಕ್ಕೆ ಬಂದಿರಬಹುದು. ಬೆಳಗ್ಗೆ ಎದ್ದಾಗ ಹಕ್ಕಿಗಳ ಕಲರವ ಕೂಡ ಕಡಿಮೆಯಾಗುತ್ತಿದೆ. ಇಂತಹ ಹತ್ತಾರು ದೃಶ್ಯಗಳನ್ನು ನೋಡಿದ ಕುಡ್ಲ ಸಿಟಿಯ ಹುಡುಗ ತೌಸಿಫ್ ಅಹಮ್ಮದ್ ಅವರು ಪೈಪ್‌ಗಳ ಮೂಲಕ ಗೂಡು ಕಟ್ಟಿ ಪಕ್ಷಿಗಳ ಸಂತತಿ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಂಗಳೂರು ಅನಿಮಲ್ ಕೇರ್ ಟ್ರಸ್ಟ್‌ನ ಸಕ್ರೀಯ ಸದಸ್ಯ ತೌಸಿಫ್ ಅಹಮ್ಮದ್ ಕುಡ್ಲ ಸಿಟಿಯ ಪಕ್ಷಿಗಳ ಮೇಲೆ ವಿಶೇಷವಾದ ಕಾಳಜಿ ಬೆಳೆಸಿಕೊಂಡಿದ್ದಾರೆ. ತೌಸಿಫ್ ಹೇಳುವಂತೆ ನಗರ ಪ್ರದೇಶದಲ್ಲಿ ಪಕ್ಷಿಗಳಿಗೆ ನೆಮ್ಮದಿಯಿಂದ ಗೂಡು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.

ನಗರದ ಕಾಂಕ್ರೀಟ್ ಬದುಕಿನಿಂದಾಗಿ ಹಕ್ಕಿಗಳು ಎಸಿ ಬಾಕ್ಸ್ ಅಥವಾ ಎಲೆಕ್ಟ್ರಾನಿಕ್ ಬಾಕ್ಸ್‌ಗಳ ನಡುವೆ ಗೂಡು ಕಟ್ಟಿಕೊಂಡು ಬಿಡುತ್ತದೆ. ಈ ಕಾರಣದಿಂದ ಹಕ್ಕಿಗಳು ಸಾಯುವ ಘಟನೆಗಳು ಜಾಸ್ತಿಯಾಗುತ್ತಿದೆ. ಎಲೆಕ್ಟ್ರಾನಿಕ್ ಶಾಕ್‌ನಿಂದಾಗಿ ತಾಯಿ ಹಕ್ಕಿ ಮೃತಪಟ್ಟಿದೆ ಮರಿಗಳು ತಾವು ದಯವಿಟ್ಟು ಕೊಂಡೋಗಿ ಬದುಕು ಕೊಡಿ ಎನ್ನುವ ಮನವಿಗಳೇ ಜಾಸ್ತಿಯಾಗಿ ಬರುತ್ತಿದೆಯಂತೆ.

ಇದಕ್ಕಾಗಿ 20 ಅಡಿ ಉದ್ದದ ಪಿವಿಸಿ ಪೈಪ್‌ವನ್ನು 2.5ಅಡಿ ಉದ್ದಕ್ಕೆ ಕತ್ತರಿಸಿಕೊಂಡು ಎರಡು ಬದಿಗೂ ಕ್ಯಾಪ್ ಹಾಕಿಕೊಂಡು ಮುಚ್ಚಲಾಗುತ್ತದೆ. ಈ ಬಳಿಕ 2.5 ಅಡಿ ಉದ್ದದ ಪೈಪ್‌ಗೆ ಮೂರು ರಂಧ್ರಗಳನ್ನು ಕೊರೆದು ನಂತರ ಅದನ್ನು ಮನೆಯ ಯಾವುದೇ ಭಾಗದಲ್ಲಿ ಇಟ್ಟರೆ ಸಾಕು. ಹಕ್ಕಿಗಳು ಬಂದು ಅಲ್ಲಿ ಗೂಡು ಕಟ್ಟುತ್ತದೆ ಎನ್ನುತ್ತಾರೆ ತೌಸಿಫ್.

