Author: Team Kudla City

ಸ್ವಾಮಿ ಕೊರಗಜ್ಜ ಎಂದರೆ ಅದು ಕುಡ್ಲ

ಸ್ವಾಮಿ ಕೊರಗಜ್ಜ ಎಂದು ಯಾರೇ ಹೇಳಿದ್ರು ಅವರು ಕುಡ್ಲದವರು ಎಂದು ಹೇಳಿಬಿಡಬಹುದು. ಕುಡ್ಲದಲ್ಲಿ ಓಡಾಡುವ ಹತ್ತರಲ್ಲಿ ಎರಡು ವಾಹನವಾದರೂ ಸ್ವಾಮಿ ಕೊರಗಜ್ಜ ಎಂದು ಹೆಸರು ಹಾಕಿಕೊಂಡು ಓಡಾಡುತ್ತಾರೆ. ತುಳುವರಿಗೆ ಕೊರಗಜ್ಜ ಎಂದರೆ ಅದೊಂದು ಕಾರ್ಣಿಕ ಶಕ್ತಿ ಎನ್ನುವ ನಂಬಿಕೆಯಿದೆ. ಯಾವುದಾದರೂ ವಸ್ತು ಕಳೆದುಹೋದರೆ ಭಕ್ತಿಯಿಂದ ಕೊರಗಜ್ಜನನ್ನು ನೆನೆದರೆ ಸಾಕು. ಕಳೆದು ಹೋದ ವಸ್ತು ಸಿಕ್ಕಿ ಬಿಡುತ್ತದೆ ಎನ್ನುವ ನಂಬಿಕೆಯಲ್ಲಿ ತುಳುವರು ಬದುಕು ಕಟ್ಟುತ್ತಿದ್ದಾರೆ. Koragajja is considered as one of the most sacred and sought spirit in Mangalore. He is considered powerful and is widely worshiped along the coast. tags: Koragajja , kudlacity, kudlanews, spirit, Mangalore

ಏಳು ವರ್ಷದಲ್ಲಿ ಭರ್ತಿ 662 ಟಾಯ್ಲೆಟ್ ‌ಕಟ್ಟಿಸಿದ ಕುಡ್ಲದ ಪೊಣ್ಣು

ಒಂದಲ್ಲ ಎರಡಲ್ಲ ಏಳು ವರ್ಷದ ಅವಧಿಯಲ್ಲಿ ಬರೋಬರಿ 662 ಟಾಯ್ಲೆಟ್‌ಗಳ ನಿರ್ಮಾಣ ಮಾಡುವುದು ಅದು ಸುಲಭದ ಮಾತೇ ಅಲ್ಲ. ಅದರಲ್ಲೂ ತುಮಕೂರು ಹಾಗೂ ಬಳ್ಳಾರಿಯಂತಹ ಜಾಗದಲ್ಲಿ ಕರಾವಳಿಯ ಹುಡುಗಿಯೊಬ್ಬಳು ಇಂತಹ ಸಾಧನೆ ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷ್ಯಾ.
ಹೌದು. ಹೆಸರು ಭವ್ಯಾ ರಾಣಿ. ಕರ್ನಾಟಕ ಬಂಟ್ವಾಳದ ಅನಂತಾಡಿಯವರು. ಸೋಷಿಯಲ್ ವರ್ಕ್ ನಲ್ಲಿ ಆಳ್ವಾ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದಿರುವ ಭವ್ಯ. 2010 ರಲ್ಲಿ ಸ್ವಸ್ತಿ ಎಂಬ ಎನ್ ಜಿ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಈ ವೇಳೆ ತಮ್ಮ ಸ್ನೇಹಿತೆ ಸಹೋದರಿ ಮದುವೆಗಾಗಿ ತುಮಕೂರಿಗೆ ಆಗಮಿಸಿದ್ದರು.
ಅಲ್ಲಿಂದ ಭವ್ಯ ವೃತ್ತಿ ಹಾಗೂ ಜೀವನವೇ ಬದಲಾಯಿತು. 30 ವರ್ಷದ ಭವ್ಯರಾಣಿ ಕಳೆದ ಏಳು ವರ್ಷಗಳಿಂದ ತುಮಕೂರು ಗ್ರಾಮ ಪಂಚಾಯಿತಿಯಲ್ಲಿ ಬಯಲು ಮುಕ್ತ ಶೌಚಕ್ಕಾಗಿ ಶ್ರಮಿಸುತ್ತಿದ್ದಾರೆ. ಸರಕಾರದ ಸಹಾಯ ಪಡೆಯದೇ ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ಶಿಲ್ಪಾರ ಮೊಬೈಲ್ ಕ್ಯಾಂಟೀನ್‌ಗೆ ಫಿದಾ ಆದ ಉದ್ಯಮಿ ಮಹೇಂದ್ರ!

