Author: Team Kudla City

ಪ್ಲಾಸ್ಟಿಕ್ ಬಿಟ್ಟುಬಿಡಿ ಬಾಳೆಲೆ ಜೀವಕೊಡಿ

ಪ್ಲಾಸ್ಟಿಕ್ ಬಿಟ್ಟು ಬಾಳೆಲೆಗೆ ಅವಕಾಶ ಕೊಡಿ ಎನ್ನುವ ಕುಡ್ಲ ಸಿಟಿಯ ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಖ್ಯವಾಗಿ ಮಂಗಳೂರಿನ ರವಿಚಂದ್ರ ಎನ್ನುವ ವರು ಬಾಳೆಲೆ ಹಾಗೂ ಅಡಕೆ ಹಾಳೆಯ ಮೂಲಕ ಏನೆಲ್ಲ ಪರಿಸರಪೂರಕವಾದ ವಸ್ತುಗಳನ್ನುಪ್ಲಾಸ್ಟಿಕ್ ಗೆ ಪರ್ಯಾಯ ವಾಗಿ ಬಳಸಬಹುದು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಇದರ ಜತೆಯಲ್ಲಿ ಹಳೆಯ ರದ್ದಿ ಪೇಪರ್ ನಿಂದಲೂ ಬ್ಯಾಗ್ ತಯಾರಿಸುವ ಕುರಿತು ಮಂಗಳೂರಿನ ಸಂತೋಷ್ ಪೂಜಾರಿ ಅವರು ಪ್ರಯೋಗ ಮಾಡಿ ಕಳುಹಿಸಿದ್ದಾರೆ. ಮಂಗಳೂರು ಮಾತ್ರವಲ್ಲ ಇಡೀ ದೇಶದ ಜನತೆ ಪ್ಲಾಸ್ಟಿಕ್ ನಿಂದ ದೂರ ಓಡುತ್ತಿದ್ದಾರೆ. ಪರ್ಯಾಯ ವಸ್ತುಗಳ ಕಡೆಗೆ ಮನಸ್ಸು ಮಾಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಮುಂದಿನ ನಮ್ಮ ಮಕ್ಕಳ ಬದುಕಿಗೆ ಒಳ್ಳೆಯ ಪರಿಸರ ಬಿಟ್ಟು ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ. ಕುಡ್ಲಸಿಟಿಯ ಅಭಿಯಾನಕ್ಕೆ ಕೈಜೋಡಿಸಿ..

ಕಾಮನ್ ವೆಲ್ತ್ ನಲ್ಲಿ ಕುಡ್ಲದ ಹುಡುಗನಿಗೆ ಎರಡು ಚಿನ್ನ

ಕೆನಡಾದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಅಂತಾರಾಷ್ಟ್ರೀಯ ಪವರ್ ಲಿಫ್ಟ್​​ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ. ಎರಡು ಚಿನ್ನದ ಪದಕ‌ ಪಡೆದಿದ್ದಾರೆ. ಕ್ಲಾಸಿಕ್ ಮತ್ತು ಎಕ್ವಿಪ್ಡ್ ವಿಭಾಗದಲ್ಲಿ ಭಾರ ಎತ್ತಿ ಚಿನ್ನದ ಪಡೆದಿದ್ದಾರೆ.
ಇವರು ದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿ. ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರ.
Tags : comenwealth, gamesh ,Kudlacity, kudla,Mangalore, citykudla,

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಬಾಳೆಲೆ ಬೆಂಬಲಿಸಿ

ಕುಡ್ಲ ಮಾತ್ರವಲ್ಲ ಮೆಟ್ರೋ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರಿ ನಡೆಯುತ್ತದೆ ಅದನ್ನು ನಿಯಂತ್ರಣ ಮಾಡುವುದೇ ದೊಡ್ಡ ಕಿರಿಕಿರಿ. ನಗರದ ಜನರು ಮಾಲ್ ಸಂಸ್ಕೃತಿಯ ಅಡಿಯಲ್ಲಿ ಇರುವುದರಿಂದ ಮಾಲ್ ಗಳ ಲ್ಲಿ ಪ್ಲಾಸ್ಟಿಕ್ ಬದಲು ಬಾಳೆಲೆ ಬಳಸುವ ವಿಚಾರದಲ್ಲಿ ಗ್ರಾಹಕರೇ ಮಾಲ್ ನ‌ ಮುಖ್ಯಸ್ಥ ರಿಗೆ ಫೀಡ್ ಬ್ಯಾಕ್ ನೀಡುವ ಕೆಲಸ ಮಾಡಬಹುದು. ಇದರಿಂದ ಕೊಂಚ ಮಟ್ಟಿ ನ ಪ್ಲಾಸ್ಟಿಕ್ ನಿಯಂತ್ರಣ ಕ್ಕೆ ಕೊಡುಗೆ ನೀಡಬಹುದು ಜತೆಗೆ ರೈತನಿಗೂ ಆದಾಯ ಮಾಡುವ ಕೆಲಸವಿದು.

ಪಂಪ್‌ವೆಲ್ ಸರ್ಕಲ್ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕು ?

