Author: Team Kudla City

ಕದ್ರಿ ಉದ್ಯಾನವನದಲ್ಲಿ ಸೋಲಾರ್ ಗಡಿಯಾರ

ಮಂಗಳೂರಿನ ಕದ್ರಿ ಉದ್ಯಾನವನಕ್ಕೆ ಹೋಗುವ ಮಂದಿಯ ಗಮನಕ್ಕೆ ಇರಲಿ. ಈಗ ಪಾರ್ಕ್‌ಗೊಂದು ವಿಶೇಷವಾದ ಗಡಿಯಾರ ಬಂದಿದೆ. ಎಸ್‌ಎಸ್ 316 ಗುಣಮಟ್ಟದ ಸ್ಟೀಲ್‌ನಿಂದ ಈ ಗಡಿಯಾರ ಹಾಗೂ ಗೋಪುರವನ್ನು ನಿರ್ಮಾಣ ಮಾಡಲಾಗಿದೆ.
ಗಡಿಯಾರದ ಗೋಪುರ 21 ಅಡಿ ಎತ್ತರವಿದೆ. ಈ ಗೋಪುರ ತುಕ್ಕು ನಿರೋಧಕವಿದೆ. ಮಳೆ, ಗಾಳಿ, ಬಿಸಿಲು ಯಾವುದಕ್ಕೂ ಈ ಗೋಪುರ ಏನೂ ಆಗೋದಿಲ್ಲ. ಇದನ್ನು ಎಚ್‌ಎಂಟಿ ಕಂಪನಿ ನಿರ್ಮಾಣ ಮಾಡಿದೆ ಎನ್ನುವುದು ವಿಶೇಷ.

ಈ ದೇವಳಕ್ಕೆ ಕಟ್ಟಡವಿಲ್ಲ ಗರ್ಭಗುಡಿಯೂ ಇಲ್ಲ !

ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ.

ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು. ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.

ಡೆಂಗೆ ರೋಗಿಗೆ ಬೆಲ್ಲ, ಈರುಳ್ಳಿ ಮದ್ದಿನ ಪ್ರಯೋಗ

ಕರಾವಳಿಯ ಡೆಂಗೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕುಡ್ಲದಲ್ಲಿ ಡೆಂಗೆ ಜ್ವರದಿಂದ ಬಳಲುವ ಸಂಖ್ಯೆ 450 ಕ್ಕೆ ಮೀರಿ ನಿಂತಿದೆ. ಐವರು ಈಗಾಗಲೇ ಸಾವನ್ನು ಅಪ್ಪಿದ್ದಾರೆ. ಆದರೂ ಡೆಂಗೆ ಜ್ವರದ ಪ್ರಮಾಣ ತಗ್ಗುತ್ತಿಲ್ಲ.

ಖಾಸಗಿ, ಸರಕಾರಿ ಎರಡರಲ್ಲೂ ರೋಗಿಗಳು ಮಲಗುತ್ತಿದ್ದಾರೆ. ಡೆಂಗೆ ಜ್ವರದ ಬಳಿಕ ರೋಗಿಯ ರಕ್ತದ ಕಿರುಬಿಲ್ಲೆ(ಪ್ಲೇಟ್ಲೆಟ್)ಗಳ ಸಂಖ್ಯೆ ಕುಸಿತ ಕಾಣುತ್ತದೆ. ಇದಕ್ಕೆ ಔಷಧದ ಜತೆಯಲ್ಲಿ ಬೆಲ್ಲ ಹಾಗೂ ಹಸಿ ಈರುಳ್ಳಿಯನ್ನು ತಿನ್ನಬೇಕು. ಇದು ರಕ್ತದ ಕಿರುಬಿಲ್ಲೆಯ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಜತೆಗೆ ರೋಗ ನಿರೊಧಕ ಶಕ್ತಿ ಕೂಡ ಗಟ್ಟಿಯಾಗುತ್ತದೆ. ಆರ್ಯುವೇದದಲ್ಲೂ ಈ ಕುರಿತು ಉಲ್ಲೇಖವಿದೆ.

ಸತ್ಯನಾರಾಯಣ ಪೂಜೆ ತುಳುವರ ಪ್ರತಿ ಶುಭಕಾರ್ಯಕ್ಕೂ ಬೇಕು

ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ತುಳುನಾಡಿನಲ್ಲಿ ನಡೆಯುವ ಪ್ರತಿಯೊಂದು ಶುಭ ಕಾರ್ಯಕ್ರಮ ಅಥವಾ ಗೃಹ ಪ್ರವೇಶ, ಮದುವೆ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸತ್ಯನಾರಾಯಣ ದೇವರ ಪೂಜೆ ಯಂತೂ ಕಡ್ಡಾಯವಾಗಿ ಇರುತ್ತದೆ.
ವಿಶೇಷ ಎಂದರೆ ಕರಾವಳಿಯ ಭೂತರಾಧನೆ, ನಾಗಾರಾಧನೆಯಂತೇ ಸತ್ಯನಾರಾಯಣ ಪೂಜೆ ಕೂಡ ವಿಶಿಷ್ಟ ಪೂಜೆ,ಆರಾಧನೆಯಾಗಿ ಗಮನ ಸೆಳೆಯುತ್ತದೆ. ಪೂಜೆಯ ಸಮಯದಲ್ಲಿ‌ ಮಾಡುವ ಪ್ರಸಾದವಂತೂ ಎಲ್ಲರಿಗೂ ಬಹಳ‌ ಪ್ರಿಯ.

ಶಾಲೆ,ಕಾಲೇಜಿಗೆ ಮತ್ತೆ ಮಳೆಯ ರಜೆ ಆರಂಭ

ಕರ್ನಾಟಕ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿಯ ಎಲ್ಲಾ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ಜು.23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು, ಮೀನುಗಾರರು ಕಡ್ಡಾಯವಾಗಿ ಮೀನುಗಾರಿಕೆಗೆ ತೆರಳುವಂತಿಲ್ಲ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಪ್ರವಾಸಿಗರು ಹಾಕರು ಸಮುದ್ರ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡಿ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದೆಂದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.