ಕರಾವಳಿಗೆ ಹುಲಿವೇಷ ಹೊಸತು ಏನೂ ಅಲ್ಲ. ಆದರೆ ಅಷ್ಟಮಿಗೆ ಇಲ್ಲಿನ ವಿದ್ಯಾರ್ಥಿಗಳೇ ಹುಲಿವೇಷ ಹಾಕಿಕೊಂಡು ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ಹೊಸ ದಾಖಲೆಯನ್ನು ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದಾರೆ. ಹೌದು. ಇದು ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮಾತು.
Tagged: tigerdance
ಪಿಲಿವೇಷ ಎಂದರೆ ಅದು ಕುಡ್ಲದವರಿಗೆ ಮಾತ್ರ ಗೊತ್ತು
ಯಾರೇ ಏನೇ ಹೇಳಿದ್ರು ಪಿಲಿವೇಷ ವಿಚಾರದಲ್ಲಿ ಕುಡ್ಲದ ಮಂದಿಯನ್ನು ಮೀರಿಸುವವವರಿಲ್ಲ ಹುಲಿವೇಷ ಎಂದಾಗ ಕರಾವಳಿ ಜನರ ಜೀವ ಕಲೆ ಎಂದೇ ಕರೆಯಲಾಗುತ್ತದೆ. ಇದೇ ಕಾರಣದಿಂದ ಮಂಗಳೂರಿನ ಪಿಲಿ ಕುಲ ಎನ್ನುವ ಪ್ರದೇಶಕ್ಕೆ ಹುಲಿಗಳಿಂದಾಗಿ ಹೆಸರು ಬಂತು.
ಬಹಳ ಹಳೆಯ ಕಾಲದಲ್ಲಿ ಪಿಲಿ ಎಂದರೆ ತುಳುವಿನಲ್ಲಿ ಹುಲಿ ಕುಲ ಎಂದರೆ ಕೆರೆ ಎಂದು ಅರ್ಥ ಕೊಡುತ್ತದೆ ಈ ಹಿಂದೆ ಹುಲಿಗಳು ನೀರು ಕುಡಿಯಲು ಕೊಳ ಅಥವಾ ಕೆರೆ ಕಡೆಗೆ ಬರುವುದರಿಂದ ಇದಕ್ಕೆ ಪಿಲಿ ಕುಳ ಎಂದು ತುಳು ಜನರು ಹೆಸರು ಕೊಟ್ಟರು ಈಗ ಪಿಲಿ ಕುಳ ಎಂದರೆ ನಿಸರ್ಗ ಧಾಮವಾಗಿ ಬದಲಾಗಿದೆ. ಅಂದಹಾಗೆ ಜುಲೈ 29 ವಿಶ್ವ ಹುಲಿಗಳ ದಿನ. ಹುಲಿ ಸಂತತಿ ನಾಶದತ್ತ ಸಾಗುತ್ತಿದ್ದರೂ ಕರಾವಳಿಯಲ್ಲಿ ಹುಲಿವೇಷದ ರಂಗು ಪ್ರತಿ ಸಲನೂ ಏರುತ್ತಿದೆ.