ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುವ ವಿಚಾರದಲ್ಲಿ ಸ್ವಾಮಿ ವಿವೇಕಾನಂದ, ಐಸ್ ಕ್ರೀಮ್ ಕೋನ್ ಹಾಗೂ ಶಾಂತಿ ಸಾರುವ ಪಾರಿವಾಳಗಳ ಪುಷ್ಪ ಕಲಾಕೃತಿಗಳು ಗಮನ ಸೆಳೆಯಲಿದೆ.
ಇದಕ್ಕೆ ಸರಿಸುಮಾರು 25 ಸಾವಿರ ಸೇವಂತಿ, 30 ಸಾವಿರ ಗುಲಾಬಿಗಳಿಂದ ತಯಾರಿಸಲಾಗಿದೆ. ನೆಲಮಂಗಳದಿಂದ ಸೇವಂತಿ, ಹೊಸೂರಿನಿಂದ ಗುಲಾಬಿಗಳನ್ನು ತರಿಸಿಕೊಂಡು ಇದನ್ನು ಮಾಡಲಾಗಿದೆ. ಡೈರಿ ಡೇ ಸಂಸ್ಥೆಯವರು ಈ ಬಾರಿ ಈ ಕಲಾಕೃತಿಯನ್ನು ಪ್ರಾಯೋಜಕತ್ವವನ್ನು ವಹಿಸಿದ್ದಾರೆ. ಮೂರುವರೆ ಲಕ್ಷಕ್ಕೆ ಈ ಕಲಾಕೃತಿಯ ಅರ್ಡರ್‍ವನ್ನು ನೀಡಲಾಗಿದೆ .
ಈ ಕಲಾಕೃತಿಯನ್ನು ಈ ಬಾರಿ ನಿರ್ಮಾಣ ಮಾಡಿರುವ ಉದ್ದೇಶ ಸ್ವಾಮಿ ವಿವೇಕಾನಂದರು ಶಾಂತಿಯ ಸಂದೇಶ ಸಾರಿದವರು ಕರಾವಳಿಯಲ್ಲಿ ಶಾಂತಿ, ಸಾಮರಸ್ಯದ ಅಗತ್ಯ ಇರುವುದರಿಂದ ಇದರ ಮಹತ್ವ ಜಾಸ್ತಿಯಾಗಿದೆ.
#kudla #kudlacity #kudlacity6 #mangalore #kadripark # kadri park flower exhibition
ಶಾಂತಿಯ ಸಂದೇಶ ಸಾರಿದ ಪುಷ್ಪ ಕಲಾಕೃತಿ
January 24, 2020