Tagged: vegitables

ಪರಿಸರದೊಂದಿಗೆ ಪ್ರೀತಿಯ ಸ್ವಾತಂತ್ರ್ಯ ಆಚರಿಸಿ

ಪರಿಸರ ಹಾಗೂ ಸ್ವಾತಂತ್ರ್ಯಕ್ಕೆ ಎಲ್ಲಿಂದ ಎಲ್ಲಿ ಸಂಬಂಧ ಅಂದುಕೊಳ್ಳಬೇಡಿ. ಮಕ್ಕಳು ಕೈಯಲ್ಲಿ ಪ್ಲಾಸ್ಟಿಕ್ ಬಾವುಟ ಹಿಡಿದುಕೊಂಡು ಪರಿಸರಕ್ಕೆ ಹಾನಿ ಮಾಡುವುದು ಪ್ರತಿ ವರ್ಷನೂ ನಡೆದುಕೊಂಡು ಬರುವ ವಿಚಾರ. ಆದರೆ ಈ ಬಾರಿಯಂತೂ ಪರಿಸರದ ಜತೆಯಲ್ಲಿ ಸ್ವಾತಂತ್ರ್ಯವನ್ನು ಆಚರಿಸಲು ಪಕ್ಷಿಕರೆಯ ನಿತಿನ್ ವಾಸ್ ಸೂಪರ್ ಐಡಿಯಾ ನೀಡಿದ್ದಾರೆ ಅದನ್ನು ಫಾಲೋ ಮಾಡಿಕೊಂಡು ಹೋದರೆ ಬಾವುಟದಲ್ಲೂ ಗಿಡ ಬೆಳೆಸಬಹುದು.
ಹಳೆಯ ರದ್ದಿ ಪೇಪರ್‌ಗಳನ್ನು ಸಂಗ್ರಹಿಸಿ ಹಳೆಯ ವಿಧಾನಗಳನ್ನು ಬಳಸಿ ಹೊಸದಾಗಿ ಪೇಪರ್ ತಯಾರಿಸಿ ಇದರಿಂದ ಆಮಂತ್ರಣ ಪತ್ರಿಕೆ, ಬುಕ್ ಪ್ಯಾಡ್, ಜುವೆಲ್ಲರಿ ಬಾಕ್ಸ್, ಡಿಸೈನ್ ಬೌಲ್, ವಿಗ್ರಹಗಳು, ಪೆನ್‌ಸ್ಟ್ಯಾಂಡ್, ಪೆನ್ಸಿಲ್, ಪೆನ್ ಮತ್ತಿತರ ವಸ್ತುಗಳನ್ನು ತಯಾರಿಸುತ್ತಾರೆ. ಬಳಕೆಯ ನಂತರ ಪೇಪರ್ ತಯಾರಿಸುವಾಗ ಅದಕ್ಕೆ ನಾನಾ ಜಾತಿಯ ಹೂವಿನ ಗಿಡಗಳ ಹಾಗೂ ತರಕಾರಿ ಬೀಜಗಳನ್ನು ಅಳವಡಿಸುತ್ತಾರೆ. ಇವುಗಳನ್ನು ಮಣ್ಣಲ್ಲಿ ಹಾಕಿದರೆ ಮೊಳಕೆ ಒಡೆದು ನಾನಾ ಜಾತಿಯ ಹೂ, ತರಕಾರಿ ಗಿಡಗಳಾಗಿ ಬೆಳೆಯುತ್ತದೆ.

ಮಾರುಕಟ್ಟೆಯಲ್ಲಿ ಯಾಕೆ ಈಗ ರೇಟ್ ಏರುತ್ತಿದೆ ?