ಪ್ಲಾಸ್ಟಿಕ್ ಬಿಟ್ಟುಬಿಡಿ ಬಾಳೆಲೆ ಜೀವಕೊಡಿ

ಪ್ಲಾಸ್ಟಿಕ್ ಬಿಟ್ಟು ಬಾಳೆಲೆಗೆ ಅವಕಾಶ ಕೊಡಿ ಎನ್ನುವ ಕುಡ್ಲ ಸಿಟಿಯ ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಖ್ಯವಾಗಿ ಮಂಗಳೂರಿನ ರವಿಚಂದ್ರ ಎನ್ನುವ ವರು ಬಾಳೆಲೆ ಹಾಗೂ ಅಡಕೆ ಹಾಳೆಯ ಮೂಲಕ ಏನೆಲ್ಲ ಪರಿಸರಪೂರಕವಾದ ವಸ್ತುಗಳನ್ನುಪ್ಲಾಸ್ಟಿಕ್ ಗೆ ಪರ್ಯಾಯ ವಾಗಿ ಬಳಸಬಹುದು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದರ ಜತೆಯಲ್ಲಿ ಹಳೆಯ ರದ್ದಿ ಪೇಪರ್ ನಿಂದಲೂ ಬ್ಯಾಗ್ ತಯಾರಿಸುವ ಕುರಿತು ಮಂಗಳೂರಿನ ಸಂತೋಷ್ ಪೂಜಾರಿ ಅವರು ಪ್ರಯೋಗ ಮಾಡಿ ಕಳುಹಿಸಿದ್ದಾರೆ. ಮಂಗಳೂರು ಮಾತ್ರವಲ್ಲ ಇಡೀ ದೇಶದ ಜನತೆ ಪ್ಲಾಸ್ಟಿಕ್ ನಿಂದ ದೂರ ಓಡುತ್ತಿದ್ದಾರೆ. ಪರ್ಯಾಯ ವಸ್ತುಗಳ ಕಡೆಗೆ ಮನಸ್ಸು ಮಾಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಮುಂದಿನ ನಮ್ಮ ಮಕ್ಕಳ ಬದುಕಿಗೆ ಒಳ್ಳೆಯ ಪರಿಸರ ಬಿಟ್ಟು ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕುಡ್ಲಸಿಟಿಯ ಅಭಿಯಾನಕ್ಕೆ ಕೈಜೋಡಿಸಿ..

ಕಾಮನ್ ವೆಲ್ತ್ ನಲ್ಲಿ ಕುಡ್ಲದ ಹುಡುಗನಿಗೆ ಎರಡು ಚಿನ್ನ

ಕೆನಡಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಅಂತಾರಾಷ್ಟ್ರೀಯ ಪವರ್ ಲಿಫ್ಟ್​​ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ. ಎರಡು ಚಿನ್ನದ ಪದಕ‌ ಪಡೆದಿದ್ದಾರೆ. ಕ್ಲಾಸಿಕ್ ಮತ್ತು ಎಕ್ವಿಪ್ಡ್ ವಿಭಾಗದಲ್ಲಿ ಭಾರ ಎತ್ತಿ ಚಿನ್ನದ ಪಡೆದಿದ್ದಾರೆ.
ಇವರು ದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿ. ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರ.
Tags : comenwealth, gamesh ,Kudlacity, kudla,Mangalore, citykudla,

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಬಾಳೆಲೆ ಬೆಂಬಲಿಸಿ

ಕುಡ್ಲ ಮಾತ್ರವಲ್ಲ ಮೆಟ್ರೋ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರಿ ನಡೆಯುತ್ತದೆ ಅದನ್ನು ನಿಯಂತ್ರಣ ಮಾಡುವುದೇ ದೊಡ್ಡ ಕಿರಿಕಿರಿ. ನಗರದ ಜನರು ಮಾಲ್ ಸಂಸ್ಕೃತಿಯ ಅಡಿಯಲ್ಲಿ ಇರುವುದರಿಂದ ಮಾಲ್ ಗಳ ಲ್ಲಿ ಪ್ಲಾಸ್ಟಿಕ್ ಬದಲು ಬಾಳೆಲೆ ಬಳಸುವ ವಿಚಾರದಲ್ಲಿ ಗ್ರಾಹಕರೇ ಮಾಲ್ ನ‌ ಮುಖ್ಯಸ್ಥ ರಿಗೆ ಫೀಡ್ ಬ್ಯಾಕ್ ನೀಡುವ ಕೆಲಸ ಮಾಡಬಹುದು. ಇದರಿಂದ ಕೊಂಚ ಮಟ್ಟಿ ನ ಪ್ಲಾಸ್ಟಿಕ್ ನಿಯಂತ್ರಣ ಕ್ಕೆ ಕೊಡುಗೆ ನೀಡಬಹುದು ಜತೆಗೆ ರೈತನಿಗೂ ಆದಾಯ ಮಾಡುವ ಕೆಲಸವಿದು.