ಕಾವೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಪ್ರವೇಶಾತಿ ನಡೆಯುತ್ತಿದೆ. ವಿಜ್ಞಾನ ವಿಚಾರದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಇಬಿಎಎಸ್, ಇಬಿಎಸಿ ವಿಷಯಗಳು ವಿದ್ಯಾರ್ಥಿಗಳಿಗೆ ಸಿಗಲಿದೆ. ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರೆರಿಯ ಸವಲತ್ತು, ಜಿಮ್, ವಿದ್ಯಾರ್ಥಿಗಳಿಗೆ (ಪುರುಷ) ಹಾಸ್ಟೆಲ್ ವ್ಯವಸ್ಥೆ ಕೂಡಯಿದೆ. ಅನುಭವಸ್ಥರಾದ ಉಪನ್ಯಾಸಕ ವರ್ಗ, ರೆಮಿಡಿಯಲ್ ತರಗತಿಗಳ ಜತೆಗೆ ವೈಯಕ್ತಿಕವಾಗಿ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವಂತಹ ಕೋಚಿಂಗ್ ಕ್ಲಾಸ್, ಜೆಇಇ ಮೈನ್ ಹಾಗೂ ಅಡ್ವಾನ್ಸ್, ನೀಟ್ ಕುರಿತಾದ ತರಗತಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯನ್ನು ತೋರಿಸುತ್ತದೆ. ಬಿಜಿಎಸ್‌ನ ಹೆಚ್ಚಿನ ಮಾಹಿತಿಗೆ ಇಲ್ಲಿಗೆ ಬನ್ನಿ http://www.bgsec.net/
Author: Team Kudla City
ಬಿಜಿಎಸ್‌ನಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಸವಲತ್ತು !
ಕಾವೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಬಹಳ ಮುಖ್ಯವಾದದ್ದು ಗುಣಮಟ್ಟದ ಶಿಕ್ಷಣ ಇದರ ಜತೆಗೆ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಬದುಕಿಗೆ ಸಂಬಂಧಪಟ್ಟಂತಹ ಹೈಟೆಕ್ ಸವಲತ್ತು.
ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮಾನವೀಯ ಗುಣಗಳಿಂದ ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಸಮಾಜದಲ್ಲಿ ಬಹಳ ಎತ್ತರಕ್ಕೆ ಸಾಗಿದ ಉದಾಹರಣೆಗಳೇ ಜಾಸ್ತಿ.
ಹೆತ್ತವರಿಗೆ ಮಕ್ಕಳು ಅಮೂಲ್ಯವಾದ ಸಂಪತ್ತು ಎಂದು ಪರಿಗಣಿಸಿದರೆ ಇಂತಹ ಸಂಪತ್ತನ್ನು ಸಮಾಜದಲ್ಲಿ ಉತ್ತಮವಾಗಿ ಬೆಳೆಸುವ ಕೆಲಸವನ್ನು ಕಾವೂರಿನ ಬಿಜಿಎಸ್ ಸಂಸ್ಥೆ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ 0824 -248 4749
ಕರಾವಳಿಯ ಅತೀ ಹೆಚ್ಚು ಚರ್ಚ್ ಗಳ ಹೆಸರು ಸಂತ ಅಂತೋನಿ
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅತೀ ಹೆಚ್ಚು ಚರ್ಚ್ ಗಳಲ್ಲಿ ಸಂತ ಅಂತೋನಿ ಹೆಸರು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಬೆಳ್ತಂಗಡಿ ಯ ನಾರಾವಿ ಹಾಗೂ ಉಜಿರೆಯಲ್ಲಿ ಸಂತ ಅಂತೋನಿ ಚರ್ಚ್ ಗಳಿದ್ದಾರೆ.
ಉಳಿದಂತೆ ಅಲ್ಲಿಪಾದೆ, ಬನ್ನೂರು, ಕೂಳೂರು, ಪೆರ್ಮಾಯಿ ಯಲ್ಲಿ ಸಂತ ಅಂತೋನಿ ಅವರಿಗೆ ಸಮರ್ಪಿತ ವಾದ ಚರ್ಚ್ ಗಳಿವೆ. ಮಂಗಳೂರಿನಲ್ಲ ಜೆಪ್ಪುವಿನಲ್ಲಿ ಚಾರಿಟಿ ಹೋಮ್ ಹಾಗೂ ಮಿಲಾಗ್ರಿಸ್ ನಲ್ಲಿ ಪುಣ್ಯಕ್ಷೇತ್ರ ವಿದೆ.
ಕೂಳೂರಿನ ಚರ್ಚ್ ಅತೀ ಪುರಾತನ ಚರ್ಚ್ ಎಂದರೆ 1888 ರಲ್ಲಿ ಸ್ಥಾಪನೆಯಾಯಿತು. ಈ ಬಳಿಕ ಪೆರ್ಮಾಯಿ 2003 ರಲ್ಲಿ ಆರಂಭ ವಾಯಿತು. ಮೇ 31 ರಿಂದ ಈ ಎಲ್ಲ ಚರ್ಚ್ ಗಳಲ್ಲಿ ವಿಶೇಷ ನೊವೆನಾ ಹಾಗೂ ಜೂನ್ 13 ರಂದು ಸಂತ ಅಂತೋನಿ ಅವರ ಹಬ್ಬ ನಡೆಯಲಿದೆ. ಅಂದಹಾಗೆ ಕರಾವಳಿಯಲ್ಲಿ ಈ ಸಂತ ನನ್ನು ಬಿಟ್ಟರೆ ಸಂತ ಲಾರೆನ್ಸ್ ಚರ್ಚ್ ಗಳು ಕೂಡ ಇದೆ.
