Author: Team Kudla City

6 ಕಿಮೀ ನಡೆದು ಶಾಲೆಗೆ ಹೋಗಿ ಗೆದ್ದು ಬಂದಳು

22 ಕಿ. ಮೀ ದೂರ ಶಾಲೆ. ದಿನಾ ಆರು ಕಿ.ಮೀ ನಡಿಗೆ. ಆಗಾಗ ಕೈಕೊಡುವ ವಿದ್ಯುತ್. ಇಂತಹ ಪರಿಸ್ಥಿತಿಯಲ್ಲೂ ಛಲದಿಂದ ಓದಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿದ ಸುಬ್ರಹ್ಮಣ್ಯ ಸಮೀಪದ ಕೇನ್ಯದ ಕೃಪಾ ಕೆ. ಆರ್. ಅವರ ಸಾಧನೆ ಸಿಟಿಯಲ್ಲಿ ಓದುವ ಮಕ್ಕಳಿಗೆ ಮಾದರಿಯಾಗಿದ್ದಾರೆ. ಸಿಟಿಯಲ್ಲಿ ಶಾಲೆಗೆ ಬಸ್, ರಿಕ್ಷಾದಲ್ಲಿ ಕರೆದುಕೊಂಡು ಹೋದರೂ ಇಂತಹ ಮಾರ್ಕ್ಸ್ ಪಡೆದುಕೊಂಡಿಲ್ಲ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರಾವಳಿ ಯಾಕೆ ಇಳಿಯಿತು

2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಏಳನೇ ಹಾಗೂ ಉಡುಪಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ ಉಡುಪಿ ನಾಲ್ಕು ಸ್ಥಾನ ಕೆಳಗಿಳಿದಿದೆ. ದಕ್ಷಿಣ ಕನ್ನಡ 2018ರಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳುವಂತಾಗಿದೆ.

ಪಿಯುಸಿ ಉತ್ತಮ ಫಲಿತಾಂಶವನ್ನೇ ಪಡೆದುಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಾತ್ರ ಅಗ್ರಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹಾಸನ ಪ್ರಥಮ ಹಾಗೂ ರಾಮನಗರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಕುಡ್ಲದ ಮಹಿಳೆಯರ ಭದ್ರತೆಗೆ ಅಬ್ಬಕ್ಕ ಪೊಲೀಸ್ ಪಡೆ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ೪೦ ಮಹಿಳಾ ಪೊಲೀಸರನ್ನೊಳಗೊಂಡ ‘ಅಬ್ಬಕ್ಕ ಪಡೆ’ ರಚನೆಯಾಗಿದೆ.
ಮಹಿಳಾ ಪೊಲೀಸರನ್ನೊಳಗೊಂಡ ಈ ತಂಡದಲ್ಲಿ ಒಬ್ಬರು ಎಸ್‌ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಸಿಟಿಸೆಂಟರ್, ಪೋರಂ ಮಾಲ್, ಬಿಗ್‌ಬಝಾರ್, ಕದ್ರಿ ಪಾರ್ಕ್, ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ರೈಲ್ವೆ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸೇರಿ ದಂತೆ ಕೆಲವು ಪ್ರಮುಖ ಪ್ರದೇಶದಲ್ಲಿ ಈ ಪಡೆಯ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಒಂದೊಂದು ಪ್ರದೇಶದಲ್ಲಿ 4 ಮಂದಿಯ ತಂಡ ಕಾರ್ಯನಿರ್ವ ಹಿಸಲಿದ್ದು, ಒಟ್ಟು 10 ತಂಡಗಳನ್ನು ರಚನೆ ಮಾಡಲಾಗುತ್ತದೆ.
ಪೊಲೀಸ್ ಬಸ್‌ನಲ್ಲೇ ಈ ಸಿಬ್ಬಂದಿಯನ್ನು ಸಂಬಂಧಪಟ್ಟ ಪ್ರದೇಶಕ್ಕೆ ಬೆಳಗ್ಗೆ ಕರೆದೊಯ್ದು, ರಾತ್ರಿ ವೇಳೆ ಪಿಕಪ್ ಮಾಡ ಲಾಗುವುದು. ನಗರದಲ್ಲಿರುವ ಶಾಲಾ ಕಾಲೇಜು ಬಳಿ ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯ, ನೈತಿಕ ಪೊಲೀಸ್‌ಗಿರಿ, ಸರಗಳ್ಳತನ, ಚುಡಾವಣೆ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಹತ್ತಿಕ್ಕಲು ಈ ಪಡೆ ಕಾರ್ಯ ನಿರ್ವಹಿಸಲಿದೆ. ನಿಗದಿತ ಜಾಗದಲ್ಲಿ ಅಬ್ಬಕ್ಕ ರಾಣಿ ಪಡೆ ಸಿಬ್ಬಂದಿ ಕರ್ತವ್ಯನಿರ್ವಹಿಸಲಿದ್ದು ಯುವತಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆ ಕೂಡಲೇ ಸ್ಪಂದಿಸಲಿ ದ್ದಾರೆ.
ಯಾವುದೇ ದೊಡ್ಡ ಮಟ್ಟದ ಘಟನೆಗಳು ಆದಲ್ಲಿ ಪಿಎಸ್ ಅಥವಾ ಆಯಾಯ ಠಾಣೆಯ ಮುಖ್ಯಸ್ಥರು, ಅದಕ್ಕಿಂತ ಮೇಲಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಅಪರಾಧ ಸಂಬಂಧಿತ ಪ್ರಕರಣಗಳು ನಡೆದಾಗ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಪ್ರಕರಣಗಳು ಬರಲಿದೆ.
tgas: Abbakka, woman, police, patrol, kudla, kudlacity, kudlanews, Rani Abbakka, force, cases, harassment, womens, school children

