Tagged: urwa

ಮಣ್ಣಗುಡ್ಡೆಯ ಗುರ್ಜಿಗೆ 150ರ ಸಂಭ್ರಮ

ಮಂಗಳೂರಿಗೆ ಬರುವ ಮಂದಿಗೆ ಗುರ್ಜಿಯ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ಮಂಗಳೂರಿನ ಮಂಗಳಾದೇವಿ, ಉರ್ವಸ್ಟೋರ್, ಉರ್ವ ಮಾರ್ಕೆಟ್, ಬಳ್ಳಾಲ್ ಬಾಗ್ ಹಾಗೂ ಮಣ್ಣಗುಡ್ಡೆ‌ ಇಲ್ಲಿ ಪ್ರತಿ ವರ್ಷ ಗುರ್ಜಿ ಸಂಭ್ರಮ ನಡೆಯುತ್ತದೆ. ವಿಶೇಷವಾಗಿ ಮಣ್ಣಗುಡ್ಡೆ ಗುರ್ಜಿಗೆ 150 ವರ್ಷ ತುಂಬಿದೆ.

ಇದರ ವಿಶೇಷತೆ ಏನೂ ಅಂದರೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ರೋಚಕವಾದುದು. ಭಕ್ತಿಗೆ ದೇವರು ಒಲಿಯುತ್ತಾನೆ ಎನ್ನುವುದಕ್ಕೆ ಮಣ್ಣಗುಡ್ಡೆ ಗುರ್ಜಿ ಆರಂಭವಾದ ಕಥೆ ಸಾಕ್ಷಿ. ಏನಿದು ಇತಿಹಾಸ ಮುಂದೆ ಓದಿ…

ಗುರ್ಜಿ ಅಂದ್ರೆ ಚಲಿಸದ ರಥ ಎಂದರ್ಥ. ರಥದಂತೆ ಶೃಂಗರಿಸಿದ ತಾತ್ಕಾಲಿಕ ದೇವರ ಕಟ್ಟೆ ಇದು. ಮಣ್ಣಗುಡ್ಡೆ ಗುರ್ಜಿ ಆರಂಭಿಸಿದವರು ಕೋಟೇಶ್ವರ ಬ್ರಾಹ್ಮಣ ಮನೆತನದ ಹಿರಿಯ ವಾದಿರಾಜರು. ಕುಲೋದ್ಧಾರಕ ಇಲ್ಲದ ಚಿಂತೆಯಿಂದ ಶರವು ಮಹಾಗಣಪತಿಯನು ಪ್ರಾರ್ಥಿಸಿ ಪುತ್ರ ಸಂತಾನ ಕರುಣಿಸಿದರೆ ಪ್ರತಿ ವರ್ಷ ತಮ್ಮ ಮನೆಗೆ ಕರೆಸಿ ದೀಪಾರಾಧನೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು.

ಅದರಂತೆ ದೇವರು ಆಶೀರ್ವಾದ ಮಾಡಿದ್ದಾರೆ. 1870ನೇ ಇಸವಿಯಲ್ಲಿ ಇಷ್ಟಾರ್ಥ ಸಿದ್ದಿ ನೆರವೇರಿಸಿದ ಶ್ರೀ ಶರವು ಮಹಾಗಣತಿಗೆ ಕದ್ರಿ ಕಂಬ್ಳದಲ್ಲಿದ್ದ ಮನೆಯಲ್ಲಿ ಉತ್ಸವ ಆರಂಭಿಸಿದರು. ಕ್ರಮೇಣ ಮಂಗಳೂರಿನ ಪ್ರಮುಖ ಧಾರ್ಮಿಕ ದೀಪಾರಾಧನೆ ಉತ್ಸವವಾಯಿತು. ಈ ಬಾರಿ 2019ನೇ ನವೆಂಬರ್ 24ರಂದು ಮಣ್ಣಗುಡ್ಡೆ ಗುರ್ಜಿ 150ನೇ ವರ್ಷವನ್ನು ಆಚರಿಸುತ್ತಿದೆ.

ಆಹಾರ ಪಾರ್ಸೆಲ್ ಗೆ ಕುಡ್ಲದ ಹುಡುಗಿಯರ ಲಗ್ಗೆ

ಕುಡ್ಲದಲ್ಲಿ ಆಹಾರ ಪಾರ್ಸೆಲ್ ಅಥವಾ ಫುಡ್ ಡೆಲಿವರಿ ವ್ಯಾಪಾರ ಸಿಕ್ಕಾಪಟ್ಟೆ ಜೋರಾಗಿ ನಡೆಯುತ್ತಿದೆ ಅದರಲ್ಲೂ ಮೆಟ್ರೋಪಾಲಿಟನ್ ಸಿಟಿಯಲ್ಲಿ ಈಗಾಗಲೇ ಹುಡುಗರ ಜತೆಯಲ್ಲಿ ಹುಡುಗಿಯರು ಕೂಡ ಫುಡ್ ಡೆಲಿವರಿ ವ್ಯವಸ್ಥೆ ಯೊಳಗೆ ಬಂದು ನಿಂತಿದ್ದಾರೆ ಕುಡ್ಲದ ಲ್ಲೂ ಈಗ ಡೆಲಿವರಿ ಬಾಯ್ಸ್ ಜತೆಯಲ್ಲಿ ಡೆಲಿವರಿ ಗರ್ಲ್ಸ್ ಕೂಡ ಸೇರಿಕೊಳ್ಳುತ್ತಿದ್ದಾರೆ.

ಒಂದು ಲೆಕ್ಕದ ಪ್ರಕಾರ ಮೂರು ಮಂದಿ ಹುಡುಗಿಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ಉರ್ವದ ಮೇಘನಾ ಕೂಡ ಒಬ್ಬರು. ಅವರು ಬೇಸಿಕಲಿ ಬಿಎ ಸಾಹಿತ್ಯ ಓದಿದವರು ವಿದೇಶದಲ್ಲಿ ದುಡಿದು ಬಂದವರು ಆದರೂ ಈ ಫುಡ್ ಡೆಲಿವರಿ ಗರ್ಲ್ಸ್ ವ್ಯವಸ್ಥೆ ಯ ಪಾತ್ರವಾಗಬೇಕೆಂದು ಮುಂದೆ ಬಂದಿದ್ದಾರೆ. ಹುಡುಗಿಯರು ಯಾವುದಕ್ಕೂ ಕಮ್ಮಿ ಇಲ್ಲ ಎನ್ನುಎನ್ನುವುದಕ್ಕೆ ಇದೊಂದು‌ ಉತ್ತಮ ಸ್ಯಾಂಪಲ್ ಎನ್ನಲು ಯಾವುದೇ ಅಡ್ಡಿ ಮಾತು ಇಲ್ಲ.