Tagged: Yakshagana

ಕುಡ್ಲದ ಹುಡುಗಿ ನಮ ಜಿಗ್ಗ ಫಿಯೇಟ್ !

ಕುಡ್ಲ ಸಿಟಿಯ ಹುಡುಗಿ ಮಿಹಿಕಾ ಪ್ರಿಮಿಯರ್ ಪದ್ಮಿನಿ ಫಿಯೇಟ್ ವನ್ನು ಜಿಗ್ಗ ಮಾಡಿದ್ದಾರೆ. ತುಳುವಿನ ನಮ ಜಿಗ ಎಂದರೆ ತುಂಬಾನೇ ಫೋಶ್ ಎನ್ನುವ ಅರ್ಥ.

ಹೌದು. ಮಿಹಿಕಾ ಬೇಸಿಕಲಿ ಕುಡ್ಲದ ಗೋರಿ ಗುಡ್ಡೆ ಯ ಹುಡುಗಿ ನಗರದ ಮಹಾಲಸಾದಲ್ಲಿ ವಿಶುವಲ್ ಆರ್ಟ್ ನಲ್ಲಿ ಕಲಿತು ಈಗ ಮಾಸ್ಟರ್ ಆಫ್ ವೇದಿಕ್ ಸೈನ್ಸ್ ಪದವಿಯನ್ನು ಗುಜರಾತ್ ನ ಮಹರ್ಷಿ ವೇದವ್ಯಾಸ್ ವಿವಿಯಿಂದ ಕಲಿಯುತ್ತಿದ್ದಾರೆ.

ಅಂದಹಾಗೆ ನಮ ಜಿಗ್ಗ ಎನ್ನುವುದು ಫಿಯೇಟ್ ಕಾರಿಗೆ ಮಿಹಿಕಾ ನೀಡಿದ ಹೆಸರು ಮಿಹಿಕಾ ಅಣ್ಣನಿಗೆ ಅವರ ಅಂಕಲ್ ಉಡುಗೊರೆಯಾಗಿ ಬಹಳ ವರ್ಷಗಳ ಹಿಂದೆ ನೀಡಿದ್ದರು.

ಈ ಬಳಿಕ ಅಣ್ಣ ಮದುವೆಯಾದ ಬಳಿಕ ಈ ಕಾರು ಮನೆಯ ಮೂಲೆ ಸೇರಿತು ಎಲ್ಲರೂ ಅದನ್ನು ಗುಜರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದರು. ಆದರೆ ಮಿಹಿಕಾಳಿಗೆ ಇದು ಇಷ್ಟ ಇರಲಿಲ್ಲ. ಅಣ್ಣನ ಪ್ರೀತಿಯ ಕಾರು ಮನೆಯಲ್ಲೇ ಇರಲಿ ಎಂದುಕೊಂಡು ತಾನೇ ತುಳುನಾಡಿನ ಯಕ್ಷಗಾನ, ಪಿಲಿವೇಶ,ಮೀನುಗಾರಿಕೆ, ತೆಂಗಿನ ಮರ ಹೀಗೆ ಹತ್ತಾರು ವಿಚಾರಗಳನ್ನು ಚಿತ್ರಿಸುವ ಮೂಲಕ ಹಳೆಯ ಫಿಯೇಟ್ ವನ್ನು ನಮ ಜಿಗ್ಗ ಆಗಿ ಬದಲಾಯಿಸಿದ್ದಾರೆ.

ಅಂದಹಾಗೆ ಮಿಹಿಕಾ ಎಂದರೆ ಅಸ್ಸಾಮೀ ಹೆಸರು. ಇದರ ಅರ್ಥ ಮುಂಜಾನೆಯ ಇಬ್ಬನಿಯಲ್ಲಿರುವ ನೀರಿನ ಬಿಂದುವಂತೆ ಮಿಹಿಕಾ ಅಜ್ಜಿ ಅದನ್ನು ಇಟ್ಟದ್ದು ಮಿಹಿಕಾ ಹೆಸರು ಮಾತ್ರ ಅಸ್ಸಾಮೀ ಆದರೆ ಮಿಹಿಕಾ ಪಕ್ಕ ತುಳುನಾಡಿನ ಪೊಣ್ಣು.

ಕುಡ್ಲದಲ್ಲಿ ಯಕ್ಷಗಾನ ಕಲಾವಿದರು ಓಡಿದರು !

ಮಂಗಳೂರಿನ ಮಂಗಳಾ ಕ್ರೀಡಾಂಗಣ ಯಕ್ಷಗಾನ ಕಲಾವಿದರಿಂದ ತುಂಬಿ ಹೋಗಿತ್ತು. ದ.ಕ, ಉಡುಪಿ, ಉ.ಕ. ಕಾಸರಗೋಡಿನ ಹೆಚ್ಚಿನ ಎಲ್ಲ ಮೇಳಗಳ ಹಿಮ್ಮೇಳ ಹಾಗೂ ಮುಮ್ಮೇಳ ಕಲಾವಿದರಿದ್ದರು.

ಅಲ್ಲಿ ಯಕ್ಷಗಾನವಿರಲಿಲ್ಲ ಬದಲಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇಳಗಳ ಯಕ್ಷಗಾನ ಕಲಾವಿದರಿಗೆ ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆಗೊಂಡಿದೆ.

24 ಮೇಳಗಳ ಸದಸ್ಯರು ಕಾಣಿಸಿಕೊಂಡಿದ್ದಾರೆ. ಮಂದಾರ್ತಿ ಮೇಳ (ಎ)(ಬಿ), ಸಾಲಿಗ್ರಾಮ, ಕಟೀಲಿನ 6 ಮೇಳ, ಬಪ್ಪನಾಡು, ಸಸಿಹಿತ್ಲು , ಎಡನೀರು, ಕೂಡ್ಲು, ಮಲ್ಲ, ಕುತ್ಯಾಳ, ಬೆಂಕಿನಾಥೇಶ್ವರ ಮೇಳ, ಸುಂಕದಕಟ್ಟೆ ಮೇಳ, ಸೌಕೂರು, ಅಮೃತೇಶ್ವರಿ ಕೋಟ, ಮಾರಣಕಟ್ಟೆ ಮೇಳ, ಗೋಳಿಗರಡಿ,ಹಿರಿಯಡ್ಕ, ಮಡಾಮಕ್ಕಿ, ಧರ್ಮಸ್ಥಳ ಮೇಳಗಳ ಕಲಾವಿದರು ಭಾಗವಹಿಸಿದ್ದರು.

ಓಟ, ಉದ್ದಜಿಗಿತ, ಗುಂಡು ಎಸೆತ, ಬಾಂಬ್ ಇನ್‌ದ ಸಿಟಿ, ಸಂಗೀತ ಕುರ್ಚಿ, ರಿಲೇ, ಕ್ರಿಕೆಟ್, ಹಗ್ಗಜಗ್ಗಾಟ ಮೊದಲಾದ ಆಟಗಳಿದ್ದವು. ಸುಮಾರು 400 ಮಂದಿ ಕಲಾವಿದರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರಾದ ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ಯಕ್ಷಗಾನ ಕಲಾವಿದರು ಪಾಲ್ಗೊಂಡಿದ್ದರು.