ಮಂಗಳೂರಿನ ಈ ಶಾಲೆಗೆ ರಾತ್ರಿ ಮಾತ್ರ ವಿದ್ಯಾರ್ಥಿಗಳು ಬರುತ್ತಾರೆ !

ಇದು ದ.ಕ.ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೇ ಬಹಳ ಅಪರೂಪದ ಶಾಲೆಯಿದು. ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಫೀಸ್ ಕಟ್ಟಲು ಇಲ್ಲ. ಜತೆಯಲ್ಲಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳೆಲ್ಲರೂ ಕೆಲಸ ಮಾಡಿಕೊಂಡು ಉಳಿದ ರಾತ್ರಿ ಸಮಯದಲ್ಲಿ ವಿದ್ಯಾಭ್ಯಾಸ ಮಾಡಬಹುದು.
ಹೌದು. ಕಳೆದ 76 ವರ್ಷಗಳಿಂದ ನಿರಂತರವಾಗಿ ಮಂಗಳೂರಿನ ಬಿಇಎಂ ಸ್ಕೂಲ್‌ನ ನೇರ ಮುಂಭಾಗದಲ್ಲಿ ಸಾಗುವ ಗಾಯತ್ರಿ ದೇವಸ್ಥಾನದ ರಸ್ತೆಯಲ್ಲಿ ನವಭಾರತ ರಾತ್ರಿ ಹೈಸ್ಕೂಲ್ ನಡೆಯುತ್ತದೆ. ಮುಖ್ಯವಾಗಿ ಇಲ್ಲಿ ಒಂದನೇ ತರಗತಿಯಿಂದ ೧೦ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.
ಸಂಜೆ 6ರಿಂದ ಆರಂಭವಾಗುವ ತರಗತಿಗಳು 9ರ ವರೆಗೆ ಸಾಗುತ್ತದೆ. ಮುಖ್ಯವಾಗಿ ಕಲಿಯಲು ಯಾವುದೇ ವಯಸ್ಸು ಬೇಕಾಗಿಲ್ಲ ಎನ್ನುವುದಕ್ಕೆ ಇಲ್ಲಿಗೆ ಬರುವ ವಿದ್ಯಾರ್ಥಿಗಳೇ ಸಾಕ್ಷಿ. ಗುಮಾಸ್ತರು, ಗೃಹಿಣಿಯರು, ರಿಕ್ಷಾ ಚಾಲಕರು, ಹೋಟೆಲ್‌ನಲ್ಲಿ ದುಡಿಯುವ ಸಿಬ್ಬಂದಿಗಳು ಹೀಗೆ ತರೇವಾರಿ ವಿದ್ಯಾರ್ಥಿಗಳಿಂದ ಈ ಶಾಲೆ ನಡೆಯುತ್ತಿದೆ.

ಮಂಗಳೂರು ಮಂದಿಗೆ ಕುಚಲಕ್ಕಿ ಪ್ರೀತಿ ಜಾಸ್ತಿ

ಮಂಗಳೂರಿನವರು ದೇಶದ ಯಾವುದೇ ಮೂಲೆಗೆ ಹೋದರೂ ಕೂಡ ಊಟಕ್ಕೆ ಕುಚಲಕ್ಕಿ (ಬೊಯಿಲ್ಡ್ ರೈಸ್) ಉಂಟಾ ಎಂದೇ ಪ್ರಶ್ನೆ ಕೇಳುತ್ತಾರೆ ಊಟ ಸೇರೋದಿಲ್ಲ. ಇದೇ ಕಾರಣ ಮಂಗಳೂರಿನ ಮಂದಿಗೆ ಕುಚಲಕ್ಕಿ ಮೇಲೆ ಪ್ರೀತಿ ಜಾಸ್ತಿ ಮಾರಾಯ್ರೆ.