ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ೪೦ ಮಹಿಳಾ ಪೊಲೀಸರನ್ನೊಳಗೊಂಡ ‘ಅಬ್ಬಕ್ಕ ಪಡೆ’ ರಚನೆಯಾಗಿದೆ.
ಮಹಿಳಾ ಪೊಲೀಸರನ್ನೊಳಗೊಂಡ ಈ ತಂಡದಲ್ಲಿ ಒಬ್ಬರು ಎಸ್‌ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಸಿಟಿಸೆಂಟರ್, ಪೋರಂ ಮಾಲ್, ಬಿಗ್‌ಬಝಾರ್, ಕದ್ರಿ ಪಾರ್ಕ್, ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ರೈಲ್ವೆ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸೇರಿ ದಂತೆ ಕೆಲವು ಪ್ರಮುಖ ಪ್ರದೇಶದಲ್ಲಿ ಈ ಪಡೆಯ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ 4 ಮಂದಿಯ ತಂಡ ಕಾರ್ಯನಿರ್ವ ಹಿಸಲಿದ್ದು, ಒಟ್ಟು 10 ತಂಡಗಳನ್ನು ರಚನೆ ಮಾಡಲಾಗುತ್ತದೆ.
ಪೊಲೀಸ್ ಬಸ್‌ನಲ್ಲೇ ಈ ಸಿಬ್ಬಂದಿಯನ್ನು ಸಂಬಂಧಪಟ್ಟ ಪ್ರದೇಶಕ್ಕೆ ಬೆಳಗ್ಗೆ ಕರೆದೊಯ್ದು, ರಾತ್ರಿ ವೇಳೆ ಪಿಕಪ್ ಮಾಡ ಲಾಗುವುದು. ನಗರದಲ್ಲಿರುವ ಶಾಲಾ ಕಾಲೇಜು ಬಳಿ ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯ, ನೈತಿಕ ಪೊಲೀಸ್‌ಗಿರಿ, ಸರಗಳ್ಳತನ, ಚುಡಾವಣೆ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಹತ್ತಿಕ್ಕಲು ಈ ಪಡೆ ಕಾರ್ಯ ನಿರ್ವಹಿಸಲಿದೆ. ನಿಗದಿತ ಜಾಗದಲ್ಲಿ ಅಬ್ಬಕ್ಕ ರಾಣಿ ಪಡೆ ಸಿಬ್ಬಂದಿ ಕರ್ತವ್ಯನಿರ್ವಹಿಸಲಿದ್ದು ಯುವತಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆ ಕೂಡಲೇ ಸ್ಪಂದಿಸಲಿ ದ್ದಾರೆ.
ಯಾವುದೇ ದೊಡ್ಡ ಮಟ್ಟದ ಘಟನೆಗಳು ಆದಲ್ಲಿ ಪಿಎಸ್ ಅಥವಾ ಆಯಾಯ ಠಾಣೆಯ ಮುಖ್ಯಸ್ಥರು, ಅದಕ್ಕಿಂತ ಮೇಲಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಅಪರಾಧ ಸಂಬಂಧಿತ ಪ್ರಕರಣಗಳು ನಡೆದಾಗ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಪ್ರಕರಣಗಳು ಬರಲಿದೆ.
tgas: Abbakka, woman, police, patrol, kudla, kudlacity, kudlanews, Rani Abbakka, force, cases, harassment, womens, school children
ಕುಡ್ಲದ ಮಹಿಳೆಯರ ಭದ್ರತೆಗೆ ಅಬ್ಬಕ್ಕ ಪೊಲೀಸ್ ಪಡೆ
April 30, 2019