ಪಂಪ್‌ವೆಲ್ ಸರ್ಕಲ್ ಮಂಗಳೂರಿನ ಹೆಬ್ಬಾಗಿಲು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇಡೀ ಕುಡ್ಲದ ಇತಿಹಾಸದಲ್ಲಿ ಇಂತಹ ಒಂದು ಸರ್ಕಲ್ ನಿರ್ಮಾಣ ಮಾಡುವ ಕನಸ್ಸು ಇನ್ನು ಕೂಡ ಪೂರ್ಣವಾಗಿಲ್ಲ.
ಜನಪ್ರತಿನಿಧಿಗಳನ್ನು ನೇರವಾಗಿಲ್ಲ ಕೇಳುವ ಧೈರ್ಯ ಇಲ್ಲದ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಪಂಪ್‌ವೆಲ್ ಸರ್ಕಲ್ ಕನಸ್ಸು ಇನ್ನು ಪೂರ್ಣವಾಗಲು ಅದೆಷ್ಟೋ ವರ್ಷಗಳೇ ಬೇಕು ಮಾರಾಯ್ರೆ. ಎಂಜಿನಿಯರ್ ಡೇ ಆಚರಣೆ ಮಾಡುವಾಗ ಪಂಪ್‌ವೆಲ್ ಸರ್ಕಲ್ ಮಾಡಲು ಶ್ರಮ ಪಟ್ಟ ಎಂಜಿನಿಯರ್‌ಗಳನ್ನು ಬಿಟ್ಟು ಉಳಿದವರಿಗೆ ಹ್ಯಾಪಿ ಎಂಜಿನಿಯರ‍್ಸ್ ಡೇ.

ನಿಗರ್ತಿಕರ ಆಶಾಕಿರಣ ಜೆಪ್ಪು ಸಂತ ಆಂತೋನಿ ಆಶ್ರಮ

ಮಂಗಳೂರಿನ ಜೆಪ್ಪು ಸಂತ ಆಂತೋನಿ ಆಶ್ರಮ ಸಮಾಜದ ದುರ್ಬಲ ಹಾಗೂ ದೀನ ದಲಿತರಿಗೆ ನೆಮ್ಮದಿಯ ಬದುಕು ನೀಡುವ ನಿಟ್ಟಿನಲ್ಲಿ ಆಶ್ರಮ ಕಳೆದ 120 ವರ್ಷಗಳಿಗಿಂತಲೂ ನಿರಂತರವಾಗಿ ದುಡಿಯುತ್ತಿದೆ. ನಗರದ ಜೆಪ್ಪುವಿನಲ್ಲಿರುವ ಆಶ್ರಮದ ವಠಾರಕ್ಕೆ ಹೋದಂತೆ ಸದ್ದಗದ್ದಲದ ಪ್ರಪಂಚದಿಂದ ನೆಮ್ಮದಿ, ಶಾಂತಿ- ಸಮಾಧಾನ ತಾಣಕ್ಕೆ ಹೋಗುತ್ತಿದ್ದೇವೆ ಎನ್ನುವ ಭಾವ ಪ್ರತಿಯೊಬ್ಬನಲ್ಲಿಯೂ ಬೆಳೆಯುತ್ತದೆ. ಹಸಿರು ತೋಟ, ಮರಗಿಡ, ಹೂಗಳಿಂದ ಆಶ್ರಮದ ವಠಾರ ಹಸಿರು ಪ್ರೀತಿಗೆ ಮುನ್ನುಡಿ ಬರೆದಂತೆ ಭಾಸವಾಗುತ್ತದೆ.
ಆಶ್ರಮದಲ್ಲಿ 400ಕ್ಕೂ ಅಧಿಕ ಪುರುಷರು ಹಾಗೂ ಮಹಿಳೆಯರು ಬದುಕು ಕಟ್ಟುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಯುವಕರ ಶೈಕ್ಷಣಿಕ ಬದುಕು ಕೂಡ ಇಲ್ಲಿಯೇ ರೂಪುಗೊಳ್ಳುತ್ತಿದೆ. ಆಶ್ರಮವಾಸಿಗಳಲ್ಲಿ ಕಾಣಿಸಿಕೊಳ್ಳುವ ಶಿಸ್ತು ಅವರ ಬದುಕಿನ ಪ್ರಯಾಣಕ್ಕೊಂದು ಸುಲಭ ರಹದಾರಿಯನ್ನು ಕಲ್ಪಿಸಿಕೊಡುತ್ತದೆ. ತಮಗೆ ಬೇಕಾದ ತರಕಾರಿಯನ್ನು ತಾವೇ ಬೆಳೆಯುವ ಮೂಲಕ ಆಶ್ರಮದ ನಿವಾಸಿಗಳು ಬದುಕಿನಲ್ಲಿ ಸ್ವಾವಲಂಬನೆಯ ಪಾಠವನ್ನು ದಿನಾಲೂ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.
ತೀರಾ ವಯಸ್ಸಾದ ಹಿರಿಯರು ಕೆಲಸ ಮಾಡಲು ಕೂಡದವರು ಕೂಡ ತಮ್ಮಲ್ಲಿ ಆಗುವ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಬದುಕು ಕಲಿಸುತ್ತಿದ್ದಾರೆ. ಕಳೆದ ವರ್ಷ ಆಶ್ರಮ 120ವರ್ಷಗಳ ಆಚರಣೆಗೆ ಸಂಬಂಧಪಟ್ಟಂತೆ ನಾನಾ ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ‍್ಯಗತ ಮಾಡುವ ಕೆಲಸದಲ್ಲಿ ಮುಂದಾಗಿದೆ. ಮಾನಸಿಕ ರೋಗಿಗಳ ಚಿಕಿತ್ಸೆ ಹಾಗೂ ವಾಸಕ್ಕೆ 100 ಬೆಡ್‌ಗಳ ಸುಸಜ್ಜಿತ ಕಟ್ಟಡದ ನಿರ್ಮಾಣ ಕೆಲಸ ಸಾಗುತ್ತಿದೆ.