ಇವರು ಶಿಲ್ಪಾ ರಾಜಶೇಖರ್. ಮಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಯಮ ನಡೆಸುತ್ತಿದ್ದಾರೆ. ಮಹೇಂದ್ರ ಎನ್ನುವ ಕಾರ್ಪೊರೇಟ್ ಕಂಪನಿಯ ಮಾಲೀಕ ಮಹೇಂದ್ರ ಅವರೇ ಇವರು ಬಿಸಿನೆಸ್‌ಗೆ ಮನಸೋತು ವ್ಯಾಪಾರ ನಡೆಸಲು ಮಹೇಂದ್ರ ವಾಹನವೊಂದನ್ನು ಗಿಫ್ಟ್ ಆಗಿ ನೀಡಿದ್ದರು.
ಮೂಲತಃ ಹಾಸನ ಜಿಲ್ಲೆಯವರಾದ ಶಿಲ್ಪಾ ತಮ್ಮ ಪತಿ ರಾಜಶೇಖರ್ ಜತೆಯಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ ರಾಜಶೇಖರ್ ನಾಪತ್ತೆಯಾದರು. ತಮ್ಮವರು ಎಂದು ಹೇಳುವ ಎಲ್ಲರೂ ಕೈಕೊಟ್ಟರು.
ಮೂರು ವರ್ಷದ ಮಗುವಿನ ಜತೆಯಲ್ಲಿ ಬದುಕಿಗಾಗಿ ಗುದ್ದಾಟ ನಡೆಸಿಕೊಂಡು ಬಂದು ಕೊನೆಗೆ ಹಳ್ಳಿಮನೆ ರೊಟ್ಟೀಸ್ ಎನ್ನುವ ಪುಟ್ಟ ಮೊಬೈಲ್ ಕ್ಯಾಂಟೀನ್ ಹಾಕಿದರು. ಈಗಲೂ ಮಣ್ಣಗುಡ್ಡದ ಗಾಂಧಿನಗರದ ಕಡೆಗೆ ಹೋಗುವಾಗ ಈ ಕ್ಯಾಂಟೀನ್‌ಯಿದೆ.
ಈಗ ಶಿಲ್ಪಾ ಬದುಕು ಗಟ್ಟಿಯಾಗಿದೆ. ಹಳ್ಳಿಮನೆ ಶಿಲ್ಪಾ ಎಂದಾಕ್ಷಣ ಮಂಗಳೂರು ಮಂದಿಗೆ ಅವರ ಪರಿಚಯ ಆಗಿ ಬಿಡುತ್ತದೆ. ಮುಖ್ಯವಾಗಿ ಬದುಕಿನಲ್ಲಿ ಸೋತು ಹೋದ ಹೆಣ್ಣು ಮಗಳು ಬದುಕು ಕಟ್ಟಿದ ರೀತಿಯಂತೂ ಅದ್ಬುತ ಎನ್ನಬಹುದು.

ಉತ್ತಮ ವಿದ್ಯಾರ್ಥಿಯ ಆಯ್ಕೆಗೆ ರೊಸಾರಿಯೋ

ರೊಸಾರಿಯೋ ಕಾಲೇಜು ಬರೀ ಉತ್ತಮ ಶಿಕ್ಷಣ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ವಿಚಾರಕ್ಕಾಗಿ ರೆಡ್‌ಕ್ರಾಸ್, ಎನ್ನೆಸ್ಸೆಸ್ ಸೇರಿದಂತೆ ಹತ್ತಾರು ಕಾಲೇಜಿನಲ್ಲಿರುವ ವಿಭಾಗಗಳು ವಿದ್ಯಾರ್ಥಿಗಳು ಸಮಾಜದ ಉತ್ತಮ ಶಕ್ತಿಯಾಗಿ ಹೊರಬರಲು ಶ್ರಮ ವಹಿಸುತ್ತಿದೆ.
ಅದರಲ್ಲೂ ಮುಖ್ಯವಾಗಿ ಕಾಲೇಜಿನಲ್ಲಿರುವ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ಸೆಂಟರ್ ವಿದ್ಯಾರ್ಥಿಗಳ ಐಟಿ ಕನಸ್ಸಿಗೆ ಬಲ ನೀಡುವಂತಿದೆ. ಹೆಚ್ಚಿನ ಮಾಹಿತಿಗೆ ರೊಸಾರಿಯೋ ಕಾಲೇಜನ್ನು ಸಂಪರ್ಕಿಸಬಹುದು.

ವಿಶ್ವಕಪ್ ತಂಡದಲ್ಲಿ ಕುಡ್ಲದ ರಾಹುಲ್ ಸೆಲೆಕ್ಟ್

ವಿಶ್ವಕಪ್ ಕ್ರಿಕೆಟ್ 2019ಕ್ಕೆ ಭಾರತ ತಂಡದ 15 ಮಂದಿಯ ಆಯ್ಕೆಯಲ್ಲಿ ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ಆಯ್ಕೆಯಾಗಿದ್ದಾರೆ.
ಬೇಸಿಕಲಿ ಕೆ.ಎಲ್.ರಾಹುಲ್ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಈಗ ಭಾರತ ತಂಡದ ನೆಚ್ಚಿನ ಆಟಗಾರರಲ್ಲಿ ಒಬ್ಬರು.
klrahul, indian, cricket, team, suratkal, nitk, lokesh, kudlacity, mangalore, kudlanews