ಮಾರುಕಟ್ಟೆಯೊಳಗೆ ತರಕಾರಿ ರೇಟು ಕೂಡ ಏರಿಕೆಯಾಗುತ್ತಿದೆ. ಮುಖ್ಯವಾಗಿ ಬೀನ್ಸ್ ಕೆಜಿವೊಂದಕ್ಕೆ 60 ರೂ ಇದ್ದದ್ದು ಈಗ ಭರ್ತಿ 120-130ರೂಗೆ ತಲುಪಿದೆ. ಅಲಸಂಡೆ ಕೂಡ ಬೇಡಿಕೆ ಜಾಸ್ತಿ ಇದ್ದರೂ ಪೂರೈಕೆ ಸರಿಯಾಗಿ ನಡೆಯದ ಪರಿಣಾಮ 50 ರೂ ನಿಂದ 90 ರೂ.ಗೆ ಎರಡು ದಿನಗಳಲ್ಲಿ ಜಿಗಿತ ಕಂಡಿದೆ.
ಕಾಯಿ ಮೆಣಸು, ನೀರುಳ್ಳಿ, ಟೊಮೆಟೋ ಹೀರೆಕಾಯಿ, ಸ್ಥಳೀಯ ಬೆಂಡೆಗೂ ರೇಟು ಏರುಗತಿಯಲ್ಲಿದೆ. ಸ್ಥಳೀಯ ತರಕಾರಿಗಳಾದ ಬಸಳೆ ಹಾಗೂ ಅರಿವೆ ಸೊಪ್ಪಿನ ಪೂರೈಕೆ ಬೇಡಿಕೆಯಷ್ಟು ಇರುವ ಪರಿಣಾಮ ರೇಟು ಏರಿಕೆ ಕಂಡಿಲ್ಲ. ಇದರ ಜತೆಗೆ ಬಿಸಿಲಿಗೆ ಹೆಚ್ಚಾಗಿ ತರಕಾರಿ ಕಡೆಗೆ ಜನರು ಹೆಚ್ಚಿನ ಒಲವು ಹಾಗೂ ಮದುವೆ ಸಮಾರಂಭಗಳು ಕೂಡ ಇರುವುದರಿಂದ ಈ ತರಕಾರಿಗಳ ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ ಎನ್ನುವುದು ಅವರ ಮಾತು. ಜತೆಗೆ ಹಣ್ಣು ಹಂಪಲು ದರದಲ್ಲೂ ಏರಿಕೆ ಕಾಣಿಸಿಕೊಂಡಿದೆ.
*ಮಾಂಸಹಾರಿಗಳಿಗೆ ಬರೆ:* ಬ್ಲಾಯರ್ ಕೋಳಿಯ ರೇಟು ಕೆಲವು ದಿನಗಳಿಂದ ಕೆಜಿವೊಂದಕ್ಕೆ 145 ರೂ.ನಲ್ಲಿ ಸಾಗುತ್ತಿದೆ. ಟೈಸನ್‌ಗೂ ಕೆಜಿವೊಂದಕ್ಕೆ 150 ರೂ.ಕಡೆಗೆ ಸಾಗಿದೆ. ಮುಖ್ಯವಾಗಿ ಏಪ್ರಿಲ್ ತಿಂಗಳಲ್ಲಿ ಮದುವೆ ಸಮಾರಂಭಗಳು ಜಾಸ್ತಿಯಾಗಿರುವುದರಿಂದ ಕೋಳಿ ಉದ್ಯಮ ಕೂಡ ಚುರುಕುಗೊಂಡಿದೆ. ಮತ್ತೊಂದೆಡೆ ಬನ್ನೂರು ಕುರಿಯ ದರವಂತೂ ನಿಂತಲ್ಲೇ ನಿಂತು ಉದಾಹರಣೆಗಳು ಇಲ್ಲ.
ಬನ್ನೂರು ಕುರಿಗೆ ಕೆಜಿಗೆ ಈಗ 620 ರೂ. ಇದ್ದರೆ ಆಡಿನ ಮಾಂಸಕ್ಕೆ 440 ರೂ ತಲುಪಿದೆ. ಇದರ ಜತೆಗೆ ಮೀನಿನ ದರದಲ್ಲೂ ಸಾಕಷ್ಟು ದರ ಏರಿದೆ. ಆಂಜಲ್ ಈಗ ಕೆಜಿಗೆ 1 ಸಾವಿರ ದಾಟಿದರೆ ಬೂತಾಯಿ ರೇಟು ಬಂಗುಡೆ ಮೀನಿಗಿಂತ ಜಾಸ್ತಿ.