Author: Team Kudla City

ಪ್ರಧಾನಿ ಮೋದಿಗೆ ಕುಡ್ಲದ ಬಸ್ ಚಾಲಕನ ವಿಶಿಷ್ಟ ಸೇವೆ

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರ ಮೇ 30 ಕ್ಕೆ ನಡೆಯಲಿದೆ. ದೇಶದ ಜನರು ಒಂದೊಂದು ರೀತಿಯಲ್ಲಿ ಸಂಭ್ರಮ ಪಡುತ್ತಿದ್ದಾರೆ. ಮಂಗಳೂರಿನ ಬಸ್ ಚಾಲಕರೊಬ್ಬರು ವಿಶಿಷ್ಟ ರೀತಿಯ ಸೇವೆಗೆ ಮುಂದಾಗಿದ್ದಾರೆ.

30 ರ ಇಡೀ ದಿನ ಮಂಗಳೂರು ಟು ಮೂಡಬಿದಿರೆ,ಕಿನ್ನಿಗೋಳಿ ಹೋಗುವ ಕೋಟ್ಯಾನ್ ಬಸ್ ಪ್ರಯಾಣಿಕರ ನ್ನು ಬೆಳಗ್ಗೆಯಿಂದ ಸಂಜೆಯ ತನಕ ಉಚಿತವಾಗಿ ಪ್ರಯಾಣಿಕರನ್ನು ಸಾಗಿಸಲಿದೆ. ಅಂದಹಾಗೆ ಇಂತಹ ಉಚಿತ ಸೇವೆಯನ್ನು ಬಸ್ ಮಾಲೀಕರು ನೀಡುತ್ತಿಲ್ಲ ಬದಲಾಗಿ ಬಸ್ ಚಾಲಕ ಶ್ರೀಕಾಂತ್ ಬಳವಿನ ಗುಡ್ಡೆ ಮಾಡುತ್ತಿದ್ದಾರೆ.

ಅಂದಹಾಗೆ ಕಳೆದ ಸಲ‌ ಕೂಡ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವಾಗ ಮಂಗಳಾದೇವಿ ಟು ಕಾವೂರು ತನಕ ಬಸ್ ಸೇವೆಯನ್ನು ಉಚಿತವಾಗಿ ನೀಡುವ ಕೆಲಸ ಮಾಡಿದ್ದರು. ಅವರು ಹೇಳುವಂತೆ ಮೋದಿ ದೇಶದ ಜನತೆಗೆ ಇಷ್ಟು ಮಾಡುವಾಗ ನಾನು ಮಾಡುವ ಸೇವೆ ಬಹಳ ಕಡಿಮೆ.

ಕುಡ್ಲದವರಿಗೆ ಮಾತ್ರ ಗೊತ್ತು ಎಂಕುನ ಕತೆ !

ತುಳುನಾಡಿನ ಪ್ರತಿಯೊಬ್ಬನಲ್ಲಿಯೂ ಕೇಳಿ ನೋಡಿ. ಎಂಕು ಯಾಕೆ ಪಣಂಬೂರಿಗೆ ಹೋದ ಅರ್ಥಾತ್‌ ಎಂಕು ಪಣಂಬೂರು ಹೋದ ಕತೆಯನ್ನು ಪೂರ್ತಿಯಾಗಿ ಕೇಳಬೇಕಾದರೆ ಕುಡ್ಲದ ವ್ಯಕ್ತಿಗಳನ್ನು ಹಿಡಿದು ಕೇಳಿ ಎಂಕು ನ ಪೂರ್ತಿ ಕತೆ ಹೊರಬರುತ್ತದೆ.

ಕುಡ್ಲದ ಮಂದಿ ಜಾಸ್ತಿಯಾಗಿ ಈ ಪದವನ್ನು ಪದೇ ಪದೇ‌ ಪ್ರಯೋಗ ಮಾಡುತ್ತಾರೆ. ಯಾಕೆ ಅಂತಾ ಅವರಲ್ಲಿ ಕೇಳಿ‌ ತಿಳಿದುಕೊಳ್ಳಿ.

ಇನ್ನು ಸ್ಕೂಲ್ ಗೆ ಹೊರಡುವ ಸಮಯ

ಇಂದಿನಿಂದ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಬರಲಿದ್ದಾರೆ. ಹೌದು. ಇಂದಿನಿಂದ ಶಾಲಾ ಆರಂಭ ನಡೆಯಲಿದೆ.
ಒಂದೆಡೆ ಬಿರು ಬಿಸಿಲು ಜತೆಗೆ ಮಳೆರಾಯ ಕೃಪೆ ತೋರಿಸದ ಪರಿಣಾಮ ಪುಟಾಣಿ ಮಕ್ಕಳು ಶಾಲೆಯ ದಾರಿ ಹಿಡಿಯಲೇ ಬೇಕಾಗುತ್ತದೆ.

ಮುಖ್ಯವಾಗಿ ಕೆಲವೊಂದು ಖಾಸಗಿ ಶಾಲೆಗಳು ಆರಂಭ ಕೊಂಚ ತಡವಾಗುವ ಸಾಧ್ಯತೆಯಿದೆ. ಉಳಿದಂತೆ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ ಬೇಗನೆ ಬಂದು ತಲುಪಿದೆ.

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.

ಮೀನುಗಾರರಿಗೆ ಇನ್ನು ಎರಡು ತಿಂಗಳು ರಜೆ

ಮತ್ತೇ ಮೀನುಗಾರರಿಗೆ ಎರಡು ತಿಂಗಳ ರಜೆ ಘೋಷಣೆಯಾಗಿದೆ. ಜೂನ್1 ರಿಂದ ಜುಲೈ ಕೊನೆಯ ವರೆಗೆ ಯಾಂತ್ರಿಕೃತ ಬೋಟ್ ಗಳು ಮೀನು ಹಿಡಿಯುವ ಆಗಿಲ್ಲ. ಈ ಸಮಯದಲ್ಲಿ ನಾಡದೋಣಿಗಳಿಗೆ ಮಾತ್ರ ಅವಕಾಶವಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪರ್ಸಿನ್ ಬೋಟುಗಳು ಐದು ತಿಂಗಳ ಮೊದಲೇ ಮೀನುಗಾರಿಕೆ ಹೋಗಿಲ್ಲ. ಒಟ್ಟಾರೆ ಈ ಬಾರಿಯಂತೂ ಮೀನುಗಾರರಿಗೆ ನಷ್ಟದ ವರ್ಷ ಎಂದೇ ಪರಿಗಣಿಸಬಹುದು.