Tagged: village

ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ

ಮಂಗಳೂರಿನ ಹರೇಕಳದ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇಡೀ ತುಳುನಾಡಿಗೆ ಮಾತ್ರವಲ್ಲ ಇಡೀ ಕರ್ನಾಟಕ ಇದು ಹೆಮ್ಮೆಯ ವಿಚಾರ.
ಅಂದಹಾಗೆ ಇವರು ಕೋಟ್ಯಾಧಿಪತಿಯಲ್ಲ. ಉನ್ನತ ವಿದ್ಯಾಭ್ಯಾಸವಂತೂ ಅವರಿಗೆ ದೂರದ ಬೆಟ್ಟವಾದರೂ ಪಕ್ಕಾ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹಾಜಬ್ಬನವರು ತಮ್ಮ ಜೀವನ ಸುಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು.

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 150 ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸು ಕಂಡ ಅವರು ತನ್ನೂರಾದ ಹರೇಕಳ ನ್ಯೂಪಡು ಎಂಬ ಪುಟ್ಟ ಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ಕೊನೆಗೂ ಪ್ರಾಥಮಿಕ ಶಾಲೆಗೆ ಅನುದಾನ ತಂದು ಕೊಡುವ ಕೆಲಸದಲ್ಲಿ ಯಶಸ್ಸು ಪಡೆದವರು.
ವಿಶೇಷ ಎಂದರೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಹಾಜಬ್ಬ ಅವರನ್ನು ಆಯ್ಕೆ ಮಾಡಿದ ನಂತರ ಅವರು ನಾನಾ ಇಲಾಖೆಗಳಿಗೆ ಭೇಟಿ ಕೊಟ್ಟು ಅನುದಾನ ಕೊಡುವ ತನಕನೂ ಅಲ್ಲಿಂದ ಕದಲದೇ ಅಧಿಕಾರಿಗಳು ಕೊನೆಗೆ ಅನುದಾನ ಮಂಜೂರು ಮಾಡುವಂತಹ ಸ್ಥಿತಿಗೆ ತಂದು ಬಿಟ್ಟಿದ್ದರು. ನಿಜವಾಗಿಯೂ ಅವರ ಹೋರಾಟದ ಬದುಕು ಈಗ ಜಗತ್ತು ಅರಿತಿದೆ.

ಕುಡುಪು, ಕುಕ್ಕೆ, ಮಂಜೇಶ್ವರ ದೇವಳದಲ್ಲಿ ನಾಗರ ಪಂಚಮಿಗೆ ಯಾಕೆ ವಿಶೇಷ?

ಮಂಗಳೂರಿನ ಕುಡುಪು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಜತೆಯಲ್ಲಿ ಮಂಜೇಶ್ವರದ ಅನಂತೇಶ್ವರ ದೇವಸ್ಥಾನ ಮೂರು ದೇವಳದಲ್ಲಿ ನಾಗರ ಪಂಚಮಿ ಎಂದಾಕ್ಷಣ ಬಹಳಷ್ಟು ವಿಶೇಷತೆಗಳಿರುತ್ತದೆ. ಈ ಮೂರು ದೇವಳಗಳು ಕೂಡ ನಾಗನಿಗೆ ವಿಶಿಷ್ಟವಾದ ಸ್ಥಾನಮಾನವಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಎಂಬ ಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯ ನೆಲೆಸಿದೆ. ಸರ್ಪ ದೋಷ ನಿವಾರಣೆಗಾಗಿ ಈ ದೇವಾಲಯ ದೇಶದಲ್ಲೆ ಪ್ರಖ್ಯಾತವಾಗಿದೆ. ದೇಶದ ನಾನಾ ಮೂಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸರ್ಪ ದೋಷದಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸರ್ಪಗಳ ದೇವರಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ದೇವತೆಯಾಗಿ ಪೂಜಿಸಲಾಗುತ್ತದೆ. ಸರ್ಪ ದೇವತೆಗಳಾದ ವಾಸುಕಿ ಮತ್ತು ಶೇಷ ನಾಗ ಪ್ರಮುಖ.

ಕುಡುಪು ಶ್ರೀ ಅನಂತ ಪದ್ಮನಾಭ ದೇವಳ ಸರ್ಪ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಕರಾವಳಿಯ ಪ್ರಮುಖ ನಾಗ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಗರ ಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳೆಲ್ಲವನ್ನೂ ಮಂಜೇಶ್ವರ ಶ್ರಿಮದ್‌ ಅನಂತೇಶ್ವರ ದೇವಸ್ಥಾನದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ವಿಷ್ಣು, ಈಶ್ವರ ಹಾಗೂ ನಾಗ ದೇವರ ಸಾನಿಧ್ಯವಿದೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಧಾನ ಆಚರಣೆಗಳು.