ಮೋದಿಗಾಗಿ 500 ಚೆಂಡು ಮಲ್ಲಿಗೆ ಕೊಟ್ಟ ಮುಸ್ಲಿಂ ಹೂ ವ್ಯಾಪಾರಿ
ಕುಡ್ಲದಲ್ಲಿ ಶ್ರೀಮಂತ ಮಾತ್ರವಲ್ಲ ಸಾಮಾನ್ಯ ಬಡವ ಕೂಡ ಪ್ರಧಾನಿ ನರೇಂದ್ರ ಮೋದಿಯಾಗಬೇಕು ಎಂದು ಕನಸ್ಸು ಕಾಣುತ್ತಾನೆ ಎನ್ನುವ ಮಾತಿಗೆ ಮತ್ತಷ್ಟು ಉದಾಹರಣೆ ಕಾಣಸಿಗುತ್ತಿದೆ.
ಹೌದು. ಕುಡ್ಲದ ಸಿಟಿ ಸೆಂಟರ್ ಮುಂಭಾಗದಲ್ಲಿರುವ ಲಲಿತ್ ಮಹಲ್ ಹೋಟೆಲ್ ಪಕ್ಕದಲ್ಲಿ ಹೂ ಮಾರಾಟ ಮಾಡುವ ಪಕೀರಬ್ಬ ಬೇಸಿಕಲಿ ದೊಡ್ಡ ಶ್ರೀಮಂತ ರಲ್ಲ ಹೂ ವ್ಯಾಪಾರ ಮಾಡುತ್ತಾ ಬದುಕು ಕಟ್ಟುವ ಮನುಷ್ಯ ಆದರೆ ಮೋದಿ ಪ್ರಧಾನಿ ಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದಾಕ್ಷಣ ತಾನು ಕೂಡ ಸೇವೆ ಮಾಡಲು ಇಳಿದು ಬಿಡುತ್ತಾರೆ.
ಗುರುವಾರ ಸಂಜೆ ಯಿಂದ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ತನಕ ಬರೋಬರಿ 500 ಚೆಂಡು ಮಲ್ಲಿಗೆಯನ್ನು ಉಚಿತವಾಗಿ ಮಹಿಳೆಯರಿಗೆ ನೀಡುವ ಕೆಲಸ ಮಾಡಿದ್ದಾರೆ. ಈ ಸೇವೆಗೆ ಹೆಚ್ಚು ಕಡಿಮೆ 50 ಸಾವಿರ ದಷ್ಟು ಖರ್ಚು ತಗಲಬಹುದು ಮೋದಿ ದೇಶದ ಉದ್ದಾರಕ್ಕೆ ಸಾಕಷ್ಟು ಮಾಡಿದ್ದಾರೆ ನಾನು ಕೊಂಚ ಸೇವೆ ಮಾಡಬೇಕು ಎನ್ನುವ ಮೂಲಕ ಪಕೀರಬ್ಬ ಅಭಿಮಾನಿ ತೋರಿಸುತ್ತಾರೆ. ಅಂದಹಾಗೆ ಇವರು ಬೆಳ್ತಂಗಡಿಯವರು ಈಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಜಾನ್ ವೃತದಲ್ಲಿರವ ಪಕೀರಬ್ಬರಿಗೆ ಮೋದಿ ಮೇಲೆ ಅಪಾರ ನಂಬಿಕೆ.
ಪ್ರಧಾನಿ ಮೋದಿಗಾಗಿ ಸಾವಿರ ಮಂದಿಗೆ ಊಟ ಬಡಿಸಿದರು
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣ ಗುರುವಾರ ಮಧ್ಯಾಹ್ನ ಬಸ್‌ಗಳ ತಾಣದ ಬದಲಾಗಿ ಊಟೋಪಚಾರದ ತಾಣವಾಗಿ ಬದಲಾಗಿತ್ತು.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಮೀನು ಮಾರಾಟದ ಮಹಿಳೆಯರು, ಬಸ್ ಸಿಬ್ಬಂದಿಗಳು ಹೀಗೆ ಸ್ಟೇಟ್ ಬ್ಯಾಂಕ್ ಸುತ್ತಮುತ್ತ ಇರುವ 1250 ಕ್ಕೂ ಅಧಿಕ ಮಂದಿ ಊಟಕ್ಕೆ ಹಾಜರಾಗಿದ್ದರು. ಅನ್ನ, ಸಾರು, ಸಾಂಬಾರು, ಪಲ್ಯ,ಉಪ್ಪಿನ ಕಾಯಿ, ಪಾಯಸದಂತಹ ವಸ್ತುಗಳು ಊಟದಲ್ಲಿ ಕಾಣಿಸಿಕೊಂಡಿತು.
ಮಧ್ಯಾಹ್ನ 12.30ರಿಂದ 2.30 ರ ವರೆಗೆ ನಡೆದ ಉಚಿತ ಊಟೋಪಾಚಾರ ಸೇವೆ ನಡೆಯಿತು. ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಕಿಶೋರ್ ಕುಮಾರ್ ಶಕ್ತಿನಗರ, ಗುಣಕರ ಪೂಜಾರಿ ಪೆರ್ಮಂಕಿ ಸೇರಿದಂತೆ ಹತ್ತಾರು ಬಸ್ ಏಜೆಂಟ್‌ಗಳು ಈ ಕಾರ‍್ಯದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.




