Tagged: world cup

ಕುಡ್ಲದ ಹುಡುಗನ ಭರ್ಜರಿ ಸೆಂಚುರಿಯಾಟ

ಮಂಗಳೂರಿನ ಹುಡುಗ ಕಣ್ಣನೂರು ಲೋಕೇಶ್ ರಾಹುಲ್ ವಿಶ್ವ‌ಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 111 ರನ್ ಗಳನ್ನು ಸಿಡಿಸುವ ಮೂಲಕ ವಿಶ್ವ ಕಪ್ ನಲ್ಲಿ ತನ್ನ ಮೊದಲ ಶತಕ ದಾಖಲಿಸಿಕೊಂಡರು. ಅವರು ಬೇಸಿಕಲಿ ಮಂಗಳೂರಿನ ಸುರತ್ಕಲ್ ಎನ್ಐಟಿಕೆಯಲ್ಲಿ ಪ್ರೊಫೆಸರ್ ಆಗಿದ್ದ ಕೆ.ಎನ್. ಲೋಕೇಶ್ ಅವರ ಪುತ್ರ. ಸುರತ್ಕಲ್ ಎನ್ಐ ಟಿಕೆಯ ಕ್ರಿಕೆಟ್ ಮೈದಾನದಲ್ಲಿ ಆಡಿದ ಹುಡುಗ ಕೆ.ಎಲ್.ರಾಹುಲ್ ಶತಕದ ಮೂಲಕ ವಿಶ್ವಕಪ್ ನಲ್ಲಿ ಭಾರತಕ್ಕೆ ಗೆಲುವಿನ ದಡ ಸೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಎಂಕ್ಲೆಗ್ ಸೆಂಚುರಿ ಬೋಡು?

ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಮ್ಯಾಂಚೆಸ್ಟರ್ ಸ್ಟೇಡಿಯಂನಲ್ಲಿ ತುಳು ಡೈಲಾಗ್ ಕೇಳಿ ಬಂದಿದೆ. ಪಂದ್ಯ ನೋಡಲು ಬಂದ ಮಂಗ ಳೂರಿನ ಇಬ್ಬರು ಗ್ಯಾಲರಿಯಲ್ಲಿ ಕೂತು ರಾಹುಲ್ ಅವರನ್ನು ಉಲ್ಲೇ ಖೀಸಿ ತುಳುವಿನಲ್ಲೇ ಮಾತನಾಡಿ ಸಂಭ್ರಮಿಸಿದ್ದಾರೆ.

ಮಲೇಶ್ಯದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಮಂಗಳೂರಿನ ಕದ್ರಿಯ ರೋಹನ್ ಶೆಟ್ಟಿ ಮತ್ತು ಉರ್ವಾದ ಸುಶಾಂತ್ ಅವರು ಕ್ರಿಕೆಟ್ ವೀಕ್ಷಣೆಗೆ ಮ್ಯಾಂಚೆಸ್ಟರ್‌ಗೆ ತೆರಳಿದ್ದರು. ಡೀಪ್ ಸ್ಕೆ ರ್‌ಲೆಗ್ ಸ್ಟಾಂಡ್‌ನಲ್ಲಿ ಕ್ರಿಕೆಟ್ ವೀಕ್ಷಿಸುವಾಗ ಅಲ್ಲೇ ಕೂಗಳತೆ ದೂರದಲ್ಲಿ ರಾಹುಲ್ ಅವರು ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ರಾಹುಲ್ ಕೂಡ ಮಂಗಳೂರಿನವರಾದ್ದರಿಂದ ಅವರನ್ನು ಉಲ್ಲೇಖೀಸಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ.

ರಾಹುಲ್ ಎಂಚ ಉಲ್ಲರ್ .. ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು .. ಎಂಕ್ಲ್ ಕುಡ್ಲಡ್ದ್ ಬೈದ’ (ರಾಹುಲ್ ಹೇಗಿದ್ದೀರಿ, ರಾಹುಲ್ ನಮಗೆ ನಿಮ್ಮ ಶತಕ ನೋಡಬೇಕು .. ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ರೋಹನ್ ಶೆಟ್ಟಿ ಅವರು ರಾಹುಲ್ ಅವರಿಗೆ ಕೇಳುವಂತೆ ಹೇಳಿದ್ದಾರೆ. ಸುಶಾಂತ್ ಅವರು ವೀಡಿಯೊ ಮಾಡಿದ್ದಾರೆ. ಇವರ ಮಾತು ಕೇಳಿದ ರಾಹುಲ್ ಇವರತ್ತ ಕೈ ಬೀಸಿದ್ದಾರೆ.