ಮಂಗಳೂರಿನ ಹಂಪನಕಟ್ಟೆ ಎನ್ನುವ ಹೆಸರು ಬಹಳಷ್ಟು ಮಂದಿಗೆ ಗೊತ್ತಿರಬಹುದು. ಆದರೆ ಇದರ ಹಿಂದಿರುವ ಇತಿಹಾಸ ಕೂಡ ಬಹಳಷ್ಟು ಸೊಗಸು.
ಅಲ್ಲಿ ಅಪ್ಪಣ್ಣ ಎನ್ನುವ ಪರೋಪರಿ ವ್ಯಕ್ತಿಯೊಬ್ಬರು ಯಾರಾದರೂ ಬಿಸಿಲಿನಲ್ಲಿ ದಣಿದು ಬಂದವರಿಗೆ ಬೀದಿಯಲ್ಲಿ ನಿಂತು ನೀರು ಹಾಗೂ ಬೆಲ್ಲವನ್ನು ನೀಡಿ ಕಳುಹಿಸುತ್ತಿದ್ದರು. ಇದು ಪರಿಪಾಟ ಮತ್ತೆ ಮಂಗಳೂರಿನಲ್ಲಿ ಮುಂದುವರಿದಿದೆ.
ಕದ್ರಿಯಲ್ಲಿರುವ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದಾಗ ಅಲ್ಲಿ ಮೊದಲು ಇದೇ ಮಣ್ಣಿನ ಮಡಕೆಯಲ್ಲಿರುವ ತಂಪು ನೀರು ಹಾಗೂ ಬೆಲ್ಲವನ್ನು ನೀಡಿ ಸ್ವಾಗತಿಸುವ ಪರಿಪಾಟವನ್ನು ಬೆಳೆಸಿಕೊಂಡಿದ್ದಾರೆ.
ತೀರಾ ಇತ್ತೀಚೆಗೆ ಉದ್ಘಾಟನೆಯಾದ ಕದ್ರಿ ರಾಕ್ಸ್ ಆರ್ಟ್ ಗ್ಯಾಲರಿ ಮಾಲೀಕ ಹರ್ಷ ಡಿಸೋಜ ಅವರು ಈ ಹೊಸ ಕಲ್ಪನೆಯನ್ನು ಹುಟ್ಟು ಹಾಕಿ ಗಮನಸೆಳೆಯುವ ಕೆಲಸ ಮಾಡುತ್ತಿದ್ದಾರೆ.
Tagged: mangalorecity
ಬೊಕ್ಕಪಟ್ಣದಲ್ಲಿ ಬಾಟಲ್‌ಗೊಂದು ಆರ್ಟ್ ಕ್ಯಾಂಪ್
ಮನೆ, ಹೋಟೆಲ್, ಬಾರ್, ಅಂಗಡಿ ಮಳಿಗೆ ಗಳಲ್ಲಿ ದ್ರವ್ಯ ಪದಾರ್ಥಗಳನ್ನು ಖರೀದಿಸಿ ಉಪಯೋಗ ಆದ ನಂತರ ಅದೇ ಬಾಟಲ್‌ಗಳನ್ನು ತ್ಯಾಜ್ಯ ಎಂದು ಬೀದಿ, ನದಿ, ಸಮುದ್ರಕ್ಕೆ ಎಸೆದು ಮಾಲಿನ್ಯ ಗೊಳಿಸುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಈ ಬಾಟಲ್ ಗಳು ಅಂತರ್ಜಲ ಮತ್ತು ಜಲಚರ ಜೀವಿಗಳ ನೆಮ್ಮದಿಗೆ ಸಮಸ್ಯೆ ಆಗುತ್ತಿವೆ.
ಮಂಗಳೂರಿನ ಬೊಕ್ಕ ಪಟ್ಣದ ಕಲಾವಿದೆ ಮೇಘ ಮೆಂಡನ್ ಈ ತರದ ತ್ಯಾಜ್ಯ ಬಾಟಲಿಗಳಲ್ಲಿ ಚಿತ್ರ ಬರೆದು ಅದಕ್ಕೆ ವಿದ್ಯುತ್ ಸಂಪರ್ಕ ನೀಡಿ ಅದರ ಮೇಲೆ ಹೂ ಇಟ್ಟು ಅದು ಮನೆಯ ಅಂದ ಹೆಚ್ಚಾಗುವ ರೀತಿಯಲ್ಲಿ ಹೊಸ ಒಂದು ಕಲಾ ಆವಿಷ್ಕಾರ ಮಾಡುತ್ತಾರೆ.
ಸ್ವಚ್ಛ ಭಾರತದ ಒಂದು ಪಾತ್ರವಾಗಿ ಮನೆ, ಮನೆಯ ಬಾಟಲ್ ತ್ಯಾಜ್ಯಗಳು ಮನೆ, ಮನೆಯಲ್ಲೇ ಉಪಯೋಗ ಆದರೆ ಬೀದಿ, ನದಿ, ಸಾಗರಕ್ಕೆ ಸೇರುವ ತ್ಯಾಜ್ಯ ಕಡಿಮೆ ಆಗಿ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ ಎಂಬ ಹಿತ ದೃಷ್ಟಿಯಲ್ಲಿ ಇದೀಗ ಈ ಬಾಟಲ್ ಚಿತ್ರ ಕಲೆಯ ಶಿಬಿರವನ್ನು ಬೊಕ್ಕ ಪಟ್ಣದ ಫಲ್ಗುಣಿ ನದೀ ಕಿನಾರೆಯಲ್ಲಿ ಆರಂಭಿಸಿದ್ದಾರೆ. ಮೇ 5, 12, 19, 20 ರಂದು ಬೆಳಗ್ಗೆಯಿಂದ ಮಧ್ಯಾನ ತನಕ ಈ ಶಿಬಿರ ಜರುಗಲಿದೆ.